ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಅರಂತೋಡಿನ ಸುಶ್ಮಿತಾ ಬಿ.ಎಸ್.ಎಫ್. ಗೆ ಆಯ್ಕೆ | ಭಾರತೀಯ ಸೇನೆಯ ಗಡಿ ರಕ್ಷಣಾ ಪಡೆಗೆ ಆಯ್ಕೆಯಾದ ಸುಳ್ಯದ ಯುವತಿ

Picture of Savistara

Savistara

Bureau Report

ಅತ್ಯುತ್ತಮ ತರಬೇತಿಯ ಮೂಲಕ ಭಾರತೀಯ ಸೇನೆಗೆ ಗ್ರಾಮೀಣ ಪ್ರದೇಶದ ಯುವಕ ಯುವತಿಯರು ನಿರಂತರವಾಗಿ ಸೇರ್ಪಡೆಗೊಳ್ಳಲು ಕಾರಣವಾಗಿರುವ ಕರಾವಳಿ ಭಾಗದ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ನಿರಂತರವಾಗಿ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಪ್ರಯತ್ನಿಸುತ್ತಾ ಅಂತಿಮವಾಗಿ ಭಾರತೀಯ ಗಡಿ ರಕ್ಷಣಾ ಪಡೆ ( BSF )ಗೆ ಸಿಬ್ಬಂದಿ ನೇಮಕಾತಿ ಆಯೋಗ ( SSC )ನಡೆಸಿದ ಪರೀಕ್ಷೆಯಲ್ಲಿ ಸುಶ್ಮಿತಾ ಆಯ್ಕೆಯಾಗಿದ್ದಾರೆ.ಇವರು ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರಪಣೆಯ ನಾಗಪ್ಪ ಎಂ.ಎ. ಹಾಗೂ ಜಾನಕಿ ದಂಪತಿಗಳ ಪುತ್ರಿ. ಇವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ, ಸರಕಾರಿ ಪ್ರೌಢಶಾಲೆ ಮರ್ಕಂಜ, ಎನ್ಎಂಸಿ ಪಿ.ಯು ಅರಂತೋಡು, ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯಾಗಿರುತ್ತಾರೆ. ಇವರು ಆಯ್ಕೆಯಾಗುವ ಮೂಲಕ ವಿದ್ಯಾಮಾತಾದ ಸಾಧನೆಯ ಮುಕುಟಕ್ಕೆ ಗರಿಯೊಂದು ಸೇರಿದೆ.ನಿರಂತರವಾಗಿ ಪ್ರತಿ ವರ್ಷ ಗ್ರಾಮೀಣ ಪ್ರದೇಶದ ನೂರಾರು ಯುವಕ ಯುವತಿಯರು ಭಾರತೀಯ ಸೇನೆಗೆ ಸೇರಬೇಕೆಂಬ ನಮ್ಮ ಕನಸು ಈ ಮೂಲಕ ನೇರವೇರುತ್ತಿದೆ ಎನ್ನಬಹುದು. ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆ ಆಗಿರುವುದಕ್ಕೆ ವಿದ್ಯಾಮಾತಾ ಅಕಾಡೆಮಿ ತರಬೇತಿದಾರರು, ಹಿತೈಷಿಗಳು ಹಾಗೂ ವೈಯಕ್ತಿಕ ನೆಲೆಯಲ್ಲಿ ಸುಶ್ಮಿತಾಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಕಳೆದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ತರಬೇತಿ ಬ್ಯಾಚಿನಲ್ಲಿ ನಮ್ಮಲ್ಲಿ ತರಬೇತಿ ಪಡೆದುಕೊಂಡಿದ್ದು, ನಿರಂತರ ಅವರ ಪರಿಶ್ರಮವಿಂದು ಫಲ ನೀಡಿದೆ. ಎಂದು ವಿದ್ಯಾಮಾತಾ ಅಕಾಡೆಮಿ ಆಡಳಿತ ನಿರ್ದೇಶಕರು ಭಾಗ್ಯೇಶ್ ರೈ ತಿಳಿಸಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!