ಮತ್ತೊಮ್ಮೆ ಹಸ್ತಲಾಘವ ಮಾಡದ ಸೂರ್ಯಕುಮಾ‌ರ್-ಸಲ್ಮಾನ್‌ ಅಲಿ

Picture of Savistara

Savistara

Bureau Report

ದುಬೈ, ಸೆ.21: ಏಶ್ಯ ಕಪ್‌ನ ಸೂಪರ್-4 ಪಂದ್ಯದಲ್ಲಿ ರವಿವಾರ ಟಾಸ್ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾ‌ರ್ ಹಾಗೂ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅವರು ಮತ್ತೊಮ್ಮೆ ಪರಸ್ಪರ ಕೈ ಕುಲುಕಲಿಲ್ಲ.ಗ್ರೂಪ್ ಹಂತದಲ್ಲಿ ಕೂಡ ಸೂರ್ಯಕುಮಾ‌ರ್ ಅವರು ಅಲಿ ಅವರ ಕೈಕುಲುಕದೇ ಇರುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.ಸೂರ್ಯಕುಮಾ‌ರ್ ಅವರು ಇಂದು ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರ ಕೈಕುಲುಕಿದರು. ಆದರೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅವರ ಕೈ ಕುಲುಕದೆ ಮುಂದೆ ಸಾಗಿದರು. ಅಲಿ ಅವರು ಪೈಕ್ರಾಫ್ಟ್ ಕೈಕುಲುಕಲಿಲ್ಲ.ಭಾರತ ತಂಡವು ಆಡುವ 11ರ ಬಳಗದಲ್ಲಿ 2 ಬದಲಾವಣೆ ಮಾಡಿದ್ದು, ಅರ್ಷದೀಪ್ ಹಾಗೂ ಹರ್ಷಿತ್ ಬದಲಿಗೆ ಬುಮ್ರಾ ಹಾಗೂ ವರುಣ್‌ ಚಕ್ರವರ್ತಿ ವಾಪಸಾಗಿದ್ದಾರೆ. ಪಾಕ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಹಸನ್ ನವಾಝ್ ಹಾಗೂ ಖುಷಿಲ್ ಶಾ ಬದಲಿಗೆ ಹುಸೇನ್ ತಲತ್ ಹಾಗೂ ಫಹೀಂ ಅಶ್ರಫ್ ಅವಕಾಶ ಪಡೆದಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!