ದೆಹಲಿ: ಫೆಬ್ರವರಿ 17 ರಂದು (ಮಂಗಳವಾರ) ಢಾಕಾದಲ್ಲಿ ನಡೆಯಲಿರುವ ಬಾಂಗ್ಲಾದೇಶದ ನಿಯೋಜಿತ ಪ್ರಧಾನಿ ತಾರಿಕ್ ರೆಹಮಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಉಭಯ ದೇಶಗಳ ನಡುವಿನ ಆಳವಾದ ಮತ್ತು ಶಾಶ್ವತ ಸ್ನೇಹವನ್ನು ಬಿರ್ಲಾ ಭಾಗವಹಿಸುವಿಕೆಯು ಒತ್ತಿಹೇಳುತ್ತದೆ ಎಂದು ಸಚಿವಾಲಯವು ಹೇಳಿದ್ದು, ಹಂಚಿಕೆಯ ಇತಿಹಾಸ, ಸಂಸ್ಕೃತಿ ಮತ್ತು ಪರಸ್ಪರ ಗೌರವದಿಂದ ಒಗ್ಗೂಡಿರುವ ನೆರೆಹೊರೆಯವರಾಗಿ, ನೂತನ ಸರ್ಕಾರ ನೇತೃತ್ವದಲ್ಲಿ ಬಾಂಗ್ಲಾದೇಶದ ಪರಿವರ್ತನೆಯನ್ನು ಭಾರತವು ಸ್ವಾಗತಿಸುತ್ತದೆ, ಅವರ ದೃಷ್ಟಿಕೋನ ಮತ್ತು ಮೌಲ್ಯಗಳು ಜನರ ಅಗಾಧವಾದ ಆದೇಶವನ್ನು ಪಡೆದಿವೆ ಎಂದು ಅದು ಹೇಳಿದೆ.
ಭಾರತಕ್ಕೆ ಆಹ್ವಾನ
ಫೆಬ್ರವರಿ 17 ರಂದು ನಡೆಯಲಿರುವ ಬಾಂಗ್ಲಾದೇಶದ ಮುಂದಿನ ಪ್ರಧಾನಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಲವಾರು ಪ್ರಾದೇಶಿಕ ನಾಯಕರನ್ನು ಆಹ್ವಾನಿಸಿದೆ.ಭಾರತ ಸೇರಿದಂತೆ 13 ದೇಶಗಳಿಗೆ ಪ್ರಮಾಣವಚನ ಸಮಾರಂಭದ ಆಹ್ವಾನಗಳನ್ನು ಕಳುಹಿಸಲಾಗಿದೆ ಎಂದು ಬಿಎನ್‌ಪಿ ತಿಳಿಸಿದ್ದು, ಚೀನಾ, ಸೌದಿ ಅರೇಬಿಯಾ, ಪಾಕಿಸ್ತಾನ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಮಲೇಷ್ಯಾ, ಬ್ರೂನಿ, ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್ ಮತ್ತು ಭೂತಾನ್ ಇತರ ಆಹ್ವಾನಿತ ರಾಷ್ಟ್ರಗಳಾಗಿವೆ.
ತಾರಿಕ್ಗೆ ಕರೆ ಮಾಡಿದ್ದ ಪ್ರಧಾನಿ
ಬಾಂಗ್ಲಾದೇಶದ ಚುನಾವಣೆಯಲ್ಲಿ ಅದ್ಭುತ ಗೆಲುವು ಸಾಧಿಸಿರುವ ಬಿಎನ್‌ಪಿ ಮುಖ್ಯಸ್ಥ ತಾರಿಕ್ ರೆಹಮಾನ್ರಿಗೆ ಇಂದು ದೂರವಾಣಿ ಕರೆ ಮಾಡಿರುವ ಪ್ರಧಾನಿ ಮೋದಿ ತಾರಿಕ್ರನ್ನು ಅಭಿನಂದಿಸುತ್ತಾ, ಭಾರತ ಬೆಂಬಲದ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ.ಈ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ವಿಷಯ ಬಹಿರಂಗಪಡಿಸಿರುವ ಪ್ರಧಾನಿ ಮೋದಿ, ತಾರಿಕ್ ರೆಹಮಾನ್ ಅವರೊಂದಿಗೆ ಮಾತನಾಡಲು ಸಂತೋಷವಾಯಿತು. ಬಾಂಗ್ಲಾದೇಶ ಚುನಾವಣೆಯಲ್ಲಿನ ಗಮನಾರ್ಹ ಗೆಲುವಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.ರೆಹಮಾನ್ ಸರ್ಕಾರವು ಭಾರತದೊಂದಿಗೆ ಸಂಬಂಧವನ್ನು ಸುಧಾರಿಸಲು ನೋಡುತ್ತಿದೆ ಆದರೆ ಇದರ ಜವಾಬ್ದಾರಿ ನವದೆಹಲಿಯ ಮೇಲು ಇದೆ ಎಂದು ಬಿಎನ್‌ಪಿ ಮುಖ್ಯಸ್ಥರ ಸಲಹೆಗಾರ ಹುಮಾಯೂನ್ ಕಬೀರ್ ಭಾನುವಾರ ಹೇಳಿದ್ದಾರೆ. ಆದರೆ ಅವರು ಭಯೋತ್ಪಾದಕಿ ಎಂದು ಕರೆಯಲ್ಪಡುವ ಹಸೀನಾರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರ ಮಾಡಬೇಕು ಎಂದು ಹೇಳಿದರು.ಬಾಂಗ್ಲಾದೇಶದ ಸಾರ್ವಭೌಮತ್ವವನ್ನು ದುರ್ಬಲಗೊಳಿಸುವ ಯಾವುದೇ ಚಟುವಟಿಕೆಗಳಲ್ಲಿ ಭಾರತವನ್ನು ಪಾಲುದಾರಿಕೆ ಹೊಂದಿರುವಂತೆ ನೋಡಬಾರದು. ಅದನ್ನು ಪರಿಹರಿಸಿದ ಬಳಿಕ ಸಾಮಾನ್ಯ ರಾಜತಾಂತ್ರಿಕ ಸಹಕಾರವು ಪುನರಾರಂಭಗೊಳ್ಳಬಹುದು. ನಾವು ನೆರೆಹೊರೆಯವರು ಮತ್ತು ಪರಸ್ಪರ ಲಾಭಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು













































