ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವೆಂಕಟೇಶ್ ಪ್ರಸಾದ್ ಬಣಕ್ಕೆ ಗೆಲುವು

Picture of Savistara

Savistara

Bureau Report

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬಣಕ್ಕೆ ಭರ್ಜರಿ ಜಯ ಸಿಕ್ಕಿದ್ದು, ಮೈಸೂರು ಪ್ರಿಂಟರ್ಸ್ (ಪ್ರಜಾವಾಣಿ) ಕೆಎನ್ ಶಾಂತಕುಮಾರ್ ಬಣಕ್ಕೆ ಸೋಲಾಗಿದೆ. , ಒಟ್ಟು 16 ಹುದ್ದೆಗಳಲ್ಲಿ 11 ಹುದ್ದೆ ವೆಂಕಟೇಶ್ ಪ್ರಸಾದ್ ತಂಡದ ಪಾಲಾಗಿದೆ.

749 ಮತ ಪಡೆದ ವೆಂಕಟೇಶ್ ಪ್ರಸಾದ್, ಗೆಲುವಿನ ನಗೆ ಬಿರಿದ್ದಾರೆ. ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ ಪ್ರಜಾವಾಣಿ ಯ ಶಾಂತಕುಮಾರ್ 558 ಮತಗಳನ್ನು ಪಡೆದು, ಸೋಲನ್ನಪ್ಪಿದ್ದಾರೆ.ಸುಜಿತ್ ಸೋಮಸುಂದರ್ (719) ಕೆಎಸ್‌ಸಿಎ ಉಪಾಧ್ಯಕ್ಷ,. ಬಿ‌ಕೆ ರವಿ (669) ಜಂಟಿ ಕಾರ್ಯದರ್ಶಿ,. ಬಿಎನ್ ಮಧುಕರ್(736) ಖಜಾಂಚಿ. ಕಾರ್ಯದರ್ಶಿಯಾಗಿ ಸಂತೋಷ್ ಮೆನನ್ (675) ಆಯ್ಕೆ.

ವೆಂಕಟೇಶ್ ಪ್ರಸಾದ್ ಅಧ್ಯಕ್ಷ: ಸಂತೋಷ್ ಮೇನನ್ (ಕಾರ್ಯದರ್ಶಿ), ಇ.ಎಸ್. ಜೈರಾಂ (ಜೊತೆ ಕಾರ್ಯದರ್ಶಿ), ವಿನೋದ್ ಸಿವಪ್ಪ (ಉಪಾಧ್ಯಕ್ಷ).ಕೆ.ಎನ್. ಶಾಂತ್ ಕುಮಾರ್ ನೇತೃತ್ವದ ಟೀಂ (ಟೀಂ ಬ್ರಿಜೇಶ್):ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಕೆ.ಎನ್. ಶಾಂತ್ ಕುಮಾರ್ (ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ), ಎ.ಇ. ಜೈರಾಂ (ಕಾರ್ಯದರ್ಶಿ), ಬಿ.ಕೆ. ರಾವಿ (ಜೊತೆ ಕಾರ್ಯದರ್ಶಿ), ಬಿ.ಎನ್. ಮಧುಕರ್ (ಕೋಶಾಧಿಕಾರಿ).ವೆಂಕಟೇಶ ಪ್ರಸಾದ್ ತಡಕ್ಕೆ ಬೆಂಬಲ: ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಶಾಂತಾ ರಂಗಸ್ವಾಮಿ, ವಿನಯ್ ಮೃತ್ಯುಂಜಯ

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!