ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ ವತಿಯಿಂದ | ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ವಿಜಯ ಸ್ಮರಣಾ ದಿನ ಧ್ವಜಾರೋಹಣ

Picture of Savistara

Savistara

Bureau Report

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲುರವರು ಮಾತನಾಡಿ 1837 ನೇ ಇಸವಿ ಮಾ.30ರಂದು ಭಾರತದ ಇತಿಹಾಸದ ಪ್ರಥಮ ಜನರಿಂದ ಸೇರಿದ ಸಂಘಟಿತ ಹೋರಾಟ ಬ್ರಿಟೀಷರ ವಿರುದ್ಧ ನಡೆಯಿತು ಎನ್ನುವ ಉಲ್ಲೇಖ 2໖.ರಾಜರು ಅವರವರ ಅಧಿಪತ್ಯ ಕಾಪಾಡಲು ಹೋರಾಟ ಮಾಡಿರುವುದು ಬಹಳಷ್ಟು ಇದೆ.ಜನರು ನ್ಯಾಯಕ್ಕಾಗಿ ಬ್ರಿಟಿಷರ ವಿರುದ್ದ ಸೆಟೆದು ನಿಂತು ಸಂಘಟಿತರಾದ ವಿಶೇಷ ದಿನವನ್ನು ಸಂಭ್ರಮಿಸುವ ಕರ್ತವ್ಯ ನಮ್ಮದು ಆ ನಿಟ್ಟಿನಲ್ಲಿ ಇಂದು ಕಾರ್ಯಕ್ರಮವನ್ನು ಮಾಡಿದ್ದೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಗೌರಿಪುರ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್, ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರಾದ ಭಾಸ್ಕರ ನೆಟ್ಟಾರು,ಶ್ರೀಮತಿ ಭಾರತಿ ಕೊಚ್ಚಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ನಮಿತಾ ಎಲ್.ರೈ, ಚಂದ್ರಶೇಖರ ಪನ್ನೆ, ಸುಧಾಕರ ಕೊಚ್ಚಿ, ಪದ್ಮನಾಭ ಪೆರುವಾಜೆ, ಶ್ಯಾಂಪ್ರಕಾಶ್ ಕುರುಂಬುಡೇಲು,ಸಾಯಿಪ್ರಸಾದ್‌ ನೆಟ್ಟಾರು,ಗಣೇಶ್ ಕೊಚ್ಚಿ,ದಿಲೀಪ್ ಗಟ್ಟಿಗಾರು, ಗ್ರಾ.ಪಂ.ಮಾಜಿ ಸದಸ್ಯೆ ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು.ದೈಹಿಕ ಶಿಕ್ಷಣ ಶಿಕ್ಷಕಿ ಸಹನಾರವರು ಕಾರ್ಯಕ್ರಮ ನಿರೂಪಿಸಿ,ಶೈಲೇಶ್ ನೆಟ್ಟಾರು ವಂದಿಸಿದರು.

[t4b-ticker]
error: Content is protected !!