“ವಿಜಯ ದಶಮಿ ಯ ಈ ಸಂಧರ್ಭದಲ್ಲಿ 100 ವರ್ಷ ತುಂಬುತ್ತಾ ಇದೆ.ಈ ಶತಾಬ್ದಿ ಯ ವರ್ಷದಲ್ಲಿ ಈ ಸಂಘ ಒಂದು ವರ್ಷದಲ್ಲಿ ಬೇರೆ ಬೇರೆ ರೀತಿಯ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದೆ.

ಪಂಚ ಪರಿವರ್ತನೆ ಯ ಮೂಲಕ ಮತ್ತೆ ಈ ಅಮೂಲಾಗ್ರ ಬದಲಾವಣೆ ತರುವುದರ ಮುಖಾಂತರ ರಾಷ್ಟ್ರ ಜಗದ್ಗುರು ವಾಗಿ ನಿಲ್ಲುವಂತ ಯೋಚನೆ – ಯೋಜನೆ ಇವತ್ತು ಆಗಿದೆ. ಸಂಘದಲ್ಲಿ ಹಿಂದುತ್ವದ ಮುಖಾಂತರ ದೇಶವನ್ನು ಕಟ್ಟುವಂತ ವ್ಯವಸ್ಥೆ ಯಲ್ಲಿ ನಿರಂತರ ವಾಗಿ 100 ವರ್ಷದಲ್ಲಿ ಸಂಘ ಕೆಲಸ ಮಾಡುತ್ತಿದೆ.ಸಂಘ ಬೇರೆ ಬೇರೆ ವಿಚಾರದಲ್ಲಿ ಕೆಲಸ ರಾಷ್ಟ್ರ ಕಟ್ಟು ವ ಕೆಲಸವನ್ನು ಮಾಡುತ್ತಿದೆ.

ಎಂದು ಜಿಲ್ಲಾ ಪ್ರಚಾರಕ ಭುವನೇಶ್ವರ ಕಲ್ಲೇರಿ ಹೇಳಿದರು.ವಿಜಯದಶಮಿ ದಿನವಾದ ಅ.2ರಂದು ಆರ್.ಎಸ್.ಎಸ್. ಸಂಘ ಶತಾಬ್ದಿ ಪ್ರಯುಕ್ತ ಐವರ್ನಾಡು ಮಂಡಲದ ಐವರ್ನಾಡು,

ಅಮರಪಡ್ನೂರು ಗ್ರಾಮದ ವತಿಯಿಂದಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದ ಸಭಾಂಗಣದಲ್ಲಿ ನಡೆದ ಶತಾಬ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಾರ್ಯಕ್ರಮ ದ ಅತಿಥಿಯಾಗಿ ಡಾ.ಗೌರಿ ಶಂಕರ್ ಉಪಸ್ಥಿತರಿದ್ದರನೂರಾರು ಮಂದಿ ಆರ್.ಎಸ್.ಎಸ್. ಗಣವೇಶದಲ್ಲಿ ಮತ್ತು ಮಾತೆಯರು, ಸಾರ್ವಜನಿಕರು ಭಾಗವಹಿಸಿದ್ದರು.











































