ಸಮಾಜ ಪ್ರಸ್ತುತ ಸಂಘವನ್ನು ಒಪ್ಪಿಕೊಳ್ಳುವ ಹಂತಕ್ಕೆ ಬಂದಿರುವುದು ಶತಾಬ್ದಿ ವರ್ಷದ ವಿಶೇಷ : ರಾಜೇಶ್ ಪದ್ಮಾರ್

Picture of Savistara

Savistara

Bureau Report

ಸುಳ್ಯ : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಾಬ್ದಿ ಹಿನ್ನಲೆಯಲ್ಲಿ ಜಾಲ್ಸೂರು ಮಂಡಲ ಅರೆಸೆಸ್ ಸಾಂಘಿಕ್ ಅಡ್ಕಾರು ಸುಬ್ರಮಣ್ಯ ದೇವಸ್ಥಾನ ದಲ್ಲಿ ನಡೆಯಿತು.

ಕಾರ್ಯಕ್ರಮ ಮುಖ್ಯ ವಕ್ತಾರರಾಗಿ ಪ್ರಾಂತ್ಯ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರು ಮಾತನಾಡಿ ಅರೆಸೆಸ್ ಕಳೆದ ನೂರು ವರ್ಷಗಳಿಂದ ಸಮಾಜದ ನಡುವೆ ಕೆಲಸ ಮಾಡುತ್ತ ಬಂದಿದೆ ಸಂಘ ಸ್ಥಾಪನೆ ಕಾಲದಲ್ಲಿ ಅರೆಸೆಸ್ ಬಗ್ಗೆ ಅನೇಕ ಜನ ಅಪಹಾಸ್ಯ,ವ್ಯಂಗ್ಯ ಮಾಡಿದರು ನಂತರ ಕಾಲದಲ್ಲಿ ಪ್ರತಿರೋಧ, ಆಕ್ರಮಣ ಗಳು ನಡೆದವು.

ಆದರೆ ಕಾರ್ಯಕರ್ತರು ನಿಸ್ವಾರ್ಥ ಕಾರ್ಯ ದ ಪರಿಣಾಮ ಇಂದು ಅವೆಲ್ಲವನ್ನು ಮೆಟ್ಟಿ ನಿಂತು ಸಮಾಜ ಅರೆಸೆಸ್ ನ್ನು ಒಪ್ಪಿಕೊಳ್ಳುವ ಹಂತಕ್ಕೆ ಬಂದಿರವುದು ವಿಶೇಷ, ವ್ಯಕ್ತಿ ನಿರ್ಮಾಣ ದಿಂದ ರಾಷ್ಟ್ರ ನಿರ್ಮಾಣ ಧ್ಯೇಯ ದಲ್ಲಿ ಸಂಘ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತ ಬಂದಿದೆ.

ಅನೇಕ ಸ್ವಯಂ ಸೇವಕರು ತಮ್ಮ ಜೀವನವನ್ನು ಈ ಯಾತ್ರೆಯಲ್ಲಿ ನೀಡಿದ್ದಾರೆಂದರು. ಪಂಚ ಪರಿವರ್ತನೆ ಈ ಶತಾಬ್ದಿ ಕಾರ್ಯಕ್ರಮ ದಲ್ಲಿ ಹಮ್ಮಿಕೊಳ್ಳಲಾಗಿದ್ದು ಕುಟುಂಬ ಪ್ರಭೋದನೆ ನಾಗರೀಕ ಶಿಷ್ಟಚಾರ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಮಾಜ ಈ ಎಲ್ಲಾ ಕಾರ್ಯದಲ್ಲಿ ಭಾಗಿಯಾಗುವಂತೆ ರಾಜೇಶ್ ಪದ್ಮಾರ್ ತಿಳಿಸಿದರು. ಕಾರ್ಯಕ್ರಮ ದಲ್ಲಿ ನೂರಾರು ಸ್ವಯಂ ಸೇವಕರು, ಮಾತೆಯರು, ಸಾರ್ವಜನಿಕರು ಭಾಗಿಯಾಗಿದ್ದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!