ಕಾಂಗ್ರೆಸ್‌ ಕಾರ್ಯಕರ್ತರು, ನಾಯಕರು ಕ್ಷಮಿಸಿ – RSS ಗೀತೆ ಹಾಡಿದ್ದಕ್ಕೆ ಕ್ಷಮೆಯಾಚನೆ ಮಾಡಿದ ಡಿಕೆ ಶಿವಕುಮಾರ್!

Picture of Savistara

Savistara

Bureau Report

ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೆ ಡಿಕೆ ಶಿವಕುಮಾರ್ ಕ್ಷಮೆಯಾಚನೆ ಮಾಡಿದ್ದಾರೆ. ನನ್ನಿಂದ ಯಾರಿಗೇ ಆಗಲಿ ನೋವಾಗಿದ್ದರೆ ಕ್ಷಮೆ ಎಂದಿದ್ದಾರೆ. ಇನ್ನು ಬಿಕೆ ಹರಿಪ್ರಸಾದ್‌ ಸೇರಿದಂತೆ ಹಲವು ನಾಯಕರು ಡಿಕೆ ಶಿವಕುಮಾರ್ ನಡೆಗೆ ಬೇಸರ ವ್ಯಕ್ತಪಡಿಸಿದ್ದರು.

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕ್ಷಮೆಯಾಚನೆ ಮಾಡಿದ್ದಾರೆ. ಆರ್‌ಎಸ್‌ಎಸ್‌ ಗೀತೆಯು ಕಾಂಗ್ರೆಸ್‌ನಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದ್ದು, ಹಲವು ನಾಯಕರು ಖಂಡಿಸಿದ್ದರು.

ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಬೆಳಗ್ಗೆ ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ” ಆರ್‌ಎಸ್‌ಎಸ್‌ ಗೀತೆ ವಿಚಾರದಲ್ಲಿ ನನ್ನಿಂದ ಯಾರಿಗೇ ಆಗಲಿ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ. ಎಲ್ಲರ ಬಳಿಯೂ ಕ್ಷಮೆ ಕೇಳುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಒಂದು ವೇಳೆ ತಪ್ಪು ಮಾಡಿದ್ದೇನೆ ಎಂದು ನೀವು ಭಾವಿಸಿದ್ದರೆ ಕ್ಷಮೆ ಇರಲಿ. ಎಲ್ಲ ಕಾಂಗ್ರೆಸ್ ನಾಯಕರ, ಕಾರ್ಯಕರ್ತರ, ಇಂಡಿಯಾ ಒಕ್ಕೂಟದ ನಾಯಕರ ಬಳಿಯೂ ಕ್ಷಮೆ ಕೇಳುತ್ತೇನೆ ” ಎಂದರು.

ಈ ವಿಚಾರವನ್ನು ಇಲ್ಲಿಗೆ ಮುಗಿಸೋಣಈ ಬಗ್ಗೆ ಒಂದು ವಿಚಾರ ಸ್ಪಷ್ಟ ಇರಲಿ. ಹೈಕಮಾಂಡ್ ಸೇರಿದಂತೆ ಯಾರೂ ನನ್ನನ್ನು ಪ್ರಶ್ನೆ ಮಾಡಿಲ್ಲ. ಈ ವಿಚಾರ ಇಲ್ಲಿಗೆ ಮುಗಿಸೋಣ. ನನ್ನ ಮತ್ತು ಕಾಂಗ್ರೆಸ್‌ನ ಸಂಬಂಧವು ಭಕ್ತ ಮತ್ತು ಭಗವಂತನ ನಡುವಿನ ಸಂಬಂಧದಂತೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.ಬಿಹಾರಕ್ಕೆ ಹೋಗಿದ್ದಾಗಲೂ ಆರ್‌ಎಸ್‌ಎಸ್‌ ಗೀತೆ ಬಗ್ಗೆ ಕೇಳಿದರು”ಇತ್ತೀಚೆಗೆ ಚುನಾವಣೆ ಪ್ರಚಾರಕ್ಕೆ ಬಿಹಾರಕ್ಕೆ ಹೋಗಿದ್ದಾಗ ಆರ್‌ಎಸ್‌ಎಸ್‌ ಗೀತೆ ಹಾಡಿದ್ದರ ಬಗ್ಗೆ ಕೇಳಿದರು. ಇನ್ನು ನಮ್ಮ ಪಕ್ಷದ ಹಲವು ಮುಖಂಡರು ಪ್ರಸ್ತಾಪಿಸಿದರು. ಅವರಿಗೆ ನೋವಾಗಿರಬಹುದು. ನನ್ನ ಬಗ್ಗೆ ಮಾತನಾಡುವವ ಕಾಂಗ್ರೆಸ್‌ ನಾಯಕರು ಮೀಡಿಯಾದ ಮುಂದೆ ಮಾತನಾಡುವ ಬದಲು ಬಂದು ನನ್ನನ್ನು ಭೇಟಿ ಮಾಡಿ ಮಾತನಾಡಿ. ಯಾವುದೇ ಸ್ಥಾನ, ಅಂತಸ್ಥಿನ ವ್ಯತ್ಯಾಸ ಇಲ್ಲದೇ ಬಂದು ಹೇಳಿ. ನನ್ನ ಜೀವನ ನಿಮ್ಮ ಬದುಕಿನ ಮೆಟ್ಟಲಾಗಬೇಕು, ಯಾರ ಭಾವನೆಯನ್ನು ನೋವಿಸಲು ಇಷ್ಟವಿಲ್ಲ ” ಎಂದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!