ಕೃಷಿಯೆಂದು ರಬ್ಬರ್ ಪರಿಗಣಿಸುವ ಪ್ರಸ್ತಾವನೆ ಇಲ್ಲ: ಮಲ್ಲಿಕಾರ್ಜುನ್

Picture of Savistara

Savistara

Bureau Report

ಬೆಂಗಳೂರು, ಮಾ. 20: ರಾಜ್ಯದಲ್ಲಿ ರಬ್ಬರ್‌ಬೆಳೆಯನ್ನು ಕೃಷಿ ಬೆಳೆಯೆಂದು ಪರಿಗಣಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದ್ದಾರೆ.ರಾಜ್ಯದಲ್ಲಿ ರಬ್ಬರ್‌ಬೆಳೆಯನ್ನು ಕೃಷಿ ಬೆಳೆಯೆಂದು ಪರಿಗಣಿಸಬೇಕು ಎಂಬ ಒತ್ತಾಯ ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಲೇ ಇದೆ.ಆದರೆ ಇದೀಗ ರಾಜ್ಯ ಸರಕಾರ ಇಂತಹ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಹೇಳಿದೆ. ಈ ಹಿಂದೆ ರಬ್ಬರ್‌ ಅನ್ನು ಕೃಷಿ ಬೆಳೆಯನ್ನಾಗಿ ಪರಿವರ್ತಿಸಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಸರಕಾರ ಹೇಳಿತ್ತು. ಆದರೆ, ಇದೀಗ ಸರಕಾರ ತನ್ನ ಈ ನಿಲುವಿನಿಂದ ಹಿಂದೆ ಸರಿದಿದ್ದು ರಬ್ಬ‌ರ್ ಬಹು ವಾರ್ಷಿಕ ವಾಣಿಜ್ಯ ಬೆಳೆಯಾಗಿದೆ. ಸಾಮಾನ್ಯವಾಗಿ ಕೃಷಿ ಬೆಳೆಗಳು ಅಲ್ಪಾವಧಿಯ ಋತು ಆಧಾರಿತ ಬೆಳೆಗಳಾಗಿವೆ. ಆದ್ದರಿಂದ ಈ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದ್ದಾರೆ.

[t4b-ticker]
error: Content is protected !!