ಮಧ್ಯಪ್ರಾಚ್ಯ ಯುದ್ಧವಿರಾಮ: 40 ದಿನಗಳ ಬಳಿಕ ಕುವೈತ್‌ನಿಂದ ಮಂಗಳೂರಿಗೆ ವಿಮಾನ ಆಗಮನ

Picture of Savistara

Savistara

Bureau Report

ಮಂಗಳೂರು, ಎ.9: ಮಧ್ಯಪ್ರಾಚ್ಯ ಯುದ್ಧ ವಿರಾಮದ ಬಳಿಕ ಕುವೈತ್‌ನಿಂದ ಮಂಗಳೂರಿಗೆ ಪ್ರಥಮ ವಿಶೇಷ ವಿಮಾನವು ಗುರುವಾರ ಸಂಜೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.ಫೆ.28ರಿಂದ ಕುವೈತ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಚ್ಚಲ್ಪಟ್ಟಿತ್ತು. ಎ.8ರವರೆಗೆ ಯಾವ ವಿಮಾನವು ಹಾರಾಟ ನಡೆಸಿರಲಿಲ್ಲ ಎ.8ರಂದು ಸಂಜೆ ಕುವೈತ್‌ನಿಂದ ಬಸ್‌ನಲ್ಲಿ ಹೊರಟು ವಿಸಿಟ್ ವೀಸಾದ ಮೂಲಕ ಸೌದಿ ಅರೇಬಿಯಾದ ಗಡಿ ದಾಟಿ ದಮಾಮ್ ವಿಮಾನ ನಿಲ್ದಾಣ ತಲುಪಿತು. ಜಿಮ್ಮಿ ಮೌಸಾ ನೇತೃತ್ವದಲ್ಲಿ ನಾಲ್ಕು ಮಂದಿ ಸಿಬ್ಬಂದಿಯೊಂದಿಗೆ ಎ.9ರಂದು ಬೆಳಗ್ಗೆ 9ಗಂಟೆಗೆ ಜಝೀರಾ ವಿಮಾನದ ಮೂಲಕ ಹೊರಟು ಸಂಜೆ 4:25ಕ್ಕೆ ಮಂಗಳೂರಿಗೆ ಆಗಮಿಸಿತು.ಮಧ್ಯಪ್ರಾಚ್ಯ ಯುದ್ಧ ವಿರಾಮದ ಬಳಿಕ ಅಂದರೆ ಸುಮಾರು 40 ದಿನಗಳ ಬಳಿಕ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದ ವಿದೇಶದ ವಿಮಾನದಲ್ಲಿ 11 ಮಕ್ಕಳ ಸಹಿತ 181 ಪ್ರಯಾಣಿಕರಿದ್ದರು.

‘ಕುವೈತ್‌ನಲ್ಲಿ ಇನ್ನೂ ವಿಮಾನ ಹಾರಾಟ ಪ್ರಕ್ರಿಯೆ ಸಹಜಗೊಂಡಿಲ್ಲ. ಆದಾಗ್ಯೂ ಕುವೈತ್‌ನಿಂದ ದಮ್ಮಾಮ್‌ಗೆ ಬರುವುದಕ್ಕೆ ಎಲ್ಲಾ ಪ್ರಯಾಣಿಕರಿಗೂ ಜಝೀರಾ ಕಂಪೆನಿ ಬಸ್‌ ವ್ಯವಸ್ಥೆಯನ್ನು ಮಾಡಿತ್ತು. ಫೆ.28ಕ್ಕೆ ಯುದ್ಧ ಆರಂಭದೊಂದಿಗೆ ಕುವೈತ್ ಏರ್‌ಪೋರ್ಟ್ ಮುಚ್ಚಿತ್ತು. ಇದರಿಂದ ಹಲವರು ಊರಿಗೆ ಬರಲಾಗದೆ ತೊಂದರೆಗೆ ಸಿಲುಕಿದ್ದರು. ಇದೀಗ ಕುವೈತ್ ಸರಕಾರವು ಭಾರತದಿಂದ ವಿಸಿಟ್ ವೀಸಾದಲ್ಲಿ ಬಂದವರಿಗೆ ವಿಸ್ತರಣೆ ಮಾಡಿರುವು ದರಿಂದ ತುಂಬಾ ಅನುಕೂಲವಾಗಿದೆ. ಸರಕಾಗಳಲ್ಲದೆ ಜಝೀರಾ ಏರ್‌ಲೈನ್ಸ್ ಕೂಡ ತುಂಬಾ ಸಹಕಾರ ನೀಡಿದೆ ಎಂದು ಗಲ್ಫ್ ಕನ್ನಡಿಗರ ಒಕ್ಕೂಟದ ಉಪಾಧ್ಯಕ್ಷ ಸುರೇಶ್‌ ರಾವ್ ನೇರಂಬಳ್ಳಿ ಹೇಳಿದ್ದಾರೆ.

*ಗುರುವಾರ ಸಂಜೆ 6:10ಕ್ಕೆ ಜಝೀರಾ ವಿಮಾನವು ಮತ್ತೆ ಕುವೈತ್‌ಗೆ ಪ್ರಯಾಣ ಬೆಳೆಸಿತು. ಒಂದು ಮಗು ಸಹಿತ 151 ಪ್ರಯಾಣಿಕರು ಈ ವಿಮಾನದಲ್ಲಿದ್ದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!