ಇಲ್ಲಿನ ಹಳೆ ತಾಲೂಕು ಕಚೇರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿ ಯರು ಸೋಮವಾರ ರಸ್ತೆಯಲ್ಲಿ ಕುಳಿತು ದಿಢೀರ್ ಪ್ರತಿಭಟನೆ ನಡೆಸಿದ ವಿದ್ಯಮಾನ ನಡೆದಿದೆ.
ಕಾಲೇಜು ಕಟ್ಟಡದ ಒಂದು ಭಾಗವನ್ನು ಸರಕಾರಿ ಆಸ್ಪತ್ರೆಗೆ ನೀಡಲಾಗಿದ್ದು, ಅಲ್ಲಿ ಡಯಾಲಿಸಿಸ್ ಸೆಂಟರ್ ಕೆಲಸ ನಡೆಯು ತ್ತಿದೆ. ಧೂಳು ಮತ್ತು ಶಬ್ದದಿಂದಾಗಿ ತರಗತಿ ಗಳಲ್ಲಿ ಕೂರಲಾಗುತ್ತಿಲ್ಲ ಎಂದು ವಿದ್ಯಾರ್ಥಿನಿ ಯರು ಪ್ರತಿಭಟನೆ ನಡೆಸಿದರು.
ಮಾಸ್ಕ್ ಧರಿಸಿ ತರಗತಿಯಲ್ಲಿ ಕೂರ ಬೇಕಾಗಿದೆ ಎಂದು ವಿದ್ಯಾರ್ಥಿಗಳು ಅಲ ವತ್ತುಕೊಂಡರು, ವಿದ್ಯಾರ್ಥಿನಿ ಅರ್ಚನಾ, ಚೈತನ್ಯ ಮುಂತಾದವರು ಮಾತ ನಾಡಿ, ಬೊಳುವಾರಿನಲ್ಲಿ ಕಾಲೇಜಿನ ಹೊಸ ಕಟ್ಟಡ ಇನ್ನೂ ಪೂರ್ತಿಯಾಗದಿರುವ ಬಗ್ಗೆ ಅಸಮಾ ಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕರ ಭೇಟಿ: ಮಾಜಿ ಶಾಸಕ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿನೀಡಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು. ವಿದ್ಯಾರ್ಥಿನಿಯರು ರಸ್ತೆಯಲ್ಲಿ ಕೂರುವ ಸ್ಥಿತಿ ಬಂದಿದೆ. ನಾನು ಶಾಸಕನಾಗಿದ್ದಾಗ ಬೊಳುವಾರಿನಲ್ಲಿ 5 ಕೋಟಿ ರೂ. ವೆಚ್ಚದ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ಮಾಡಿದ್ದೆ. ಇನ್ನೂ ಕಾಲೇಜು ಕಟ್ಟಡ ಪೂರ್ಣಗೊಂಡಿಲ್ಲ ದಿರುವುದು ದುರಂತ. ನಿಮ್ಮ ಸಮಸ್ಯೆಗೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಶಾಸಕರು ಸ್ಪಂದಿಸದಿದ್ದಲ್ಲಿ ನಿಮ್ಮ ಜತೆ ನಾವೂ ಹೋರಾಟಕ್ಕೆ ಇಳಿಯುತ್ತೇವೆ ಎಂದರು.ಕಾಲೇಜು ವಿದ್ಯಾರ್ಥಿನಿಯರಿಗೆ ಆಗು ತ್ತಿರುವ ತೊಂದರೆಗಳನ್ನು ವೀಕ್ಷಿಸಿದರು. ಮಾಜಿ ಶಾಸಕರ ಜತೆ ಬಿಜೆಪಿ ಮುಖಂಡ ರಾದ ದಯಾನಂದ ಶೆಟ್ಟಿ ಉಜಿರೆಮಾರ್, 2.໖. ಶಿವಕುಮಾರ್, ಲೋಕೇಶ್ ಚಾಕೋಟೆ, ಮಠಿಕಂಠ, ಯುವರಾಜ್ ಪೆರಿಯತ್ತೋಡಿ, ದೀಕ್ಷಾ ಪೈ, ಸುನಿಲ್ ದಡ್ಡು, ನಾಗೇಶ್ ಟಿ.ಎಸ್., ರಫೀಕ್ ದರ್ಬೆ ಉಪಸ್ಥಿತರಿದ್ದರು.
ಗಮನಕ್ಕೆ ತಂದಿಲ್ಲ:ಶಾಸಕ ಗರಂ
ಪ್ರತಿಭಟನೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಶೋಕ್ ರೈ, ವಿದ್ಯಾರ್ಥಿನಿಯರಿಗೆ ಧೂಳು ಸಮಸ್ಯೆ ಯಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಯಾಕೆ ತಂದಿಲ್ಲ ಎಂದು ಶಾಸಕ ಅಶೋಕ್ ರೈ ಗರಂ ಆದರು.ಏಕಾಏಕಿ ವಿದ್ಯಾರ್ಥಿನಿಯರನ್ನು ರಸ್ತೆಯಲ್ಲಿ ಪ್ರತಿಭಟನೆಗೆ ಕೂರಿಸಿರುವುದು ತಪ್ಪು ಎಂದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಐವನ್ ಫ್ರಾನ್ಸಿಸ್ ಲೋಬೋ, ಸಮಸ್ಯೆಗಳನ್ನು ಶಾಸಕರಿಗೆ ವಿವರಿಸಿದರು. ಕೋಪಗೊಂಡ ಶಾಸಕರು, ನೀವು ಕ್ಷೇಮಪಾಲನಾ ಅಧಿಕಾರಿ ಯಾಗಿದ್ದಲ್ಲಿ ಮಕ್ಕಳ ಸಮಸ್ಯೆಯನ್ನು ಮೊದಲೇ ನನ್ನ ಗಮನಕ್ಕೆ ತರುತ್ತಿದ್ದಿರಿ. ಈಗ ಏನೂ ಮಾತನಾಡಬೇಡಿ ಎಂದರು. ಪ್ರಿನ್ಸಿಪಾಲ್ ವೇದಶ್ರೀ ನಿತ್ಯ ಜತೆ ಧೂಳಿನ ಸಮಸ್ಯೆಯನ್ನು ಶಾಸಕರು ಪರಿಶೀಲಿಸಿದ ಸಂದರ್ಭ, ಪ್ರಿನ್ಸಿಪಾಲ್ ವಿರುದ್ಧವೂ ಶಾಸಕರು ಗರಂ ಆಗಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ನನಗೆ ಯಾಕೆ ಸಮಸ್ಯೆಯನ್ನು ತಿಳಿಸಿಲ್ಲ ಎಂದು ಕೇಳಿದರು. ಈ ರೀತಿ ಮಾತನಾಡಬೇಡಿ ಎಂದು ಪ್ರಿನ್ಸಿ ಪಾಲರೂ ಶಾಸಕರಿಗೆ ಉತ್ತರ ನೀಡಿದರು.
ಪ್ರತಿಭಟನೆ ವಾಪಸ್
ಜೀವ ರಕ್ಷಕ ಡಯಾಸಿಸ್ ಸೆಂಟರ್ ಕೆಲಸ ಆಗುತ್ತಿವೆ. ಅದೂ ಅನಿವಾರ್ಯ. ಹೀಗಾಗಿ ನಿಮಗೆ ಧೂಳಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ. ರಾತ್ರಿ ಹೊತ್ತು ಕೆಲಸ ಮಾಡಿ ಬೆಳಗ್ಗೆ ತರಗತಿ ಆರಂಭವಾಗುವ ಮೊದಲು ತೊಳೆದು ಕೊಡಲು ಸೂಚಿಸುವೆ. ಏಪ್ರಿಲ್ ಒಳಗೆ ಹೊಸ ಕಾಲೇಜು ಕಟ್ಟಡ ಲೋಕಾರ್ಪಣೆಯಾಗಲಿದೆ ಎಂದು ಶಾಸಕರು ತಿಳಿಸಿದರು. ಶಾಸಕರ ಭರವಸೆಯಂತೆ ವಿದ್ಯಾರ್ಥಿನಿಯರು ಪ್ರತಿಭಟನೆ ವಾಪಸ್ ಪಡೆದರು. ವಿದ್ಯಾರ್ಥಿನಿಯರು ಈ ರೀತಿ ರಸ್ತೆ ಯಲ್ಲಿ ಕುಳಿತು ಪ್ರತಿಭಟನೆ ನಡೆಸು ವುದು ನಿಯಮಬಾಹಿರ ಎಂದು ಡಿವೈಎಸ್ಪಿ ತಿಳಿ ಹೇಳಿದರು.













































