ಎಲ್‌ಪಿಜಿಗಾಗಿ ಹಳ್ಳಿಯವರು ಇನ್ನು 45 ದಿನ ಕಾಯಬೇಕಿಲ್ಲ: ಸಚಿವ ಸುರೇಶ್‌ ಗೋಪಿ

Picture of Savistara

Savistara

Bureau Report

ತಿರುವನಂತಪುರ (ಪಿಟಿಐ): ಗ್ರಾಮೀಣ ಪ್ರದೇಶದ ಗ್ರಾಹಕರುಒಂದು ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಿದ ನಂತರದಲ್ಲಿ ಇನ್ನೊಂದು ಸಿಲಿಂಡ‌ರ್ ಬುಕ್ ಮಾಡಲು ಇನ್ನು ಮುಂದೆ 45 ದಿನ ಕಾಯಬೇಕಿಲ್ಲ.

ಅವರು ಕೂಡ ನಗರ ಪ್ರದೇಶದ ಗ್ರಾಹಕರಂತೆಯೇ, ಒಂದು ಸಿಲಿಂಡ‌ರ್ ಬುಕ್ ಮಾಡಿದ 25 ದಿನಗಳ ನಂತರ ಇನ್ನೊಂದು ಸಿಲಿಂಡ‌ರ್ ಬುಕ್ ಮಾಡಬಹುದು.ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರಿಗೆ ಬುಕಿಂಗ್ ಅಂತರವನ್ನು ತಕ್ಷಣವೇ ಒಂದೇ ಬಗೆಯಲ್ಲಿ ನಿಗದಿ ಮಾಡಬೇಕು ಎಂದು ತೈಲೋತ್ಪನ್ನ ಮಾರಾಟ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವ ಸುರೇಶ್ ಗೋಪಿ ಅವರು ಸೋಮವಾರ ಫೇಸ್‌ಬುಕ್ ಮೂಲಕ ತಿಳಿಸಿದ್ದಾರೆ.ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ನಂತರದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಹೀಗಾಗಿ, ಗ್ರಾಮೀಣ ಪ್ರದೇಶದ ಗ್ರಾಹಕರು ಒಂದು ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಿದ 45 ದಿನಗಳ ನಂತರವೇ ಇನ್ನೊಂದನ್ನು ಬುಕ್ ಮಾಡಬಹುದು ಎಂಬ ನಿಯಮ ಜಾರಿಗೆ ತರಲಾಯಿತು. ನಗರ ಪ್ರದೇಶದ ಗ್ರಾಹಕರಿಗೆ ಈ ಅಂತರವು 25 ದಿನಗಳಾಗಿವೆ.

‘ಈಗ ಎಲ್‌ಪಿಜಿ ಪೂರೈಕೆ ಸ್ಥಿತಿ ಸುಧಾರಿಸುತ್ತಿದೆ, ಬುಕ್ ಮಾಡಿದವರಿಗೆ ಎಲ್‌ಪಿಜಿ ಪೂರೈಕೆ ಬಾಕಿ ಗಣನೀಯವಾಗಿ ಕಡಿಮೆ ಆಗಿದೆ. ಹೀಗಾಗಿ, ಕೇಂದ್ರ ಸರ್ಕಾರವು ನಿರ್ಬಂಧವನ್ನು ಸಡಿಲಿಸಿದೆ’ ಎಂದು ಗೋಪಿ ಹೇಳಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!