ಬೆಂಗಳೂರು: 2025-26ನೇ ಸಾಲಿನ ಪಿಯುಸಿ ಫಲಿತಾಂಶದ್ವಿತೀಯ ಪಿಯುಸಿ (2nd PUC Results) ಫಲಿತಾಂಶ ಗುರುವಾರ (ಏ.9) ಪ್ರಕಟವಾಗಿದೆ.ಈ ಬಾರಿ ಶೇಕಡಾ 86.48 ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಫಲಿತಾಂಶದಲ್ಲಿ ಉಡುಪಿ ಜಿಲ್ಲೆ 96.39 ಪ್ರತಿಶತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಉಡುಪಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಕನ್ನಡ(ಶೇ.96.35) ದ್ವಿತೀಯ ಸ್ಥಾನ, ಕೊಡಗು(ಶೇ.92.34) ಮೂರನೇ ಸ್ಥಾನ, ವಿಜಯಪುರ(ಶೇ.92.00) ನಾಲ್ಕನೇ ಸ್ಥಾನ,ಉತ್ತರಕನ್ನಡ(91.78) ಐದನೇ ಸ್ಥಾನವನ್ನು ಪಡೆದುಕೊಂಡಿದ್ದು, ಯಾದಗಿರಿ(ಶೇ.71.21) ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ ಎಂದು ಸಚಿವರು ಹೇಳಿದ್ದಾರೆ.88.70 ಪ್ರತಿಶತ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಈ ಸಲನೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.83.65 ಬಾಲಕರು ಉತ್ತೀರ್ಣರಾಗಿದ್ದಾರೆ.ಕಲಾ ವಿಭಾಗ 72.86, ವಾಣಿಜ್ಯ ಶೇ.88.04 ಫಲಿತಾಂಶ, ವಿಜ್ಞಾನ ವಿಭಾಗದಲ್ಲಿ 91.69ಶೇ.ರಷ್ಟು ಫಲಿತಾಂಶ ಬಂದಿದೆ. ಈ ಸಲ 1,70,529 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದಾರೆಎಂದು ಸಚಿವರು ಹೇಳಿದ್ದಾರೆ.
ದಾಖಲೆ ಮಟ್ಟದ ಫಲಿತಾಂಶ
ಈ ಬಾರಿ ಒಟ್ಟು 6,94,545 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 5,66,608 ಲಕ್ಷ ವಿದ್ಯಾರ್ಥಿಗಳು ಯಶಸ್ವಿಯಾಗಿ ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ತೇರ್ಗಡೆಯಾದವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿರುವುದು ವಿಶೇಷ. ಶಿಕ್ಷಣ ಇಲಾಖೆಯ ಸುಧಾರಿತ ಕ್ರಮಗಳು ಮತ್ತು ವಿದ್ಯಾರ್ಥಿಗಳ ಪರಿಶ್ರಮ ಈ ದಾಖಲೆ ಫಲಿತಾಂಶಕ್ಕೆ ಕಾರಣ ಎನ್ನಲಾಗಿದೆ.
ನೀತಿ ಸಂಹಿತೆ ನಡುವೆ ಫಲಿತಾಂಶ ಘೋಷಣೆ
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಕಾರಣದಿಂದಾಗಿ ಯಾವುದೇ ಸಾರ್ವಜನಿಕ ಸಮಾರಂಭವಿಲ್ಲದೆ ಮೊದಲು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲಾಯಿತು. ಆನಂತರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಅಂಕಿಅಂಶಗಳನ್ನು ಪ್ರಕಟಿಸಿದರು.
ಜಿಲ್ಲಾವಾರು ಫಲಿತಾಂಶ
ಉಡುಪಿ – 96.39%
ದಕ್ಷಿಣ ಕನ್ನಡ – 96.35%
ಕೊಡಗು – 92.34%
ವಿಜಯಪುರ – 92%
ಉತ್ತರ ಕನ್ನಡ – 91.78%
ಬೆಂಗಳೂರು ಗ್ರಾಮಾಂತರ – 91.00%
ಚಿಕ್ಕಮಗಳೂರು – 90.80%
ಬೆಂಗಳೂರು ದಕ್ಷಿಣ – 90.55%
ಚಿಕ್ಕಬಳ್ಳಾಪುರ – 90.24%
ಬೆಂಗಳೂರು ಉತ್ತರ – 90.05%
ಹಾಸನ – 89.71%
ಮಂಡ್ಯ – 88.85%
ರಾಮನಗರ – 87.90%
ಕೋಲಾರ – 87.38%
ಶಿವಮೊಗ್ಗ – 87.62%
ತುಮಕೂರು – 86.89%
ಕೊಪ್ಪಳ – 86.80%
ಚಾಮರಾಜನಗರ – 84.68%
ಮೈಸೂರು – 84.80%
ಬೀದರ್ – 84.61%
ಬಾಗಲಕೋಟೆ – 84.12%
ಹಾವೇರಿ – 84.11%ಧಾರಾವಾಡ – 83.31%
ಚಿಕ್ಕೋಡಿ – 83.10%
ದಾವಣಗೆರೆ – 81.99%
ಬೆಳಗಾವಿ – 80.32%
ಚಿತ್ರದುರ್ಗ – 79.12%
ಬಳ್ಳಾರಿ – 78.69%
ಕಲಬುರಗಿ – 76.97%
ಗದಗ – 76.65%
ರಾಯಚೂರು – 74.09%
ಯಾದಗಿರಿ – 71.21%










































