ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್​ಟಿ ಸುಧಾರಣೆ ಬಗ್ಗೆ ಮೋದಿ

Picture of Savistara

Savistara

Bureau Report

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ನಾಳೆ (ಸೆಪ್ಟೆಂಬರ್ 22) ನವರಾತ್ರಿಯ ಮೊದಲ ದಿನದಿಂದ ದೇಶಾದ್ಯಂತ “ ಜಿಎಸ್ ಟಿ ಉತ್ಸವ” ಆರಂಭವಾಗುವುದಾಗಿ ಘೋಷಿಸಿದ್ದಾರೆ. ಹೊಸ ಜಿಎಸ್‌ಟಿ ದರಗಳು ಜಾರಿಯಾಗುವುದರಿಂದ ಸಾಮಾನ್ಯ ಜನರು ತಮ್ಮ ಮೆಚ್ಚಿನ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದೆಂದು ಮೋದಿ ತಿಳಿಸಿದ್ದಾರೆ.“ನಾಳೆಯಿಂದ ನಿಮ್ಮ ಮೆಚ್ಚಿನ ವಸ್ತುಗಳನ್ನು ಸುಲಭವಾಗಿ ಮತ್ತು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಇದನ್ನು ಪ್ರತಿಯೊಬ್ಬ ಭಾರತೀಯರಿಗೂ ಉಳಿತಾಯದ ಹಬ್ಬವೆಂದು ಪರಿಗಣಿಸಿ” ಎಂದು ಮೋದಿ ಹೇಳಿದರು.ಹೊಸ ಜಿಎಸ್‌ಟಿ ಕ್ರಮವು ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗಕ್ಕೆ ಹೆಚ್ಚಿನ ಲಾಭ ನೀಡಲಿದ್ದು, ದಿನನಿತ್ಯದ ಅವಶ್ಯಕ ವಸ್ತುಗಳ ಬೆಲೆ ಇಳಿಕೆಯಾಗಲಿದೆ ಎಂದು ಅವರು ಹೇಳಿದರು.ಹೊಸ ಜಿಎಸ್‌ಟಿ ವ್ಯವಸ್ಥೆ ಜಿಎಸ್‌ಟಿ ಕೌನ್ಸಿಲ್‌ ಇತ್ತೀಚೆಗೆ ನಡೆದ 56ನೇ ಸಭೆಯಲ್ಲಿ 8 ವರ್ಷದ ಹಳೆಯ ಜಿಎಸ್‌ ವ್ಯವಸ್ಥೆಗೆ ಮಹತ್ವದ ಬದಲಾವಣೆಗಳನ್ನು ಅನುಮೋದಿಸಿದೆ. ಇನ್ನು ಮುಂದೆ 5% ಮತ್ತು 18% ದರದ ಎರಡು ಹಂತಗಳ ಜಿಎಸ್‌ಟಿ ವ್ಯವಸ್ಥೆ ಜಾರಿಯಾಗಲಿದ್ದು, ಅತ್ಯಂತ ಐಷಾರಾಮಿ ಮತ್ತು “ಸಿನ್” ವಸ್ತುಗಳಿಗೆ 40% ದರ ವಿಧಿಸಲಾಗುತ್ತದೆ.

ಈ ಸುಧಾರಣೆ ಮೂಲಕ ಗ್ರಾಹಕರಿಗೆ ಅನುಕೂಲವಾಗುವಂತೆ ನಿಯಮಗಳನ್ನು ಸರಳಗೊಳಿಸಿ, ವಸ್ತು-ಸೇವೆಗಳ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆ ಇದೆ.

ಯಾವ ವಸ್ತುಗಳು ಅಗ್ಗವಾಗುತ್ತವೆ..??

ಆಹಾರ ಪದಾರ್ಥಗಳು (12% 5%): ಹಣ್ಣು ರಸ, ಬೆಣ್ಣೆ, ಚೀಸ್, ಕಂಡೆನ್ಸ್ ಮಿಲ್ಕ್, ಪಾಸ್ತಾ, ಪ್ಯಾಕೇಜ್ ತೆಂಗಿನ ನೀರು, ಸೋಯಾ ಮಿಲ್ಕ್ ಡ್ರಿಂಕ್ಸ್ ಬೇವಿನಕಾಯಿ, ಖರ್ಜೂರ, ಸಾಸೇಜ್‌ಗಳು.

ವೈದ್ಯಕೀಯ ವಸ್ತುಗಳು (12% – 5%): ಆಮ್ಲಜನಕ, ಗಾಜು, ಬ್ಯಾಂಡೇಜ್, ಡಯಾಗೋಸ್ಟಿಕ್ ಕಿಟ್‌ಗಳು.

ಶೂನ್ಯ ದರ (0%): ಅಲ್ಮಾ ಹೈ ಟೆಂಪರೇಚರ್ ಹಾಲು, ಚೆನ್ನೆ/ಪನೀರ್, ಪಿಜ್ಜಾ ಬ್ರೆಡ್, ಖಾಗ್ರಾ, ಸಾದಾ ರೊಟ್ಟಿ/ಚಪಾತಿ, ಇರೆಸರ್

ಗೃಹೋಪಯೋಗಿ ವಸ್ತುಗಳು (12% ಅಥವಾ 18% 5%): ಕೂದಲಿನ ಎಣ್ಣೆ, ಸೋಪ್ ಬಾರ್, ಶ್ಯಾಂಪೂ, ಟೂತ್‌ಬ್ರಷ್‌, ಟೂತ್‌ಪೇಸ್ಟ್‌, ಸೈಕಲ್‌ಗಳು, ಟೇಬಲ್‌ವೇ‌ರ್, ಕಿಚನ್‌ವೇ‌ರ್, ಸಾಮಾನ್ಯ ಗೃಹೋಪಯೋಗಿ ವಸ್ತುಗಳು

ಹೊಸ ವ್ಯವಸ್ಥೆಯಿಂದ ಎಫ್‌ಎಂಸಿಜಿ, ವಾಹನ ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರಗಳು ಬೆಲೆ ಇಳಿಕೆ ಘೋಷಣೆ ಮಾಡಿದ್ದು, ಇದರ ಪರಿಣಾಮ ನೇರವಾಗಿ ಪ್ರತಿಯೊಂದು ಮನೆತನಕ್ಕೂ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!