ಪಂಜ ಸೀಮೆಯ ಭಕ್ತರ ಒಳಿತಿಗಾಗಿ ಹಾಗೂ ದೇವಸ್ಥಾನದ ಸಾನಿಧ್ಯ ವೃದ್ಧಿಗಾಗಿ ಆಯೋಜಿಸಿರುವ ಶಿವ ಸ್ಮರಣೆ ಕಾರ್ಯಕ್ರಮ ಇಂದು ಬೆಳಿಗ್ಗೆ 7 ಗಂಟೆಗೆ ದೇವಸ್ಥಾನದ ಸನ್ನಿಧಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ನೂರಾರು ಭಕ್ತರು ಉಪಸ್ಥಿತರಿದ್ದು, ಶ್ರೀಪತಿ ಭಟ್ ರವರು ಪ್ರಾರ್ಥನೆ ನೆರವೇರಿಸಿದರು.ಶಿವ ಸ್ಮರಣೆಯ ಮೂಲಕ ಸಾವಿರ ಸೀಮೆಯ ಭಕ್ತರು ಒಂದುಗೂಡುವ ಈ ಪವಿತ್ರ ಕಾರ್ಯಕ್ರಮವು ಇಂದಿನಿಂದ ಆರಂಭಗೊಂಡು ಸೆಪ್ಟೆಂಬರ್ 26ನೇ ಸೋಮವಾರದವರೆಗೆ ಸತತ 12 ದಿನಗಳ ಕಾಲ ನಡೆಯಲಿದೆ.

ಮುಂದಿನ ದಿನಗಳಲ್ಲಿ ಸಾವಿರ ಸೀಮೆಯ ಎಲ್ಲಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ‘ಓಂ ನಮಃ ಶಿವಾಯ’ ಮಂತ್ರ ಜಪದ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕ್ಷೇತ್ರದ ಭಕ್ತರು ಮನವಿ ಮಾಡಿದ್ದಾರೆ.
















































