ಕೇರಳ | ಉದ್ಯೋಗ ಖಾತ್ರಿ ನೌಕರರಿಗೆ ಸರ್ಕಾರದಿಂದ ಓಣಂ ಗಿಫ್ಟ್

Picture of Savistara

Savistara

Bureau Report

ತಿರುವನಂತಪುರ: ಕೇರಳ ಸರ್ಕಾರವು ರಾಜ್ಯದ ನಗರ ಮತ್ತುಗ್ರಾಮೀಣ ಭಾಗದ ಉದ್ಯೋಗ ಖಾತ್ರಿ ನೌಕರರಿಗೆ ಓಣಂ ಪ್ರಯುಕ್ತ ವಿಶೇಷ ಸೌಲಭ್ಯ ಒದಗಿಸಿದೆ.

‘ಓಣಂ ಪ್ರಯುಕ್ತ ರಾಜ್ಯದಲ್ಲಿರುವ ಉದ್ಯೋಗ ಖಾತ್ರಿ ನೌಕರರಿಗೆ ತಲಾ ₹ 1,200 ಮೊತ್ತವನ್ನು ಪಾವತಿಸಲಾಗುವುದು. ಕಳೆದ ಬಾರಿ ಪ್ರತಿಯೊಬ್ಬರಿಗೂ ₹ 1,000 ಕೊಡಲಾಗಿತ್ತು. ಈ ಬಾರಿ ₹200 ಜಾಸ್ತಿ ನೀಡಲಾಗುತ್ತಿದೆ. ಇದರಿಂದ ಸುಮಾರು 5,26,000 ಕಾರ್ಮಿಕರಿಗೆ ಸಹಾಯವಾಗಲಿದೆ’ ಎಂದು ಕೇರಳ ಹಣಕಾಸು ಸಚಿವ ಕೆ.ಎನ್‌. ಬಾಲಗೋಪಾಲ್ ತಿಳಿಸಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 100ಕ್ಕೂ ಅಧಿಕ ದಿನ ಕಾರ್ಯನಿರ್ವಹಿಸುತ್ತಿರುವ 5,19,000 ಕಾರ್ಮಿಕರಿಗಾಗಿ ₹ 51.96 ಕೋಟಿ ಹಾಗೂ ಅಯ್ಯಂಕಳಿ ನಗರ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿರುವ 6,368 ಕಾರ್ಮಿಕರಿಗಾಗಿ * 63.68 ಲಕ್ಷ ಹಣವನ್ನು ಮೀಸಲಿಡಲಾಗಿದೆ. ಅವರ ದಿನಗೂಲಿಯನ್ನು ಹೊರತುಪಡಿಸಿ, ಈ ಮೊತ್ತವನ್ನು ಹಬ್ಬದ ಪ್ರಯುಕ್ತ ಅವರಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!