92 ಸಾವಿರ ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್‌ ನಿರ್ಮಾಣ |ಗ್ರೇಟ್ ನಿಕೋಬಾರ್‌ಗೆ ಅನುಮತಿ

Picture of Savistara

Savistara

Bureau Report

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿರುವ ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್ ನಿರ್ಮಿಸಲು ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ಅನುಮತಿ ನೀಡಿದೆ.ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಕೋಲ್ಕತದ ಪೂರ್ವ ವಲಯ ಪೀಠ ಉದ್ದೇಶಿತ 92 ಸಾವಿರ ಕೋಟಿ ರೂ. ವೆಚ್ಚದ ಟರ್ಮಿನಲ್, ಟೌನ್‌ಶಿಪ್‌ ಮತ್ತು ಯೋಜನೆ ಪ್ರದೇಶದ ಅಭಿವೃದ್ಧಿ, 450 ಎಂವಿಎ ಅನಿಲ ಮತ್ತು ಸೌರ ಆಧಾರಿತ ವಿದ್ಯುತ್‌ ಸ್ಥಾವರದ ವಿರುದ್ಧದ ಆಕ್ಷೇಪಣೆ ಅರ್ಜಿಗಳ ವಿಚಾರಣೆ ನಡೆಸಿ ಸೋಮವಾರ ಈ ಯೋಜನೆಗೆ ಷರತ್ತುಬದ್ಧ ಅನುಮತಿ ನೀಡಿ ಆದೇಶ ಹೊರಡಿಸಿದೆ. ದ್ವೀಪದ ಪರಿಸರಕ್ಕೆ ಯಾವುದೇ ಹಾನಿ ಮಾಡಬಾರದು, ಅಲ್ಲಿನ ಸಸ್ಯ, ಪ್ರಾಣಿ ಮತ್ತು ಜಲಚರಗಳನ್ನು ರಕ್ಷಿಸಬೇಕು ಎಂದು ಷರತ್ತು ವಿಧಿಸಲಾಗಿದೆ.ಈ ಯೋಜನೆಯಲ್ಲಿ ಗ್ರೇಟ್ ನಿಕೋಬಾರ್ ದ್ವೀಪದ ದಕ್ಷಿಣ ಕರಾವಳಿಯಲ್ಲಿರುವ ಗಲಾಥಿಯಾ ಕೊಲ್ಲಿಯಲ್ಲಿ ಆಳ ಸಮುದ್ರದ ಬಂದರು ನಿರ್ಮಿಸಲಾಗುವುದು. ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್ ವಿದೇಶಿ ಬಂದರುಗಳ ಮೇಲಿನ ಅವಲಂಬನೆ ತಗ್ಗಿಸಲಿದೆ. ಇದು ವರ್ಷಕ್ಕೆ 1 ಕೋಟಿ 60 ಲಕ್ಷ ಕಂಟೇನರ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಯೋಜನೆಯಲ್ಲಿ ನಾಗರಿಕ ಮತ್ತು ರಕ್ಷಣೆ ಎರಡೂ ಉದ್ದೇಶಳಿಗೆ ಬಳಕೆ ಆಗಲಿರುವ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗಾಗಿ ಸಮಗ್ರ ಟೌನ್‌ಶಿಪ್ ನಿರ್ಮಾಣವಾಗಲಿದೆ.

ಪರಿಸರವಾದಿಗಳ ವಿರೋಧ

ಗ್ರೇಟ್ ನಿಕೋಬಾರ್ ಯೋಜನೆಗೆ ಎನ್‌ಜಿಟಿ ಅನುಮತಿ ನೀಡಿರುವುದು ನಿರಾಶಾದಾಯಕ ಮತ್ತು ದುರದೃಷ್ಟಕರ. ಇದರಿಂದ ಅಲ್ಲಿನ ಪರಿಸರದ ಮೇಲೆ ವಿನಾಶಕಾರಿ ಪರಿಣಾಮ ಉಂಟಾಗಲಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!