ಭಾರತ-ಪಾಕ್ ಸೇರಿದಂತೆ 7 ಯುದ್ಧಗಳನ್ನು ನಿಲ್ಲಿಸಿದ್ದಕ್ಕೆ ನನಗೆ ನೊಬೆಲ್ ಪ್ರಶಸ್ತಿ ಸಲ್ಲಬೇಕು : ಟ್ರಂಪ್

Picture of Savistara

Savistara

Bureau Report

ಭಾರತ-ಪಾಕಿಸ್ತಾನ ಸೇರಿದಂತೆ ವಿಶ್ವದ 7 ಯುದ್ಧಗಳನ್ನು ನಿಲ್ಲಿಸಿದ್ದಕ್ಕಾಗಿ ತನಗೆ ನೊಬೆಲ್ ಪ್ರಶಸ್ತಿ ಸಲ್ಲಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.

ವಾಷಿಂಗ್ಟನ್: ಭಾರತ-ಪಾಕಿಸ್ತಾನ ಸೇರಿದಂತೆ ವಿಶ್ವದ 7 ಯುದ್ಧಗಳನ್ನು ನಿಲ್ಲಿಸಿದ್ದಕ್ಕಾಗಿ ತನಗೆ ನೊಬೆಲ್‌ ಪ್ರಶಸ್ತಿ ಸಲ್ಲಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಅಮೆರಿಕಾನ್ ಕಾರ್ನ‌್ರಸ್ಟೋನ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ ಸಂಸ್ಥಾಪಕರ ಭೋಜನ ಕೂಟದಲ್ಲಿ ಮಾತನಾಡಿದ ಟ್ರಂಪ್, ಭಾರತ-ಪಾಕಿಸ್ತಾನ ನಡುವಿನ ಸಂಭಾವ್ಯ ಅಣು ಯುದ್ಧವನ್ನು ವ್ಯಾಪಾರ ಒತ್ತಡದ ಮೂಲಕ ನಿಲ್ಲಿಸಿದ್ದೇನೆ ಎಂದು ಪುನರುಚ್ಚರಿಸಿದರು. ಇದಲ್ಲದೆ, ಥೈಲೆಂಡ್ ಕಾಂಬೋಡಿಯಾ, ಆರ್ಮೇನಿಯಾ ಅಜರ್‌ಬೈಜಾನ್‌, ಕೊಸೊವೋ ಸರ್ಬಿಯಾ, ಇಸ್ರೇಲ್ ಇರಾನ್, ಈಜಿಪ್ಟ್ ಇಥಿಯೋಪಿಯಾ, ರುವಾಂಡಾ ಕಾಂಗೋ ಯುದ್ಧಗಳನ್ನೂ ನಿಲ್ಲಿಸಿದ್ದೇನೆ ಎಂದು ಹೇಳಿದರು. ಈ ಪೈಕಿ 60% ಯುದ್ಧಗಳನ್ನು ವ್ಯಾಪಾರ ಒತ್ತಡದಿಂದಲೇ ಕೊನೆಗಾಣಿಸಿದ್ದಾಗಿ ತಿಳಿಸಿದರು.

“ಭಾರತ ಪಾಕಿಸ್ತಾನ ಎರಡೂ ದೇಶಗಳ ಮುಖ್ಯಸ್ಥರನ್ನು ನಾನು ಗೌರವಿಸುತ್ತೇನೆ. ಈ ಎರಡು ದೇಶಗಳಿಗೆ ವ್ಯಾಪಾರವೇ ಮುಖ್ಯ. ನಾನು ವ್ಯಾಪಾರದ ಮೂಲಕವೇ ಅವರ ನಡುವಿನ ಸಂಘರ್ಷಕ್ಕೆ ತೆರೆ ಎಳೆದೆ. ನೋಡಿ, ಪಾಕಿಸ್ತಾನ ಬಳಿ ಅಣು ಆಯುಧಗಳಿವೆ. ನೀವು ಅವರೊಂದಿಗೆ ಯುದ್ಧ ಮಾಡಿದರೆ, ನಾನು ನಿಮ್ಮೊಂದಿಗೆ ವ್ಯಾಪಾರ ಮಾಡುವುದಿಲ್ಲ ಎಂದು ಭಾರತಕ್ಕೆ ಹೇಳಿದೆ. ತಕ್ಷಣವೇ ಭಾರತ ಕದನ ವಿರಾಮ ಘೋಷಿಸಿತು” ಎಂದು ಟ್ರಂಪ್‌ ವಿವರಿಸಿದರು.

“ಜಾಗತಿಕ ವೇದಿಕೆಯಲ್ಲಿ ಈಗ ಅಮೆರಿಕಕ್ಕೆ ಹಿಂದಿನಿಂತಲೂ ಹೆಚ್ಚು ಗೌರವ ದೊರೆಯುತ್ತಿದೆ. ಈ ಕಾರಣದಿಂದಲೇ ನಾವು ಯುದ್ಧಗಳನ್ನು ಕೊನೆಗಾಣಿಸಲು ಶಾಂತಿ ಮಾತುಕತೆಗಳಿಗೆ ಒತ್ತು ನೀಡುತ್ತಿದ್ದೇವೆ” ಎಂದು ಅವರು ಸೇರಿಸಿದರು. ಮೇ 10ರಿಂದ ಇಲ್ಲಿವರಗೆ ಟ್ರಂಪ್‌ 40ಕ್ಕೂ ಹೆಚ್ಚು ಬಾರಿ ಭಾರತ ಪಾಕ್ ಕದನ ವಿರಾಮಕ್ಕೆ ತಾವೇ ಕಾರಣ ಎಂದು ಹೇಳಿಕೊಂಡಿದ್ದಾರೆ.

ಆದರೆ, ಕದನ ವಿರಾಮ ಘೋಷಣೆಯಲ್ಲಿ ಮೂರನೇಯ ವ್ಯಕ್ತಿ ಅಥವಾ ದೇಶದ ಮಧ್ಯಸ್ಥತೆಯನ್ನು ಭಾರತ ಸತತವಾಗಿ ನಿರಾಕರಿಸಿದೆ. ಇದೇ ರೀತಿ ಪಾಕಿಸ್ತಾನವೂ ಯಾವುದೇ ಬಾಹ್ಯ ಮಧ್ಯಸ್ಥತೆಯನ್ನು ಒಪ್ಪುಕೊಂಡಿಲ್ಲ ಎಂದು ತಿಳಿದುಬಂದಿದೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!