ಗಣೇಶ ಚತುರ್ಥಿಗೆ ಟಿಕೆಟ್‌ ದರ ಹೆಚ್ಚಳ: ಬಸ್‌ ಮಾಲೀಕರಿಗೆ ‘ಹಬ್ಬ’

Picture of Savistara

Savistara

Bureau Report

ಬೆಂಗಳೂರು: ಹಬ್ಬಗಳು ಬಂದಾಗ, ವಾರಾಂತ್ಯ ಇದ್ದಾಗ ಖಾಸಗಿಬಸ್‌ಗಳ ಪ್ರಯಾಣದರವನ್ನು ವಿಪರೀತವಾಗಿ ಏರಿಸುವುದನ್ನು ನಿಯಂತ್ರಿಸುವುದಕ್ಕಾಗಿ ನಿಯಮಾವಳಿ ರೂಪಿಸುವ ಪ್ರಸ್ತಾವಕ್ಕೆ ಇನ್ನೂ ಜೀವ ಬಂದಿಲ್ಲ. ಈ ಬಾರಿಯೂ ಗಣೇಶ ಹಬ್ಬದ ಸಮಯದಲ್ಲಿ ಪ್ರಯಾಣದರವು ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ.

ಖಾಸಗಿ ಬಸ್‌ಗಳ ಸೇವೆ ಒದಗಿಸುವವರು ಶುಕ್ರವಾರ, ಶನಿವಾರ ನಾಲ್ಕುಪಟ್ಟುವರೆಗೆ ಹೆಚ್ಚಿಸಿದ್ದರೆ ಭಾನುವಾರ ಎರಡು ಪಟ್ಟು ಹೆಚ್ಚಳ ಮಾಡಲಾಗಿದೆ. ಕೆಲವು ವಿಶೇಷ ಬಸ್‌ಗಳಲ್ಲಿ ವಿಮಾನ ಪ್ರಯಾಣ ದರದಷ್ಟು ಮೊತ್ತ ಕಂಡು ಪ್ರಯಾಣಿಕರು ದಂಗಾಗಿದ್ದಾರೆ.ಶಿರಸಿಗೆ ಹೋಗುವ ಬಹುತೇಕ ಖಾಸಗಿ ಬಸ್‌ಗಳ ದರ ಎರಡೂವರೆ ಪಟ್ಟು ಹೆಚ್ಚಾಗಿದೆ. ಆದರೆ, ಒಂದು ಬಸ್‌ನಲ್ಲಿ ದರ ಮಾತ್ರ ₹ 6,999 ಮತ್ತು ₹7,999 ಆಗಿರುವುದನ್ನು ನೋಡಿ ‘ಬಸ್‌ಗೆ ರೆಕ್ಕೆ ಮೂಡಿ ವಿಮಾನವಾಯ್ತ? ಗಣೇಶ ಚತುರ್ಥಿಗೆ ಶಿರಸಿಗೆ ಹೋಗಬೇಕಾಗಿತ್ತು. ಬೆಂಗಳೂರು- ಶಿರಸಿ ಬಸ್ ರೇಟ್ ನೋಡಿ ಮೂರ್ಛ ಹೋಗುವುದೊಂದು ಬಾಕಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಉಷಾ ಕಟ್ಟೆಮನೆ ಅವರು ದರಪಟ್ಟಿಯೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ.’ಇದು ಯಾವುದೋ ಊರಿಗೆ ಹೋಗೋದಕ್ಕೆ ಇರೋ ಫೈಟ್ ಟಿಕೆಟ್ ಅಲ್ಲ, ಬೆಂಗಳೂರಿನಿಂದ ಕುಂದಾಪುರಕ್ಕೆ ಹೋಗೋ ಬಸ್ ಟಿಕೆಟ್’ ಎಂದು ₹ 1,510ರಿಂದ ₹ 4,999ರವರೆಗಿನ ಟಿಕೆಟ್ ದರ ಉಲ್ಲೇಖಿಸಿ ನವ್ಯಶ್ರೀ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಬಸ್‌ಗಳಲ್ಲಿ ₹ 650 ರಿಂದ ₹ 1,300ವರೆಗೆ ಇದ್ದ ದರಗಳು ಈಗ ₹1,500ರಿಂದ ₹ 4,000 ವರೆಗೆ ಏರಿಕೆಯಾಗಿವೆ. ಮಂಗಳೂರಿಗೆ * 70000 ₹1,4000 2໖໖ ₹1,600-₹ 4,500 ಏರಿದೆ. ಶಿರಸಿಗೆ * 700-₹ 900 ದರ ಇತ್ತು. ಈಗ ₹2,000-₹ 2,500ರ ವರೆಗೆ ಹೆಚ್ಚಳವಾಗಿದೆ. ಇದೇ ರೀತಿ ರಾಜ್ಯದ ವಿವಿಧ ನಗರಗಳಿಗೆ ತೆರಳುವವರಿಗೆ ಬಸ್ ದರ ಏರಿಕೆ ಬರೆ ಎಳೆದಿದೆ.

ಕೆಎಸ್‌ಆರ್‌ಟಿಸಿ ಭರ್ತಿ: ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ 2,400ವಿಶೇಷ ಬಸ್‌ಗಳನ್ನು ರಸ್ತೆಗೆ ಇಳಿಸುತ್ತಿದೆ. ಮುಂಗಡ ಕಾಯ್ದಿರಿಸಲು ಅವಕಾಶ ನೀಡಲಾಗಿದ್ದು, ಎಲ್ಲ ಬಸ್‌ಗಳ ಸೀಟುಗಳು ಬಹುತೇಕ ಭರ್ತಿಯಾಗಿವೆ.ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳಲ್ಲಿ ಪ್ರಯಾಣ ದರ ಎಂದಿನ ಬಸ್‌ಗಳಿಗಿಂತ ಶೇ 20-25ರಷ್ಟು ಮಾತ್ರ ಹೆಚ್ಚಳ ಇರುವುದರಿಂದ ಸಾವಿರಾರು ಪ್ರಯಾಣಿಕರು ಖಾಸಗಿ ಬಸ್‌ಗಳ ದುಬಾರಿ ದರದ ಹೊಡೆತದಿಂದ ಪಾರಾಗಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಎರಡು-ಮೂರು ಪಟ್ಟು ಹೆಚ್ಚಿಸುವುದನ್ನು ನಿಯಂತ್ರಿಸಲು ಕಾನೂನು ತರಬೇಕಿದೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿ ತಿಳಿಸಿದರು.ನಿಯಂತ್ರಣವಿಲ್ಲ: ಖಾಸಗಿ ಬಸ್‌ಗಳ ಟಿಕೆಟ್ ದರವನ್ನು ಹಬ್ಬಗಳಸಮಯದಲ್ಲಿ ಬೇಕಾಬಿಟ್ಟಿಯಾಗಿ ಏರಿಸುವುದನ್ನು ನಿಯಂತ್ರಿಸಲು ನಿರ್ದಿಷ್ಟವಾದ ನಿಯಮಗಳಿಲ್ಲ. ಆದರೂ ಹಬ್ಬಗಳ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಮುಖ ಬಸ್ ನಿಲ್ದಾಣಗಳು ಮತ್ತು ಚೆಕ್‌ಪೋಸ್ಟ್‌ಗಳಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳುತ್ತಿದ್ದಾರೆ. ಎರಡು- ಮೂರು ಪಟ್ಟು ಅಧಿಕ ದರ ವಸೂಲಿ ಮಾಡುವ ಬಸ್‌ಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

‘ಇಲಾಖೆ ಭ್ರಷ್ಟಾಚಾರದಲ್ಲಿ ಮುಳುಗಿದೆ’ ‘ಶಕ್ತಿ ಯೋಜನೆ ತಂದು ಖಾಸಗಿ ಬಸ್‌ಗಳಿಗೆ ಪ್ರಯಾಣಿಕರಿಲ್ಲದಂತಾಗಿದೆ. ತೆರಿಗೆ ವಿನಾಯಿತಿ ನೀಡಿಲ್ಲ. ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ನಮ್ಮ ಗೋಳು ಕೇಳುವವರಿಲ್ಲ. ಆನ್‌ಲೈನ್ ಯುಗ ಇದಾಗಿದ್ದರೂ ಸಾರಿಗೆ ಇಲಾಖೆಯಲ್ಲಿ ಹೆಸರಿಗಷ್ಟೇ ಆನ್‌ಲೈನ್. ನಾವು ಕಚೇರಿಗೆ ಹೋಗಿಯೇ ಮಾತನಾಡಬೇಕು. ಹೀಗಿರುವಾಗ ಹಬ್ಬದ ಸಮಯದಲ್ಲಿಯೂ ಸ್ವಲ್ಪ ಏರಿಕೆ ಮಾಡಬಾರದು ಎಂದರೆ ಹೇಗೆ’ ಎಂದು ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಸ್‌. ನಟರಾಜ ಶರ್ಮ ಪ್ರಶ್ನಿಸಿದರು. ‘ಪ್ರಯಾಣ ದರ ನಿಗದಿ ಮಾಡಲು ಸಮಿತಿ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಹಬ್ಬದ ಸಮಯದಲ್ಲಿ ಎರಡು ಪಟ್ಟು ವರೆಗೆ ಏರಿಕೆ ಮಾಡಲು ಅವಕಾಶ ನೀಡಬೇಕು. ಅದಕ್ಕಿಂತ ಅಧಿಕ ಮಾಡಿದರೆ ಕ್ರಮ ಕೈಗೊಳ್ಳಲಿ’ ಎಂದು ಹೇಳಿದರು.’ನಿಯಮಾವಳಿ ಶೀಘ್ರ’ ‘ದರ ನಿಗದಿ ಸಮಿತಿ ಮಾಡುವ ಪ್ರಸ್ತಾವ ಹಿಂದೆಯೇ ಸಲ್ಲಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ತೀರ್ಮಾನ ಆಗಬೇಕು. ನಿಯಮಾವಳಿ ಜಾರಿಗೆ ಬಂದರೆ ಮುಂದಿನ ದಿನಗಳಲ್ಲಿ ವಿಪರೀತ ದರ ಏರಿಕೆಗೆ ಕಡಿವಾಣ ಬೀಳಲಿದೆ’ ಎಂದು ಸಾರಿಗೆ ಆಯುಕ್ತ ಸೆಲ್ವಮಣಿ ಆರ್. ಪ್ರತಿಕ್ರಿಯಿಸಿದರು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!