ಡಿಜಿಟಲ್ ಆಡಳಿತ, ಪಾರದರ್ಶಕತೆ ಮತ್ತು ಆಡಳಿತಾತ್ಮಕ ದಕ್ಷತೆಯ ಉದ್ದೇಶಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿರುವ ‘ಕರ್ತವ್ಯ ಮೊಬೈಲ್ ಆ್ಯಪ್’ ಮೂಲಕವೇ ಮಂಗಳವಾರದಿಂದ (ಫೆ.17) ಹಾಜರಾತಿ ದಾಖಲಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಿಬ್ಬಂದಿಗೆ ಆದೇಶ ಹೊರಡಿಸಿದೆ. ಸಿಬ್ಬಂದಿಯ ಹಾಜರಾತಿ ದತ್ತಾಂಶದ ಏಕರೂಪತೆ, ಪಾರದರ್ಶಕತೆ ಖಾತ್ರಿಪಡಿಸುವುದಕ್ಕಾಗಿ ಮೊಬೈಲ್ ಆ್ಯಪ್ ಹಾಜರಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪಾಲಿಸಬೇಕಾದ ಷರತ್ತು:
- ಎಲ್ಲ ಕಾಯಂ ಬೋಧಕ/ಬೋಧಕೇತರಸಿಬ್ಬಂದಿ/ಅಧಿಕಾರಿಗಳ ಹಾಜರಾತಿ ದಾಖಲಿಸುವ ಪ್ರಕ್ರಿಯೆ ಇ-ಆಡಳಿತ, ಕ್ಯಾಮ್ಸ್ ತಕ್ಷಣದಿಂದಲೇ ಜಾರಿಗೊಳಿಸಬೇಕು. (ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಂ) ತಂಡವನ್ನು ತಕ್ಷಣವೇ ಸಂಪರ್ಕಿಸಿ ಕರ್ತವ್ಯ ಹಾಜರಾತಿಯನ್ನು ಎಚ್‌ಆರ್ ಎಂಎಸ್ ತಂತ್ರಾಂಶದೊಂದಿಗೆ ಸಂಯೋಜಿಸಲು ಕ್ರಮ ವಹಿಸಬೇಕು.
- ಸಿಬ್ಬಂದಿ ತಮ್ಮ ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ನಿತ್ಯ 2 ಬಾರಿ (ಇನ್ ಟೈಮ್, ಔಟ್ ಟೈಮ್) ಹಾಜರಾತಿ ದಾಖಲಿಸಬೇಕು.ಆ್ಯಪ್ ಹೇಗೆ ಉಪಯುಕ್ತ ಸರ್ಕಾರವು ಶೈಕ್ಷಣಿಕ ಕೌಶಲಗಳು ಮತ್ತುವೃತ್ತಿಪರ ಸಾಮರ್ಥ್ಯಗಳನ್ನು ಉನ್ನತೀಕರಿಸಲು ತರಬೇತಿ ಕಾರ್ಯಕ್ರಮ ಗಳನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುತ್ತದೆ. ಇಲ್ಲಿ ಶಿಕ್ಷಕರು/ಸಿಬ್ಬಂದಿ ಉಪಸ್ಥಿತಿ ಖಚಿತಪಡಿಸಿಕೊಳ್ಳಲು ಅನುಕೂಲವಾಗಲಿದೆ. 10 ಮತ್ತು 12ನೇ ತರಗತಿ ಪರೀಕ್ಷೆಗಳ ಫಲಿತಾಂಶಗಳ ಸುರಕ್ಷಿತ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸಿಬ್ಬಂದಿಯ ಕಾಯಂ ಹಾಜರಿ ಖಚಿತಪಡಿಸಲಿದೆ.
- ಅಸಿಬ್ಬಂದಿಯ ಮುಖಚಹರೆ ಪರಿಶೀಲನೆಯೊಂದಿಗೆ ಸುರಕ್ಷಿತ ಲಾಗಿನ್ ಮೂಲಕ ಕಾಯಂ ಸಿಬ್ಬಂದಿಯ ಹಾಜರಾತಿ ಗುರುತಿಸುವುದನ್ನು ಖಚಿತಪಡಿಸುತ್ತದೆ. ಸುಧಾರಿತ ಹಾಜರಾತಿ ಡ್ಯಾಶ್‌ಬೋರ್ಡ್ ಮತ್ತು ವರದಿಗಳನ್ನು ತ್ವರಿತವಾಗಿ ಸಂಸ್ಥೆಯ ಮುಖ್ಯಸ್ಥರಿಗೆ ಒದಗಿಸುತ್ತದೆ. ಅಕ್ರಮಕ್ಕೆ ಅವಕಾಶವಿಲ್ಲದಂತೆ ಜಿಐಎಸ್ ಮತ್ತು ಎಐ ಬಳಕೆ ಮಾಡಲಾಗಿದೆ.
ಮಕ್ಕಳ ಹಾಜರಾತಿಗೆ ‘ನಿರಂತರ’ ಆ್ಯಪ್
ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳ ಮುಖಚಹರೆ ಆಧಾರಿತ ಹಾಜರಾತಿಯನ್ನು 2026-27ನೇ ಸಾಲಿನ ಮೊದಲ ದಿನದಿಂದಲೇ ಜಾರಿಗೊಳಿಸಲು ‘ನಿರಂತರ’ ಎಂಬ ಮೊಬೈಲ್ ಆ್ಯಪ್ ಸಿದ್ಧಪಡಿಸಿದ್ದು, ಈ ಕಾರ್ಯಕ್ರಮದ ಜಾರಿಗೆ 2.16 ಕೋಟಿ ರೂ.ಶಾಲಾ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿದೆ. ಕೃತಕ ಬುದ್ಧಿಮತ್ತೆ ಆಧಾರಿತ ವಿದ್ಯಾರ್ಥಿಗಳ ಮುಖಚಹರೆಯನ್ನು ನಿರ್ವಹಿಸುವ ಮೊಬೈಲ್ ಅಪ್ಲಿಕೇಷನ್ ವ್ಯವಸ್ಥೆ ಇದಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದಿಂದಲೇ ಒಂದರಿಂದ ದ್ವಿತೀಯ ಪಿಯುಸಿವರೆಗೆ ಕಡ್ಡಾಯವಾಗಿ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶೇಷಾಧಿಕಾರಿಗಳು ಅದೇಶ ಹೊರಡಿಸಿದ್ದಾರೆ.













































