ಪ್ರಾಣಿಗಳು ಎದುರಾಗಲಿಲ್ಲ: ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಶರಣ್ಯರ ಮಾತು

Picture of Savistara

Savistara

Bureau Report

ಮಡಿಕೇರಿ: ‘ಬೆಟ್ಟ ಹತ್ತಿ ಇಳಿಯುವಾಗ ನನ್ನ ನಡಿಗೆ ಕೊಂಚನಿಧಾನವಾಯಿತು. ಸ್ವಲ್ಪ ಹೊತ್ತಿನಲ್ಲೆ ನನ್ನೊಡನೆ ಬಂದಿದ್ದವರು ಮುಂದೆ ಹೊರಟು ಹೋಗಿದ್ದು ಅವರು ಯಾರೂ ನನ್ನ ಕಣ್ಣಿಗೆ ಬೀಳಲಿಲ್ಲ. ಆಗ ನಾನು ದಾರಿ ತಪ್ಪಿದೆ’ ಎಂದು ತಾಲ್ಲೂಕಿನ ತಡಿಯಂಡಮೋಳ್ ಬೆಟ್ಟದಲ್ಲಿ ಗುರುವಾರದಿಂದ ಕಾಣೆಯಾಗಿದ್ದ ಶರಣ್ಯ (36) ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಇದೊಂದು ಸಣ್ಣ ಪ್ರಮಾಣದ ಚಾರಣವೆಂದು ಹೆಚ್ಚು ತಿನಿಸುಗಳನ್ನಾಗಲಿ, ನೀರನ್ನಾಗಲಿ ತಂದಿರಲಿಲ್ಲ. ಕೇವಲ ಅರ್ಧ ಲೀಟ‌ರ್ ನೀರಷ್ಟೇ ಉಳಿದಿತ್ತು. ಅದು ಬಹುಬೇಗ ಮುಗಿದು ಹೋದವು. ಆಗ ನನಗೆ ಆಸರೆಯಾಗಿದ್ದೆ ಹಳ್ಳ, ಕೊಳ್ಳದ ನೀರು’ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.ಒಂದು ದಿನ ಜೋರು ಮಳೆ ಸುರಿಯಿತು. ಆದಾದ ನಂತರ ನಡೆಯಲು ಕಷ್ಟವಾಯಿತು. ಎಲ್ಲೆಂದರಲ್ಲಿ ಕೆಸರು, ಜಾರುತ್ತಿತ್ತು. ಹಾಗಾಗಿ, ನಡೆಯುವುದನ್ನೇ ಬಿಟ್ಟೆ. ಒಂದೇ ಕಡೆ ಕುಳಿತೆ. ಆದರೆ, ಮಳೆ, ಚಳಿಯಿಂದ ನಿದ್ದೆಯೆ ಬರಲಿಲ್ಲ. ಆದರೆ, ರಕ್ಷಣೆಗಾಗಿ ಯಾರಾದರೂ ಬರಬಹುದು ಎಂಬ ನಂಬಿಕೆ ಇತ್ತು ಎಂದು ತಿಳಿಸಿದರು.ಮೊಬೈಲ್‌ ಬ್ಯಾಟರಿ ಒಂದೇ ಪಾಯಿಂಟ್ ಇತ್ತು. ಅದರಲ್ಲೇ ಮೆಸೆಜ್ ಕಳುಹಿಸಲು ಪ್ರಯತ್ನಿಸಿದೆ. ಆದರೆ, ನೆಟ್‌ವರ್ಕ್ ಸಿಗುತ್ತಿರಲ್ಲ. ಪ್ರಾಣಿಗಳು ಯಾವುದೂ ಎದುರಾಗಲಿಲ್ಲ ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಸ್ಥಳೀಯರ ಅಗಾಧ ನೆರವು: ಹುಡುಕಾಟದಲ್ಲಿ ಅರಣ್ಯ ಇಲಾಖೆ, ನಕ್ಸಲ್ ನಿಗ್ರಹ ಪಡೆ, ಪೊಲೀಸರ ಜೊತೆಗೆ ಸ್ಥಳೀಯರು ಮಹತ್ವದ ಪಾತ್ರವನ್ನು ನಿಭಾಯಿಸಿದರು.ಸ್ಥಳೀಯ ಬುಡಕಟ್ಟು ಜನರು ನಿರಂತರವಾಗಿ ಶೋಧ ಕಾರ್ಯ ನಡೆಸಿದರು.’ಕೂಗುತ್ತಾ ಇರುವಾಗ ಹಳ್ಳವೊಂದರ ಆಚೆ ಬದಿಯಲ್ಲಿ ಹೆಣ್ಣಿನ ಕ್ಷೀಣ ಸ್ವರವೊಂದು ಕೇಳಿ ಬಂತು. ಆಗ ನಮಗೆ ಖಚಿತವಾಯಿತು’ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಹೇಳಿದರು.ಮಹಿಳೆ ಸುರಕ್ಷಿತವಾಗಿ ವಾಪಸ್ ಬರಲೆಂದು ದೇವರಲ್ಲಿ ಬುಡಕಟ್ಟು ಜನರು ಹರಕೆಯನ್ನೂ ಹೊತ್ತಿದ್ದರು.

News Updates

ಇಂದು ರಾತ್ರಿ ಇಡೀ ನಾಗರಿಕತೆಯ ಸರ್ವನಾಶವಾಗಲಿದೆ : ಇರಾನ್ ಮೇಲೆ ಪ್ರಬಲ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್ : 48 ಗಂಟೆ ವಿದ್ಯುತ್ ಸಂಪರ್ಕ ಉಪಯೋಗಿಸದೆ ಮನೆಯೊಳಗಿರುವಂತೆ ಭಾರತೀಯರಿಗೆ ಎಚ್ಚರಿಸಿ ಸಹಾಯವಾಣಿ ತೆರೆದ ಕೇಂದ್ರ ಸರ್ಕಾರ..!

[t4b-ticker]
error: Content is protected !!