ಅಮೆರಿಕ, ಇಸ್ರೇಲ್ ಧ್ವಜಗಳನ್ನು ಚಪ್ಪಲಿಯಿಂದ ತುಳಿದ ಅಲೀಪುರ ಮುಸ್ಲಿಮರು

Picture of Savistara

Savistara

Bureau Report

ಗೌರಿಬಿದನೂರು: ತಾಲ್ಲೂಕಿನ ಅಲೀಪುರ ಗ್ರಾಮದಲ್ಲಿ ಈದ್ಉಲ್ ಫಿತ್ರಿ ಹಬ್ಬದ ಸಾಮೂಹಿಕ ಪ್ರಾರ್ಥನೆ ವೇಳೆ ಅಮೆರಿಕ ಮತ್ತು ಇಸ್ರೇಲ್ ಧ್ವಜಗಳನ್ನು ಚಪ್ಪಲಿಯಿಂದ ತುಳಿಯಲಾಯಿತು.

ಇಲ್ಲಿನ ಶಿಯಾ ಮುಸ್ಲಿಮರು ಅಮೆರಿಕ ಮತ್ತು ಇಸ್ರೇಲ್ ಧ್ವಜಗಳನ್ನು ಚಪ್ಪಲಿಯಿಂದ ತುಳಿದು ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.ಅಲೀಪುರದ ಅಂಜುಮಾನ್ ಜಾಪ್ರಿಯಾ ಸಂಘದ ಅಧ್ಯಕ್ಷ ಮೀರ ಅಲಿ ಅಬ್ಬಾಸ್ ಮಾತನಾಡಿ, ‘ನಾವು ಪ್ರತಿ ವರ್ಷವೂ ರಂಜಾನ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೆವು. ಜೈನಭಿಯಾ ಮಸೀದಿವರೆಗೆ ಮೆರವಣಿಗೆ ಬರುತ್ತಿದ್ದೆವು. ಆದರೆ ಈ ಬಾರಿ ನಮ್ಮ ಧಾರ್ಮಿಕ ಗುರು ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಆಗಿದ್ದಾರೆ. ಅವರ ನಿಧನದ ಪ್ರಯುಕ್ತ ಮೆರವಣಿಗೆ ಅಥವಾ ಆಚರಣೆಗಳಿಲ್ಲದೆ ಕೇವಲ ಪ್ರಾರ್ಥನೆ ಮತ್ತು ನಮಾಜ್‌ಗೆ ಸೀಮಿತವಾಗಿ ಹಬ್ಬ ಆಚರಿಸಲಾಗುತ್ತಿದೆ ಎಂದು ಹೇಳಿದರು.ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯಾದ ಸಂದರ್ಭದಲ್ಲಿಅಲೀಪುರದ ಶಿಯಾ ಮುಸ್ಲಿಮರು ಕಣ್ಣೀರು ಹಾಕಿದ್ದರು. ಪಟ್ಟಣದಲ್ಲಿ ಅಘೋಷಿತ ಬಂದ್‌ ಸ್ಥಿತಿ ಇತ್ತು. ಮೂರು ದಿನ ಶೋಕಾಚರಣೆ ಸಹ ನಡೆಸಿದ್ದರು.

[t4b-ticker]
error: Content is protected !!