ಇಂದು (ಸೆ 10) ವಂದೇ ಭಾರತ್ 2ನೇ ಪ್ರಾಯೋಗಿಕ ಸಂಚಾರ ಈ ಬಾರಿ ಕಬಕ ಪುತ್ತೂರಿನಲ್ಲಿ ನಿಲುಗಡೆ;

Picture of Savistara

Savistara

Bureau Report

ಮಂಗಳೂರು: ಯಶವಂತಪುರ-ಮಂಗಳೂರು ಸೆಂಟ್ರಲ್ ನಡುವಣ ಪ್ರಸ್ತಾವಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ 16 ಬೋಗಿಗಳ ಎರಡನೇ ಪ್ರಾಯೋಗಿಕ ಸಂಚಾರ ಗುರುವಾರ ನಡೆಯಲಿದೆ. ಈ ಬಾರಿ ರೈಲು ಕಬಕ ಪುತ್ತೂರು ರೈಲು ನಿಲ್ದಾಣದಲ್ಲೂ ನಿಲುಗಡೆಗೊಳ್ಳಲಿದ್ದು. ಪ್ರಾಯೋಗಿಕ ಸಂಚಾರದ ವೇಳೆ ಈ ನಿಲ್ದಾಣದಲ್ಲಿ ರೈಲಿನ ಆಗಮನ ಮತ್ತು ನಿರ್ಗಮನದ ಸಮಯವನ್ನು ಪರಿಶೀಲಿಸಲಾಗುತ್ತದೆ.

ರೈಲ್ವೆ ಮಂಡಳಿಯ ಸೆ.2ರ ಸೂಚನೆಯಂತೆ ಯಶವಂತಪುರದಿಂದ ಮಂಗಳೂರು ಜಂಕ್ಷನ್‌ವರೆಗೆ ಹಾಗೂ ಮರಳಿ ಯಶವಂತಪುರಕ್ಕೆ ಖಾಲಿ ವಂದೇ ಭಾರತ್ ರೈಲನ್ನು ಓಡಿಸಿ ಸಂಚಾರ ಸಮಯವನ್ನು ಪರಿಶೀಲಿಸಲು ಸೂಚಿಸಲಾಗಿದೆ. ಇದಕ್ಕಾಗಿ ಐಸಿ2015 ಸಂಖ್ಯೆಯ 16 ಬೋಗಿಗಳ ವಂದೇ ಭಾರತ್ ರೇಕ್ ಬಳಸಲಾಗುತ್ತಿದೆ.

ಯಶವಂತಪುರದಿಂದ ಬೆಳಿಗ್ಗೆ 6.50ಕ್ಕೆ ಹೊರಡುವ ರೈಲು ಹಾಸನಕ್ಕೆ 9.33ಕ್ಕೆ ತಲುಪಿ 9.35ಕ್ಕೆ ನಿರ್ಗಮಿಸಲಿದೆ. ಸಕಲೇಶಪುರಕ್ಕೆ 10.25ಕ್ಕೆ ಆಗಮಿಸಿ 10.30ಕ್ಕೆ ಹೊರಡಲಿದೆ. ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲಿ ಮಧ್ಯಾಹ್ನ 12.50ಕ್ಕೆ ಆಗಮಿಸಿ 12.55ಕ್ಕೆ ನಿರ್ಗಮಿಸಲಿದೆ.

ಬಳಿಕ ಕಬಕ ಪುತ್ತೂರು ನಿಲ್ದಾಣಕ್ಕೆ ಮಧ್ಯಾಹ್ನ 2.34ಕ್ಕೆ ಆಗಮಿಸಿ 2.36ಕ್ಕೆ ನಿರ್ಗಮಿಸಲಿದೆ. ಪಡೀಲು ಮೂಲಕ ಮಧ್ಯಾಹ್ನ 2.50ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ಮಂಗಳೂರು ಜಂಕ್ಷನ್‌ನಿಂದ ಸಂಜೆ 3.10ಕ್ಕೆ ಮರಳಿ ಹೊರಡುವ ರೈಲು ಪಡೀಲಿಗೆ 3.20ಕ್ಕೆ ಹಾಗೂ ಕಬಕ ಪುತ್ತೂರಿಗೆ 3.38ಕ್ಕೆ ಆಗಮಿಸಿ 3.40ಕ್ಕೆ ನಿರ್ಗಮಿಸಲಿದೆ. ನಂತರ ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ ಹಾಗೂ ಹಾಸನ ಮಾರ್ಗವಾಗಿ ರಾತ್ರಿ 10.30ಕ್ಕೆ ಯಶವಂತಪುರ ತಲುಪುವ ನಿರೀಕ್ಷೆಯಿದೆ.

ಘಾಟ್ ವಿಭಾಗದಲ್ಲಿ ರೈಲಿನ ಸಂಚಾರದ ವೇಗ, ಸಮಯ ಹಾಗೂ ಇತರ ತಾಂತ್ರಿಕ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಪ್ರಾಯೋಗಿಕ ಸಂಚಾರದ ಆಧಾರದಲ್ಲಿ ವಿವರವಾದ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗುತ್ತದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.ಕಬಕ ಪುತ್ತೂರಿನಲ್ಲಿ ಎರಡನೇ ಬಾರಿಗೆ ನಡೆಯುತ್ತಿರುವ ಈ ನಿಲುಗಡೆ, ಮಂಗಳೂರು-ಬೆಂಗಳೂರು ನಡುವಣ ವಂದೇ ಭಾರತ್ ಸೇವೆಗೆ ಪುತ್ತೂರಿನ ಬೇಡಿಕೆಗೆ ಮಹತ್ವದ ಬೆಳವಣಿಗೆಯಾಗಿದೆ. ಪುತ್ತೂರಿನಲ್ಲಿ ಈ ರೈಲಿಗೆ ನಿಲುಗಡೆ ನೀಡಬೇಕೆಂದು ಹಲವು ಸಂಘ ಸಂಸ್ಥೆಗಳು ಜನ ಪ್ರತಿನಿಧಿಗಳು ಹಾಗೂ ವಿಶೇಷವಾಗಿ ರೈಲ್ವೇ ಹೋರಾಟಗಾರರು ಒತ್ತಾಯಿಸಿದ್ದರು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!