ಶಿವಾಜಿಯೊಂದಿಗೆ ಟಿಪ್ಪು ಹೋಲಿಕೆ..ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷನ ನಾಲಿಗೆ ಕತ್ತರಿಸಿದ್ರೆ 10 ಲಕ್ಷ ಬಹುಮಾನ ನೀಡುತ್ತೇವೆ ಎಂದ ಬಿಜೆಪಿ ನಾಯಕರು

Picture of Savistara

Savistara

Bureau Report

ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ನಾಲಿಗೆ ಕತ್ತರಿಸಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಬಿಜೆಪಿ ಕಾರ್ಯಕರ್ತರು ಘೋಷಿಸಿದ ಘಟನೆ ಅಹಲ್ಯನಗರದಲ್ಲಿ ನಡೆದಿದ್ದು, ಈ ಹೇಳಿಕೆಯಿಂದಾಗಿ ದೊಡ್ಡ ಮಟ್ಟದ ರಾಜಕೀಯ ವಿವಾದ ಭುಗಿಲೆದ್ದಿದೆ.

ಸಪ್ಕಲ್, ಟಿಪ್ಪು ಸುಲ್ತಾನನನ್ನು ಛತ್ರಪತಿ ಶಿವಾಜಿ ಮಹಾರಾಜರೊಂದಿಗೆ ಹೋಲಿಸಿದ ಕಾರಣದಿಂದಾಗಿ ಈ ಬೆಳವಣಿಗೆ ನಡೆದಿದೆ ಎಂದು ತಿಳಿದುಬಂದಿದೆ.

ರಾಜನ ಪರಂಪರೆಗೆ ಅವಮಾನಅಹಲ್ಯಾನಗರದ ಛತ್ರಪತಿ ಶಿವಾಜಿ ಮಹಾರಾಜ್ ಸ್ಮಾರಕದ ಮುಂದೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದ್ದು, ಸಪ್ಕಲ್ ಹೇಳಿಕೆಯನ್ನು ಖಂಡಿಸಲು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದರು. ಸಪ್ಕಲ್​ ಮಾಡಿರುವ ಈ ಹೋಲಿಕೆ ಪೂಜ್ಯ ಮರಾಠಾ ಯೋಧ ರಾಜನ ಪರಂಪರೆಗೆ ಅವಮಾನಕರವಾಗಿದೆ ಎಂದು ಪಕ್ಷ ಆರೋಪಿಸಿದೆಸಪ್ಕಲ್ ಪೋಟೋವನ್ನು ಪ್ರತಿಭಟನಾಕಾರರು ತುಳಿದು ಹಾಕಿದ್ದು, ಕಾಂಗ್ರೆಸ್​ ಅಧ್ಯಕ್ಷರ ನಾಲಿಗೆಯನ್ನು ಕತ್ತರಿಸಿದ ಯಾರಿಗಾದರೂ ಅಹಲ್ಯಾನಗರ ಬಿಜೆಪಿ ಘಟಕದಿಂದ 10 ಲಕ್ಷ ರೂ.ಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.ಈ ಹೇಳಿಕೆ ವಿರೋಧ ಪಕ್ಷಗಳಿಂದ ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ಇದನ್ನು ಅಪಾಯಕಾರಿ ಮತ್ತು ಬೇಜವಾಬ್ದಾರಿ ಎಂದು ಕರೆದಿದ್ದಾರೆ. ಇಂತಹ ಮಾತುಗಾರಿಕೆಯಿಂದ ಉದ್ವಿಗ್ನತೆ ಹೆಚ್ಚುತ್ತದೆ ಮತ್ತು ಪ್ರಜಾಪ್ರಭುತ್ವದ ಸಂವಾದವನ್ನು ದುರ್ಬಲಗೊಳಿಸು ಸಾಧ್ಯತೆ ಇದೆ ಎಂದು ರಾಜಕೀಯ ವೀಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಘಟನೆಯ ಹಿನ್ನಲೆ..

ಮಾಲೆಗಾಂವ್ ಮಹಾನಗರ ಪಾಲಿಕೆಯಲ್ಲಿ ಟಿಪ್ಪು ಸುಲ್ತಾನ್​ ಛಾಯಾಚಿತ್ರ ಸ್ಥಾಪನೆಗೆ ಸಂಬಂಧಿಸಿದ ವಿವಾದದ ಕುರಿತು ಸಪ್ಕಲ್ ಪ್ರತಿಕ್ರಿಯೆ ನೀಡಿದ ಬಳಿಕ ಈ ವಿವಾದ ಬುಗಿಲೆದ್ದಿದೆ. ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದ ಸಪ್ಕಲ್, ಛತ್ರಪತಿ ಶಿವಾಜಿ ಮಹಾರಾಜರು ಜನರಲ್ಲಿ ಧೈರ್ಯ ಮತ್ತು ಸ್ವಾತಂತ್ರ್ಯದ ಮನೋಭಾವವನ್ನು ಪ್ರೇರೇಪಿಸಿದಂತೆಯೇ, ಟಿಪ್ಪು ಸುಲ್ತಾನ್ ಕೂಡ ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದರು, ಆದ್ದರಿಂದ ಅವರನ್ನು ಪ್ರತಿರೋಧದ ಸಂಕೇತವಾಗಿ ನೋಡಬೇಕು ಎಂದು ಹೇಳಿದ್ದರು.ಟಿಪ್ಪು ಸುಲ್ತಾನನನ್ನು ಒಬ್ಬ ಯೋಧ ಮತ್ತು ಮಣ್ಣಿನ ಮಗ ಎಂದು ಬಣ್ಣಿಸಿದ ಸಪ್ಕಲ್​, ಅವರು ಉಗ್ರಗಾಮಿ ಸಿದ್ಧಾಂತಗಳಿಗೆ ಬದ್ಧರಾಗಿರಲಿಲ್ಲ, ಟಿಪ್ಪು ವಸಾಹತುಶಾಹಿ ಆಳ್ವಿಕೆಯನ್ನು ವಿರೋಧಿಸಿದ ಧೈರ್ಯಶಾಲಿ ಆಡಳಿತಗಾರ ಎಂದು ಪುನರುಚ್ಚರಿಸಿದರು

[t4b-ticker]
error: Content is protected !!