ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

Picture of Savistara

Savistara

Bureau Report

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಸೆ. 21, ಭಾನುವಾರ) ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಾಳೆಯಿಂದಲೇ ಜಾರಿಗೆ ಬರುವ ಸರಕು ಮತ್ತು ಸೇವಾ ತೆರಿಗೆ (GST) ಸುಧಾರಣೆಗಳ ಹಿನ್ನೆಲೆಯಲ್ಲಿ ಈ ಭಾಷಣ ಮಹತ್ವ ಪಡೆದುಕೊಂಡಿದೆ.ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅವರ ಭಾಷಣದ ಕುರಿತ ಅನೇಕ ನಿರೀಕ್ಷೆಗಳು ವ್ಯಕ್ತವಾಗಿದೆ. ಕೆಲವರು ಇದು ಮುಖ್ಯವಾಗಿ GST ಜಾರಿಗೆ ಸಂಬಂಧಿಸಿದ ಸಂದೇಶವೇ ಆಗಿರಬಹುದು ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಅಮೆರಿಕಾದ H-1B ವೀಸಾ, ರಕ್ಷಣಾ ವಿಚಾರಗಳು ಹಾಗೂ ಸ್ವದೇಶಿ ಉತ್ಪನ್ನಗಳ ಪ್ರೋತ್ಸಾಹದ ಬಗ್ಗೆ ಪ್ರಸ್ತಾಪವಾಗಬಹುದು ಎಂದು ಅಂದಾಜು ವ್ಯಕ್ತಪಡಿಸಿದ್ದಾರೆ.ಹಿಂದಿನ ಬಾರಿ ಮೋದಿ ಅವರು ಮೇ ತಿಂಗಳಲ್ಲಿ ಪಹಲ್ಲಾಮ್ ಉಗ್ರಹಲ್ಲೆಯಲ್ಲಿ 26 ಜನರು ಬಲಿಯಾದ ಬಳಿಕ, ಭಾರತ-ಪಾಕಿಸ್ತಾನ ಗಡಿತಣಾವಗಳ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು. ಆ ಸಂದರ್ಭದಲ್ಲಿ ಭಾರತ “ಆಪರೇಶನ್ ಸಿಂದೂರ” ನಡೆಸಿತ್ತು.

ಇದೀಗ ಜಾರಿಗೆ ಬರುವ GST 2.0 ಅಡಿಯಲ್ಲಿ ಹಲವು ವಸ್ತುಗಳ ಮೇಲೆ ತೆರಿಗೆ ದರ ಕಡಿತಗೊಂಡಿದ್ದು, ನವರಾತ್ರಿಯ ಮೊದಲ ದಿನದಿಂದಲೇ ಅಡುಗೆ ಮನೆಯ ಅವಶ್ಯಕ ವಸ್ತುಗಳಾದ ಪನೀರ್, ತುಪ್ಪ, ಕಾಫಿ, ಕ್ಯಚಪ್ ಸೇರಿದಂತೆ ಔಷಧಿಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳು ಸಸ್ತೆಯಾಗಲಿವೆ. ಧನತೇರಸ್ ಸಂದರ್ಭದಲ್ಲಿ ವಾಹನ ಖರೀದಿದಾರರು ವಿಶೇಷ ಲಾಭ ಪಡೆಯಲಿದ್ದಾರೆ, ಏಕೆಂದರೆ ವಾಹನಗಳ ಮೇಲಿನ ತೆರಿಗೆ ದರ ಕಡಿಮೆಯಾಗಿದ್ದು, ಪ್ರಮುಖ ವಾಹನ ಕಂಪನಿಗಳು ಈಗಾಗಲೇ ಬೆಲೆ ಇಳಿಕೆಯನ್ನು ಘೋಷಿಸಿವೆ.ಇಂದು ಮೋದಿ ಯಾವ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಕಾದು ನೋಡಬೇಕಿದೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!