‘ಕೇಸರಿ ಬಟ್ಟೆ ಧರಿಸಿದರೆ ಯೋಗಿಯಾಗುವುದಿಲ್ಲ’: ಆದಿತ್ಯನಾಥ್ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

Picture of Savistara

Savistara

Bureau Report

ಲಕ್ಕೊ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಪ್ರಮುಖ ಹಿಂದೂ ಧಾರ್ಮಿಕ ಗುರು ಸ್ವಾಮಿ ಅವಿಮುಕೇಶ್ವರಾನಂದ್ ಅವರ ನಡುವಿನ ವಾಕ್ಸಮರ ತೀವ್ರಗೊಂಡಿದ್ದು, ಈ ವಿವಾದಕ್ಕೆ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ದನಿಗೊಟ್ಟಿದ್ದಾರೆ. ಆದಿತ್ಯನಾಥ್ ಅವರ ಹೆಸರಿನ ಮೊದಲು ‘ಯೋಗಿ’ ಎಂಬ ಬಿರುದನ್ನು ಬಳಸಲು ಯಾರು ಅವಕಾಶ ನೀಡಿದರು ಎಂದು ಅವರು ಪ್ರಶ್ನಿಸಿದ್ದಾರೆ.ಸ್ವಾಮಿ ಅವಿಮುಕೇಶ್ವರಾನಂದ್ ತಮ್ಮ ಹೆಸರಿನ ಮೊದಲು ‘ಶಂಕರಾಚಾರ್ಯ’ ಎಂಬ ಬಿರುದನ್ನು ಬಳಸಲು ಎಲ್ಲರಿಗೂ ಅಧಿಕಾರವಿಲ್ಲ ಎಂದು ಹೇಳಿದ ಬಳಿಕ, ಆದಿತ್ಯನಾಥ್ ಅವರ ಹೆಸರಿನ ಮೊದಲು ‘ಯೋಗಿ’ ಬಳಕೆಯನ್ನೂ ಪ್ರಶ್ನಿಸಿದ್ದರು. ಇದರಿಂದ ಇಬ್ಬರ ನಡುವಿನ ಮಾತಿನ ಚರ್ಚೆ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಂಡಿದೆ.

ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಆದಿತ್ಯನಾಥ್, ‘ಶಂಕರಾಚಾರ್ಯ’ ಸ್ಥಾನ ಅತ್ಯಂತ ಗೌರವಾನ್ವಿತವಾಗಿದ್ದು, ಪ್ರತಿಯೊಬ್ಬರೂ ತಮ್ಮ ಹೆಸರಿನ ಮೊದಲು ಈ ಬಿರುದನ್ನು ಬಳಸಲು ಸಾಧ್ಯವಿಲ್ಲ ಎಂದು ಹೇಳಿದರು. ಶಂಕರಾಚಾರ್ಯರೂ ಸಹ ಕಾನೂನಿಗಿಂತ ಮೇಲಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ ಅವಿಮುಕೇಶ್ವರಾನಂದ್‌, ಶಂಕರಾಚಾರ್ಯರಿಗೆ ಯಾವುದೇ ರಾಜಕಾರಣಿಯಿಂದ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಹೇಳಿದರು. ‘ಯೋಗಿ’ ಎಂಬ ಪದ ತ್ಯಾಗಮಯ ಜೀವನವನ್ನು ಸೂಚಿಸುವುದಾದರೆ, ಭೌತಿಕ ಜಗತ್ತಿನೊಂದಿಗೆ ಸಂಬಂಧ ಹೊಂದಿರುವವರು ತಮ್ಮ ಹೆಸರಿನ ಮುಂದೆ ಆ ಪದವನ್ನು ಹೇಗೆ ಬಳಸಬಹುದು ಎಂಬ ಪ್ರಶ್ನೆಯನ್ನೂ ಎತ್ತಿದರು.ಕಳೆದ ತಿಂಗಳು ನಡೆದ ಮಾಘಮೇಳದ ವೇಳೆ ಮೌನಿ ಅಮಾವಾಸ್ಯೆಯ ಪವಿತ್ರ ಸ್ನಾನಕ್ಕಾಗಿ ಗಂಗಾ ನದಿಯತ್ತ ತೆರಳುವುದನ್ನು ತಡೆಯಲಾಗಿದೆ ಹಾಗೂ ತಮ್ಮ ಶಿಷ್ಯರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದರು. ಜೊತೆಗೆ, ಆದಿತ್ಯನಾಥ್ ಅವರು ತಾವು ‘ಹಿಂದೂ’ ಎಂಬುದನ್ನು ಸಾಬೀತುಪಡಿಸಬೇಕು ಎಂದೂ ಹೇಳಿದರು.ಸ್ವಾಮಿ ಅವಿಮುಕೇಶ್ವರಾನಂದ್ ಅವರು ಆದಿತ್ಯನಾಥ್ ಅವರ ವಿರುದ್ಧ ಈ ಹಿಂದೆ ಹಲವಾರು ಕ್ರಿಮಿನಲ್ ಪ್ರಕರಣಗಳು ಇದ್ದರೂ ಅವರು ಅಧಿಕಾರಕ್ಕೆ ಬಂದ ಬಳಿಕ ಅವುಗಳನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು. “ಕಾನೂನು ಎಲ್ಲರಿಗೂ ಒಂದೇ ಆಗಿದ್ದರೆ ಪ್ರಕರಣಗಳನ್ನು ಹೇಗೆ ಹಿಂಪಡೆಯಲಾಯಿತು?” ಎಂದು ಪ್ರಶ್ನಿಸಿದರು.

ಈ ಮಧ್ಯೆ ಅಖಿಲೇಶ್ ಯಾದವ್ ಇಬ್ಬರ ನಡುವಿನ ವಾಗ್ಯುದ್ಧವನ್ನು ಉಲ್ಲೇಖಿಸಿ, “ಕೇಸರಿ ಬಟ್ಟೆ ಧರಿಸಿ ಕಿವಿ ಚುಚ್ಚಿಸಿಕೊಂಡ ಮಾತ್ರಕ್ಕೆ ಒಬ್ಬರು ಯೋಗಿಯಾಗುವುದಿಲ್ಲ” ಎಂದು ತೀಕ್ಷ್ಮವಾಗಿ ವಾಗ್ದಾಳಿ ನಡೆಸಿದರು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!