ಇಂದಿನಿಂದ ದೇಶಾದ್ಯಂತ ರಂಜಾನ್ ಉಪವಾಸ ಆರಂಭ: ಪ್ರಧಾನಿ ಮೋದಿ, ರಾಗಾ ಶುಭಾಷಯ

Picture of Savistara

Savistara

Bureau Report

ಭಾರತದಲ್ಲಿ ಇಂದಿನಿಂದ ರಂಜಾನ್ ಉಪವಾಸ ಆರಂಭವಾಗಿದ್ದು, ರಂಜಾನ್ ಮುಬಾರಕ್ ಎಂದು ಪ್ರಧಾನಿ ಮೋದಿ ವಿಶ್ ಮಾಡಿದ್ದಾರೆ.ದೇಶಾದ್ಯಂತ ಉಪವಾಸಕ್ಕೆ ಸಿದ್ಧತೆಗಳು ಆರಂಭವಾಗಿವೆ. ರಂಜಾನ್‌ಗೆ ಮುನ್ನ ಚಂದ್ರ ದರ್ಶನವು ಸಾಂಪ್ರದಾಯಿಕ ಇಸ್ಲಾಮಿಕ್ ನಂಬಿಕೆಯಾಗಿದ್ದು, ಇದು ಪವಿತ್ರ ಮಾಸದ ಆರಂಭವನ್ನು ಸೂಚಿಸುತ್ತದೆ. ಈ ತಿಂಗಳಲ್ಲಿ ಉಪವಾಸ ಮಾಡುವುದು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಈ ಸಮಯದಲ್ಲಿ ಅವರು ಆಹಾರವನ್ನು ಸೇವಿಸುವುದನ್ನು ತ್ಯಜಿಸುತ್ತಾರೆ.ಮುಂದಿನ 30 ದಿನಗಳವರೆಗೆ ಮುಸ್ಲಿಮರು ಮುಂಜಾನೆಯಿಂದ ಸಂಜೆಯವರೆಗೆ ಉಪವಾಸ ಮಾಡುತ್ತಾರೆ. ರಂಜಾನ್ ಸಮಯದಲ್ಲಿ ಆಚರಿಸುವವರು ಸಾಮಾನ್ಯವಾಗಿ ಪ್ರವಾದಿ ಮುಹಮ್ಮದ್ ನಿಗದಿಪಡಿಸಿದ ಸಂಪ್ರದಾಯವನ್ನು ಅನುಸರಿಸಿ ಖರ್ಜೂರ ಮತ್ತು ನೀರಿನಿಂದ ತಮ್ಮ ಉಪವಾಸವನ್ನು ಮುರಿಯುತ್ತಾರೆ.ನಂತರ ಅವರು ಸಂಜೆ ಇಫ್ತಾರ್ ಕೂಟವನ್ನು ಆಯೋಜಿಸುವ ಮೂಲಕ ಭೋಜನ ಸವಿಯುತ್ತಾರೆ.

ರಂಜಾನ್‌ ಮುಬಾರಕ್! ಈ ಶುಭ ರಂಜಾನ್ ಆರಂಭವಾದ ಹಿನ್ನೆಲೆ ಸಮಾಜದಲ್ಲಿ ಒಗ್ಗಟ್ಟಿನ ಮನೋಭಾವ ಹೆಚ್ಚಿಸಲಿ. ಎಲ್ಲೆಡೆ ಶಾಂತಿ ಸಮೃದ್ಧಿ ನೆಲೆಸಲಿ ಎಂದು ಪ್ರಧಾನಿ ಮೋದಿ ಅವರು ಮುಸ್ಲಿಂ ಬಾಂಧವರಿಗೆ ಹಾರೈಸಿದ್ದಾರೆ.ರಂಜಾನ್‌ ಮುಬಾರಕ್! ಈ ಪವಿತ್ರ ಮಾಸ ಎಲ್ಲರಿಗೂ ಶಾಂತಿ, ಸಮೃದ್ಧಿ ಜೊತೆಗೆ ಉತ್ತಮ ಆರೋಗ್ಯ ಕರುಣಿಸಲಿ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಶುಭಾಶಯ ಕೋರಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!