ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಅಭಿಮಾನಿಗಳಿಗೆ ಗೆಲುವಿನ ಕಾಣಿಕೆ ನೀಡಿತು.
ಚಾಂಪಿಯನ್ ತಂಡಕ್ಕೆ ತಕ್ಕಂತೆ ಆಡಿದ ಆತಿಥೇಯರು 43 ರನ್‌ಗಳಿಂದ ಜಯಭೇರಿ ಬಾರಿಸಿತು. ಆದರೆ ಋತುರಾಜ್ ಗಾಯಕವಾಡ್ ಬಳಗವು ಒಂದು ವಾರದ ಅಂತರದಲ್ಲಿ ಸತತ ಮೂರನೇ ಸೋಲಿನ ಕಹಿ ಉಂಡಿತು. ತನ್ನ ಬೆಂಬಲಿಗರನ್ನು ನಿರಾಶೆಗೊಳಿಸಿತು.ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ಬೌಲರ್‌ಗಳು ಮೊದಲ ಹತ್ತು ಓವರ್‌ಗಳಲ್ಲಿ (1 ವಿಕೆಟ್‌ಗೆ 91) ಒಂದಿಷ್ಟು ಹಿಡಿತ ಸಾಧಿಸಿದ್ದರು. ಆದರೆ ನಂತರದ ಎಲ್ಲ ಹಂತಗಳಲ್ಲಿಯೂ ಆರ್‌ಸಿಬಿ ಮೇಲುಗೈ ಸಾಧಿಸಿತು. ಅದಕ್ಕೆ ಕಾರಣವಾಗಿದ್ದು ‘ಸ್ಥಳೀಯ ಹೀರೊ’ ದೇವದತ್ತ ಪಡಿಕ್ಕಲ್ (50; 29ಎ, 4X5, 6X1), ನಾಯಕ ರಜತ್ ಪಾಟೀದಾರ್ (ಔಟಾಗದೇ 48; 192, 4X1, 6X6) ( 70; 25ಎ, 4X3, 6X8) ಅವರ ಸ್ಫೋಟಕ ಬ್ಯಾಟಿಂಗ್. ಅವರ ಆಟದಿಂದಾಗಿ ಆತಿಥೇಯ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 250 ರನ್ ಗಳಿಸಿತು. ಆರ್‌ಸಿಬಿಯು ಐಪಿಎಲ್‌ನಲ್ಲಿ ಗಳಿಸಿದ ಮೂರನೇ ಅತಿದೊಡ್ಡ ಮೊತ್ತ ಇದು.
ಗುರಿ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಆರ್‌ಸಿಬಿಯ ವೇಗದ ಜೋಡಿ ಜೇಕಬ್ ಡಫಿ (50ಕ್ಕೆ2) ಮತ್ತು ಭುವನೇಶ್ವರ್ ಕುಮಾರ್ (41ಕ್ಕೆ3) ಬಲವಾದ ಪೆಟ್ಟುಕೊಟ್ಟರು. ಇದರಿಂದಾಗಿ ತಂಡವು 87 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಅರ್ಧಶತಕ ಗಳಿಸಿದ ಸರ್ಫರಾಜ್ ಖಾನ್ (50; 25ಎ) ದಿಟ್ಟತನ ತೋರಿದರು. ಪ್ರಶಾಂತ್ ವೀರ್ (43 ರನ್) ಮತ್ತು ಜೇಮಿ ಓವರ್ಟನ್ (37 ರನ್) ಅವರ ಆಟಕ್ಕೆ ಗೆಲುವು ಒಲಿಯಲಿಲ್ಲ. ತಂಡವು 19.4 ಓವರ್‌ಗಳಲ್ಲಿ 207 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಅನುಭವಿ ಸಂಜು ಸ್ಯಾಟ್ಸನ್, ನಾಯಕ ಋತುರಾಜ್ ಮತ್ತು ಕಳೆದ ಪಂದ್ಯದಲ್ಲಿ ಮಿಂಚಿದ್ದ ಯುವತಾರೆ ಆಯುಷ್ ಮ್ಹಾತ್ರೆ ಅವರು ಇಲ್ಲಿ ವೈಫಲ್ಯ ಅನುಭವಿಸಿದರು.
10 ಓವರ್ 159 ರನ್: ಚೆನ್ನೈ ಬೌಲರ್‌ಗಳು ಆರಂಭದಲ್ಲಿ ಬಿಗಿ ದಾಳಿ ನಡೆಸಿದರು. ಇದರಿಂದಾಗಿ ಪವರ್‌್ರ ಹಂತದಲ್ಲಿ ಬೆಂಗಳೂರು ತಂಡವು 1 ವಿಕೆಟ್‌ಗೆ 51 ರನ್ ಮಾತ್ರ ಕಲೆಹಾಕಿತು. ಹತ್ತು ಓವರ್ ಮುಗಿದಾಗಲೂ ತಂಡದ ಮೊತ್ತ ಮೂರಂಕಿ ಮುಟ್ಟಿರಲಿಲ್ಲ. ಆದರೆ ನಂತರದ ಹತ್ತು ಓವರ್‌ಗಳಲ್ಲಿ ಆರ್‌ಸಿಬಿ ಖಾತೆಗೆ 159 ರನ್‌ಗಳು ಹರಿದುಬಂದವು. ಅದಕ್ಕೆ ಕಾರಣವಾಗಿದ್ದು ಎರಡು ಜೊತೆಯಾಟಗಳು.ದೇವದತ್ತ ಹಾಗೂ ನಾಯಕ ರಜತ್ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 21 ಎಸೆತಗಳಲ್ಲಿ 58 ರನ್ ಸೂರೆ ಮಾಡಿದರು. ಅದರಲ್ಲಿ ದೇವದತ್ತ ಕಾಣಿಕೆ 33 ರನ್‌ಗಳಾಗಿದ್ದವು. ಇದಕ್ಕೂ ಮುನ್ನ ದೇವದತ್ತ ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ ಫಿಲ್ ಸಾಲ್ಟ್ ಅವರೊಂದಿಗೂ 56 ರನ್ ಸೇರಿಸಿದ್ದರು. ಬೆಂಗಳೂರಿನ ಎಡಗೈ ಬ್ಯಾಟರ್ ದೇವದತ್ತ ಅವರ ಫಿಕ್, ಪುಲ್ ಮತ್ತು ಡ್ರೈವ್‌ಗಳ ಚಿತ್ತಾರ ನೋಡುಗರ ಮನ ಗೆದ್ದಿತ್ತು. ಇನ್ನೊಂದೆಡೆ ಸಾಲ್ಟ್ (46; 30ಎ) ಅರ್ಧಶತಕದ ಅಂಚಿನಲ್ಲಿ ಎಡವಿದರು.ದೇವದತ್ತ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ದಾಖಲಿಸಿದರು. ಆದರೆ 15ನೇ ಓವರ್‌ನಲ್ಲಿ ಓವರ್ಟನ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು.
ಕ್ರೀಸ್‌ಗೆ ಬಂದ ‘ಅಜಾನುಬಾಹು’ ಬ್ಯಾಟರ್ ಟಿಮ್ ಡೇವಿಡ್ ಬೀಸಾಟ ಆರಂಭಿಸಿದರು. ರಜತ್ ಅವರಿಗಿಂತಲೂ ವೇಗವಾಗಿ ರನ್ ಗಳಿಸಿದರು. ಮುರಿಯದ ನಾಲ್ಕನೇ ವಿಕೆಟ್ ಜತೆಯಾಟದಲ್ಲಿ 99 ರನ್ ಸೇರಿಸಿದರು. ಬೌಲರ್‌ಗಳು ಇನಿಂಗ್ಸ್‌ನ ಆರಂಭದಲ್ಲಿ ಮಾಡಿದ್ದ ಶ್ರಮವೆಲ್ಲವೂ ಮಣ್ಣುಪಾಲಾಯಿತು. ಡೇವಿಡ್ ಹೊಡೆದ ಎಂಟು ಸಿಕ್ಸರ್‌ಗಳಲ್ಲಿ ಒಂದು ಬಾರಿ ಚೆಂಡು ಮೈದಾನದ ಹೊರಗೆ ಹೋಗಿಬಿತ್ತು. ಅನ್ಯುಲ್ ಹಾಕಿದ 18ನೇ ಓವರ್‌ನಲ್ಲಿ ಡೇವಿಡ್ ಕ್ಲೀನ್ ಬೌಲ್ಡ್ ಆದರು. ಆದರೆ, ಅದು ನೋಬಾಲ್ ಆಗಿತ್ತು. ಇನ್ನೊಂದೆಡೆ ರಜತ್ ಅರ್ಧಡಜನ್ ಸಿಕ್ಸರ್ ಸಿಡಿಸಿದರು.
3 ಓವರ್‌ನಲ್ಲಿ ಬೌಂಡರಿಯಿಲ್ಲ: ಆರ್‌ಸಿಬಿಯ ಇನಿಂಗ್ಸ್‌ನ ಮೊದಲಮೂರು ಓವರ್‌ಗಳಲ್ಲಿ ಒಂದೂ ಬೌಂಡರಿ ದಾಖ ಲಾಗಲಿಲ್ಲ. ಈ ಹಂತ ದಲ್ಲಿ ಫೀಲ್ಡರ್‌ಗಳು ಚುರುಕಾಗಿದ್ದರು. ಔಟ್‌ಫೀಲ್ಡ್ ಕೂಡ ನಿಧಾನವಾಗಿತ್ತು. ಚೆಂಡು ವೇಗವಾಗಿ ಉರುಳಲಿಲ್ಲ. ಖಲೀಲ್ ಹಾಕಿದ ಮೂರನೇ ಓವರ್ ನಲ್ಲಿ ವಿರಾಟ್ ಕೊಹ್ಲಿಯ ಕ್ಯಾಚ್ ಅನ್ನು ಶಿವಂ ದುಬೆ ಕೈಚೆಲ್ಲಿದರು. ಓವರ್ಟನ್ ಹಾಕಿದ ನಂತರದ ಓವರ್‌ನಲ್ಲಿ ವಿರಾಟ್ ಇನಿಂಗ್ಸ್‌ನ ಮೊದಲ ಸಿಕ್ಸರ್ ಹೊಡೆದರು. ಅದೇ ಓವರ್‌ನಲ್ಲಿ ಒಂದು ಬೌಂಡರಿ ಹೊಡೆದರು.
ಅದರೆ ನಂತರದ ಓವರ್‌ನಲ್ಲಿ ಅದ್ಭುಲ್ ಕಂಬೋಜ್ ಎಸೆತವನ್ನು ಹೊಡೆದ ಕೊಹ್ಲಿಯ ಕ್ಯಾಚ್ ಪಡೆಯುವಲ್ಲಿ ಶಿವಂ ದುಬೆ ತಪ್ಪು ಮಾಡಲಿಲ್ಲ.











































