ಸುಂಕ ಕಡಿತದ ನಡುವೆಯೂ ರಷ್ಯಾ ತೈಲ ನಿಲುವು ಬದಲಿಸದ ಭಾರತ: ಜೈಶಂಕರ್ ಮಾತುಗಳ ಒಳಾರ್ಥವೇನು..?

Picture of Savistara

Savistara

Bureau Report

ಮ್ಯೂನಿಚ್: ಭಾರತದ ಇಂಧನ ಖರೀದಿ ಮತ್ತು ವಿದೇಶಾಂಗ ನೀತಿಯು ಕೇವಲ ರಾಷ್ಟ್ರೀಯ ಹಿತಾಸಕ್ತಿ, ಲಭ್ಯತೆ ಮತ್ತು ವೆಚ್ಚದ ಆಧಾರದ ಮೇಲೆ ನಿರ್ಧರಿಸಲ್ಪಡುತ್ತದೆಯೇ ಹೊರತು ಯಾವುದೇ ರಾಜಕೀಯ ಒತ್ತಡಕ್ಕಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್(Jaishankar) ಅವರು ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಈ ಬಗ್ಗೆ ಮ್ಯೂನಿಚ್ ಭದ್ರತಾ ಸಮ್ಮೇಳನದ ಭಾಗವಾಗಿ ನಡೆದ ಸಂವಾದದಲ್ಲಿ ಜರ್ಮನಿಯ ವಿದೇಶಾಂಗ ಸಚಿವ ಜೊಹಾನ್ ವಾಡೆಫುಲ್ ಅವರೊಂದಿಗೆ ಮಾತನಾಡಿದ ಜೈಶಂಕರ್, ಭಾರತದ ಸ್ಟ್ರಾಟೆಜಿಕ್ ಅಟಾನಮಿ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ರಷ್ಯಾ ತೈಲ ಮತ್ತು ಅಮೆರಿಕದ ಒತ್ತಡ

ಇತ್ತೀಚೆಗೆ ಭಾರತ-ಅಮೆರಿಕ ನಡುವೆ ನಡೆದ ಮಧ್ಯಂತರ ವ್ಯಾಪಾರ ಒಪ್ಪಂದದ ಬಳಿಕ, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿದೆ ಎಂಬ ವಾಷಿಂಗ್ಟನ್‌ನ ಹೇಳಿಕೆಗಳ ಬೆನ್ನಲ್ಲೇ ಜೈಶಂಕರ್ ಅವರ ಈ ಪ್ರತಿಕ್ರಿಯೆ ಮಹತ್ವ ಪಡೆದಿದೆ.

ಜೈಶಂಕರ್ ಹೇಳಿಕೆ

ತೈಲ ಮಾರುಕಟ್ಟೆ ಇಂದು ಅತ್ಯಂತ ಸಂಕೀರ್ಣವಾಗಿದೆ. ಭಾರತದ ತೈಲ ಕಂಪನಿಗಳು ಯುರೋಪ್ ಅಥವಾ ವಿಶ್ವದ ಇತರ ಭಾಗಗಳ ಕಂಪನಿಗಳಂತೆಯೇ ಲಭ್ಯತೆ, ಅಪಾಯ ಮತ್ತು ವೆಚ್ಚವನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುತ್ತವೆ ಎಂದು ವಿದೇಶಾಂಗ ಸಚಿವ ತಿಳಿಸಿದ್ದಾರೆ.

ನಮ್ಮ ಸ್ವಾಯತ್ತತೆ ಮಾರಾಟಕ್ಕಿಲ್ಲ

ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಭಾರತವು ತನ್ನ ವ್ಯೂಹಾತ್ಮಕ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ನಾವು ವ್ಯೂಹಾತ್ಮಕ ಸ್ವಾಯತ್ತತೆಗೆ ಬದ್ಧರಾಗಿದ್ದೇವೆ. ಇದು ನಮ್ಮ ಇತಿಹಾಸ ಮತ್ತು ವಿಕಾಸದ ಅವಿಭಾಜ್ಯ ಅಂಗವಾಗಿದೆ. ಇದು ಕೇವಲ ಒಂದು ಸರ್ಕಾರದ ನೀತಿಯಲ್ಲ, ಬದಲಿಗೆ ಭಾರತದ ರಾಜಕೀಯ ವ್ಯವಸ್ಥೆಯ ಆಳದಲ್ಲಿರುವ ಸಿದ್ಧಾಂತ ಎಂದು ಹೇಳಿದ್ದಾರೆ. ಪಾಶ್ಚಿಮಾತ್ಯರೊಂದಿಗೆ ಭಿನ್ನಾಭಿಪ್ರಾಯ ಸಹಜನಾವು ಪಾಶ್ಚಿಮಾತ್ಯ ದೇಶಗಳೊಂದಿಗೆ ಎಲ್ಲ ವಿಷಯಗಳಲ್ಲೂ ಸಹಮತ ಹೊಂದಿರಬೇಕು ಎಂದೇನಿಲ್ಲ. ನಿಮ್ಮ ಆಲೋಚನೆಗೆ ಹೊಂದಿಕೆಯಾಗದ ನಿರ್ಧಾರಗಳನ್ನು ನಾವು ತೆಗೆದುಕೊಳ್ಳಬಹುದು, ಅದು ಸಂಭವಿಸುತ್ತದೆ ಎಂದು ಹೇಳುವ ಮೂಲಕ ಭಾರತವು ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುತ್ತದೆ ಎಂಬುದನ್ನು ಜೈಶಂಕರ್ ಖಚಿತಪಡಿಸಿದ್ದಾರೆ.ವಿಶ್ವಸಂಸ್ಥೆಯ ಸುಧಾರಣೆಗೆ ಆಗ್ರಹ ಮುಂದುವರೆದು ಮಾತನಾಡಿದ ಜೈಶಂಕರ್, ವಿಶ್ವಸಂಸ್ಥೆಯು ಇಂದಿನ ವಾಸ್ತವಕ್ಕೆ ತಕ್ಕಂತೆ ಬದಲಾಗಬೇಕೆಂದು ಅವರು ಪ್ರತಿಪಾದಿಸಿದರು. ಕಳೆದ ಐದು ವರ್ಷಗಳಲ್ಲಿ ಕೋವಿಡ್, ಯುಕ್ರೇನ್ ಯುದ್ಧ ಮತ್ತು ಮಧ್ಯಪ್ರಾಚ್ಯದ ಸಂಘರ್ಷಗಳು ಜಾಗತಿಕ ಸಂಸ್ಥೆಗಳ ಮಿತಿಯನ್ನು ತೋರಿಸಿವೆ. ಆದ್ದರಿಂದ ವಿಶ್ವಸಂಸ್ಥೆಯಲ್ಲಿ ಸಮಗ್ರ ಸುಧಾರಣೆ ಅಗತ್ಯ ಎಂದು ಹೇಳಿದ್ದಾರೆ.ಮಲ್ಟಿಪೋಲಾರ್ ವರ್ಲ್ಡ್ ಜಗತ್ತು ಈಗ ಬಹುಧ್ರುವೀಯತೆಯತ್ತ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತವು ಚಲನಶೀಲ ಮತ್ತು ಹೊಂದಿಕೊಳ್ಳುವ ವಿದೇಶಾಂಗ ನೀತಿಯನ್ನು ಹೊಂದಿರಬೇಕು. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಲೇ, ಯುರೋಪಿಯನ್ ಯೂನಿಯನ್ (EU) ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಪ್ರಯತ್ನಿಸುತ್ತಿರುವುದು ಇದರ ಭಾಗವಾಗಿದೆ ಎಂದು ಜೈಶಂಕರ್​ತಿಳಿಸಿದ್ದಾರೆ.ವ್ಯಾಪಾರ ಒಪ್ಪಂದ ಮತ್ತು ಸುಂಕದ ಲೆಕ್ಕಾಚಾರಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತುಕತೆಯ ನಂತರ, ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಅಮೆರಿಕವು ಶೇ. 50 ರಿಂದ ಶೇ. 18ಕ್ಕೆ ಇಳಿಸಿದೆ. ಇದರಲ್ಲಿ ರಷ್ಯಾ ತೈಲ ಖರೀದಿಯ ಕಾರಣಕ್ಕೆ ಹೇರಲಾಗಿದ್ದ ಶೇ. 25ರಷ್ಟು ದಂಡನಾತ್ಮಕ ಸುಂಕದ ರದ್ದತಿಯೂ ಸೇರಿದೆ. ಆದರೆ, ಈ ರಿಯಾಯಿತಿಯು ಭಾರತದ ಸ್ವತಂತ್ರ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರದು ಎಂಬುದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ

[t4b-ticker]
error: Content is protected !!