ಅಮೆರಿಕದಲ್ಲಿ ಭೀಕರ ಹಿಮಪಾತ; 8 ಮಂದಿ ಮೃತ್ಯು

Picture of Savistara

Savistara

Bureau Report

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾ ಲೇಕ್ ತಹೋಯ್ ಸಮೀಪ ಸಂಭವಿಸಿದ ಭೀಕರ ಹಿಮಪಾತದ ವೇಳೆ ನಾಪತ್ತೆಯಾಗಿದ್ದ ಎಂಟು ಮಂದಿ ಹಿಮಜಾರುಗರ (ಸ್ಟೀಯರ್ಸ್) ಮೃತದೇಹವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದು ಕಳೆದ 50 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಭೀಕರ ಹಿಮಪಾತ ಎಂದು ಅಧಿಕಾರಿಗಳು ವಿವರಿಸಿದ್ದಾರೆ.ನಾಪತ್ತೆಯಾದವರ ರಕ್ಷಿಸುವ ಕಾರ್ಯಾಚರಣೆಯನ್ನು ಆ ಬಳಿಕ ಪತ್ತೆ ಕಾರ್ಯಾಚರಣೆಯಾಗಿ ಪರಿವರ್ತಿಸಲಾಯಿತು. ಮೂರು ದಿನಗಳ ಪ್ರವಾಸ ಕೈಗೊಂಡಿದ್ದ ಇತರ ಆರು ಮಂದಿಯನ್ನು ಮಂಗಳವಾರ ಸೀರ್ರಾ ನೆವಾಡಾ ಪರ್ವತದಲ್ಲಿ ಪ್ರಬಲ ಚಳಿಗಾಳಿಯ ವೇಳೆ ರಕ್ಷಿಸಲಾಗಿದೆ ಎಂದು ನೆವಾಡ ಕೌಂಟಿ ಶೆರೀಫ್ ಶನ್ನಾನ್ ಮೂನ್ ಹೇಳಿದ್ದಾರೆ.

ಎಲ್ಲ ಹಿಮಜಾರುಗರು ಬಿಕಾನ್ ಗಳನ್ನು ಹೊಂದಿದ್ದರು; ಆದರೆ ಏರ್‌ಬ್ಯಾಗ್‌ಗಳನ್ನು ಹೊಂದಿದ್ದರೇ ಎನ್ನುವುದು ಸ್ಪಷ್ಟವಾಗಿಲ್ಲ. ರಕ್ಷಿಸಲ್ಪಟ್ಟ ಆರು ಮಂದಿ ಶೂನ್ಯ ಡಿಗ್ರಿಗಿಂತ ಕಡಿಮೆ ತಾಪಮಾನದ ಪ್ರದೇಶದಲ್ಲಿ ಬಿಡಾರ ಹೂಡಿದ್ದರು ಹಾಗೂ ಮೂವರು ಮೃತಪಟ್ಟವರ ಸ್ಥಳಗಳನ್ನು ಗುರುತಿಸಿದರು. ಪರಿಹಾರ ತಜ್ಞರು ಎರಡು ಮೈಲು ದೂರ ಹಿಮವನ್ನು ಕತ್ತರಿಸಿಕೊಂಡು ಅವರಿದ್ದ ಪ್ರದೇಶಕ್ಕೆ ತೆರಳಿ ಮತ್ತೊಂದು ಹಿಮಬಂಡೆ ಜಾರುವುದನ್ನು ತಪ್ಪಿಸಲು ಪ್ರಯತ್ನ ಮಾಡಿದರು. ಬದುಕಿ ಉಳಿದಿರುವ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂನ್ ವಿವರಿಸಿದರು.”ಹಿಮಪಾತವನ್ನು ಕೆಲವರು ನೋಡಿದ್ದಾರೆ. ನೋಡನೋಡುತ್ತಿದ್ದಂತೆಯೇ ಅದು ಎಲ್ಲವನ್ನೂ ಹಿಂದಿಕ್ಕಿದೆ” ಎಂದು ಕ್ಯಾಪ್ಟನ್ ರಸೆಲ್ ಗ್ರೀನ್ ವಿವರಿಸಿದ್ದಾರೆ. ಎಂಟು ಮಂದಿ ಸಂತ್ರಸ್ತರು ಕೂಡಾ ಅಕ್ಕಪಕ್ಕದಲ್ಲೇ ಇದ್ದರು ಹಾಗೂ ಮೂವರು ಗೈಡ್ ಗಳಿದ್ದರು. ಅವರ ದೇಹಗಳನ್ನು ಅಪಾಯಕಾರಿ ಪರಿಸ್ಥಿತಿಯಿಂದಾಗಿ ಇನ್ನೂ ಹೊರತೆಗೆದಿಲ್ಲ ಎಂದು ಹೇಳಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!