ನವದೆಹಲಿ: ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ) ನಿಶ್ಚಿತಪಡಿಸಿದ್ದ ‘ಉದ್ಯೋಗದ ಹಕ್ಕಿಗೆ’ ನರೇಂದ್ರ ಮೋದಿ ಸರ್ಕಾರ ಕೊಡಲಿಯೇಟು ಹಾಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆರೋಪಿಸಿದ್ದಾರೆ. ಮನರೇಗಾಕ್ಕೆ ‘ಬೀಗ’ ಹಾಕಲಾಗಿದ್ದು ಅದರ ಸ್ಥಾನದಲ್ಲಿ ರಚಿಸಲಾಗಿದ್ದ ವಿಬಿ-ಜಿ ರಾಮ್ ಜಿ ಕಾನೂನು ಅನುಷ್ಠಾನದ ಸುಳಿವೇ ಇಲ್ಲ ಎಂದೂ ಖರ್ಗೆ ಛೇಡಿಸಿದ್ದಾರೆ. ಮೋದಿ ಜನರಿಗೆ ಆಗಾಗ ಕೋವಿಡ್ ಸಾಂಕ್ರಾಮಿಕತೆಯ ಅವಧಿಯನ್ನು ನೆನಪಿಸುತ್ತಿರುತ್ತಾರೆ. ಆದರೆ, ಯುಪಿಎ ಯುಗದ ಕಾನೂನಿನಿಂದಾಗಿ ಸಾಂಕ್ರಾಮಿಕತೆ ವೇಳೆ ಕೋಟ್ಯಂತರ ಜನರಿಗೆ ಉದ್ಯೋಗ ಪಡೆದಿದ್ದನ್ನು ಅವರು ಮರೆತಿದ್ದಾರೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.
ಜನರ ಉದ್ಯೋಗಕ್ಕೆ ಬಿಜೆಪಿ ಕೊಡಲಿ
Savistara
Bureau Report
[t4b-ticker]













































