ಪಂಜ:ಸುಳ್ಯ ತಾಲೂಕು ಪಂಜ ಕಾಂಗ್ರೆಸ್ ವಲಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದುಮೂವರು ಪ್ರಮುಖರು ಪಕ್ಷದ ಜವಾಬ್ದಾರಿಗೆ ಕಾಂಗ್ರೆಸ್ ಪಕ್ಷ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ. ಸುಳ್ಯ ಆರಾಧನಾ ಸಮಿತಿ ಸದಸ್ಯ ದಿನೇಶ್ ಪುಂಡಿಮನೆ,ಪಂಜ ವಲಯ ಕಾಂಗ್ರೆಸ್ ಅಧ್ಯಕ್ಷ ಕುಸುಮಧಾರ ಕೆರೆಯಡ್ಕ,ಪಂಜ ವಲಯ ಕಾಂಗ್ರೆಸ್ ಕಾರ್ಯದರ್ಶಿ ಲೋಕನಾಥ್ ಕುದ್ವ ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.ಸುಮಾರು 30 ವರ್ಷ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದೇನೆ. ಆದರೆ ಕಾಂಗ್ರೆಸ್ ಪಕ್ಷದಿಂದ ನನಗೆ ತುಂಬಾ ಅನ್ಯಾಯ ಆಗಿದೆ.

ನಾವು ಹೇಳಿದ ಮಾತಿಗೆ ಸ್ವಲ್ಪವೂ ಬೆಲೆ ಇಲ್ಲ. ನಾವು ನಂಬಿದ ನಾಯಕರೇ ನಮಗೆ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಮನನೊಂದಿ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದೇವೆ ಇನ್ನು ಮುಂದೆ ಪಕ್ಷದ ಯಾವುದೇ ಜವಾಬ್ದಾರಿಯನ್ನು ನಿಭಾಯಿಸುವುದಿಲ್ಲವೆಂದು ತಿಳಿಸಿದ್ದಾರೆಆದರೂ ಮಾತೃ ಪಕ್ಷವಾಗಿರುವ ಕಾಂಗ್ರೆಸ್‌ನ್ನು ಎಂದಿಗೂ ಮರೆಯುವುದಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವೇಳೆ ಪ್ರತಿಕ್ರಿಯೆ ನೀಡಿದ ದಿನೇಶ್ ಪುಂಡಿಮನೆ” 30 ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದೇನೆ ಆದರೆ ನಮ್ಮ ಮಾತಿಗೆ ಪಕ್ಷದಲ್ಲಿ ಬೆಲೆಯಿಲ್ಲ ,ದೇವಸ್ಥಾನ ವಿಚಾರವಾಗಿ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ನಾಯಕರಿಗೆ ಮನವಿ ಮಾಡಿದ್ದೆವು ನಮ್ಮ ಮಾತನ್ನು ಕಡೆಗಣಿಸಿದ್ದಾರೆ.ಕ್ಷೇತ್ರದ ಸೀಮೆ ದೇವಸ್ಥಾನ ಭಕ್ತರ ಭಾವನೆ ಮುಖ್ಯ, ಅದೂ ರಾಜಕೀಯ ಕೇಂದ್ರವಲ್ಲ ಆದರೆ ದೇವಸ್ಥಾನ ಸಮಿತಿಗೆ ನಮ್ಮ ಸರ್ಕಾರದಿಂದ ನೇಮಕವಾಗಿ ಇದೀಗ ಒಬ್ಬ ವ್ಯಕ್ತಿಗಾಗಿ ಇಡೀ ಪಕ್ಷವನ್ನೇ ಪಂಜದಲ್ಲಿ ಬಲಿ ಕೊಡುವ ಕೆಲಸವಾಗುತ್ತಿದೆ,ಇದರಲ್ಲಿ ರಾಜಕೀಯ ಪ್ರಶ್ನೆಗಿಂತ ಭಕ್ತರ ಭಾವನೆ ಮುಖ್ಯ, ನಾವು ದೇವಸ್ಥಾನ ವಿಚಾರದಲ್ಲಿ ಕ್ಷೇತ್ರದ ಭಕ್ತರ ಪರ ಇಲ್ಲಿ ರಾಜಕೀಯ ತರುವುದು ಸರಿಯಲ್ಲವೆಂದು ಸ್ವಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು,ಕಾರ್ಯಕರ್ತರ ಮಾತಿಗೆ ಬೆಲೆಯಿಲ್ಲದ ಮೇಲೆ ನಮಗೆ ಪಕ್ಷದ ಜವಾಬ್ದಾರಿ ಯಾಕೆವೆಂದು ಪ್ರಶ್ನಿಸಿದ್ದಾರೆ.

30 ವರ್ಷಗಳ ಹಿರಿಯ ಕಾರ್ಯಕರ್ತನ ರಾಜೀನಾಮೆಯು ಸುಳ್ಯ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪಂಜ ದೇಗುಲ ವ್ಯವಸ್ಥಾಪನ ಸಮಿತಿ ಲೆಕ್ಕಪತ್ರ ವಿಚಾರವಾಗಿ ಭಕ್ತರ ಸಭೆ ನಡೆದಿತ್ತು ತದನಂತರ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರು ದೇವಸ್ಥಾನ ವಿಚಾರವಾಗಿ ರಾಜಕೀಯ ಮಾಡುತ್ತಿದೆಯೆಂದು ಆರೋಪಿಸಿದ್ದರು ಆದರೆ ಇದೀಗ ಸ್ವ ಪಕ್ಷದ ನಾಯಕರೇ ದೇವಸ್ಥಾನ ಸಮಿತಿ ಮೇಲೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದು ಪಕ್ಷದ ನಾಯಕರಿಗೆ ಇರಿಸು ಮುರಿಸು ಉಂಟುಮಾಡಿದೆ.
















































