ಕರ್ನಾಟಕದ ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಪೆಬ್ರವರಿ 27, 1943 ರಲ್ಲಿ ಜನಿಸಿದ ಯಡಿಯೂರಪ್ಪ ರವರು ತಮ್ಮ ಸಾಮಾಜಿಕ, ರಾಜಕೀಯ ಜೀವನವನ್ನು ಶಿವಮೊಗ್ಗದ ಶಿಕಾರಿಪುರದಲ್ಲಿ ಆರಂಭಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಬೆಳೆದ ಅವರು ಸಂಘದ ಶಿಸ್ತು, ಬದ್ಧತೆಯನ್ನು ಕರಗತವಾಗಿಸಿ ರಾಜಕೀಯದ ಎಲ್ಲಾ ಮಜಲುಗಳಲ್ಲಿ ಜವಾಬ್ದಾರಿಯನ್ನು ನಿರ್ವಹಿಸಿ ಉನ್ನತ ಸ್ಥಾನಕ್ಕೆ ಏರಿದ ದೀಮಂತ ನಾಯಕ. ಪುರಸಭಾ ಸದಸ್ಯರಾಗಿ ರಾಜಕೀಯದಲ್ಲಿ ತಮ್ಮ ಹೆಜ್ಜೆಯನ್ನಿಟ್ಟು, ಅಧ್ಯಕ್ಷರಾಗಿ, ಶಾಸಕರಾಗಿ, ಸಂಸದರಾಗಿ, ವಿಪಕ್ಷ ನಾಯಕರಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾಗಿ ಜನನಾಯಕನಾಗಿ ಹೊರಹೊಮ್ಮಿದವರು.
ಭಾರತೀಯ ಜನತಾ ಪಾರ್ಟಿಯನ್ನು ರಾಜ್ಯದಲ್ಲಿ ಭದ್ರವಾಗಿ ತಳವೂರಲು ಸೈಕಲ್ ಮೂಲಕ ಪ್ರವಾಸವನ್ನು ಗೈದು ಬಿ.ಜೆ.ಪಿ. ಗೆ ದಕ್ಷಿಣದಲ್ಲಿ ಅಧಿಕಾರದ ಹೆಬ್ಬಾಗಿಲನ್ನು ತೆರೆಯಲು ಕಾರಣೀಭೂತರಾದ ದಣಿವರಿಯದ ನಾಯಕ ರಾಜಾಹುಲಿ ಬಿ.ಎಸ್.ವೈ.
ಮುಖ್ಯಮಂತ್ರಿ ಯಾಗಿ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರ, ಪ್ರಪ್ರಥಮ ಬಾರಿಗೆ ಕೃಷಿ ಬಜೆಟ್ ನೀಡಿದವರು. ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮೀ ಯೋಜನೆ ನೀಡಿದವರು. ಶಾಲಾ ಮಕ್ಕಳಿಗೆ ಸೈಕಲ್ ನೀಡಿದವರು. 35,000 ಸಾವಿರ ಆಸುಪಾಸು ಇದ್ದ ರಾಜ್ಯದ ಬಜೆಟನ್ನು ಲಕ್ಷ ಕೋಟಿಗೆ ತಂದವರು ಆ ಮೂಲಕ ರಾಜ್ಯದಲ್ಲಿ ಅಭಿವೃದ್ಧಿಗೆ ಶರವೇಗ ನೀಡಿದ ಸರದಾರ ಬಿ.ಎಸ್.ವೈ. ಸುವರ್ಣ ಗ್ರಾಮ ಯೋಜನೆ ಮೂಲಕ ಗ್ರಾಮಗಳ ಸಶಕ್ತೀಕರಣ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಮೂಲಕ ಹಳ್ಳಿ ಹಳ್ಳಿಗಳ ಸಂಪರ್ಕ ರಸ್ತೆಗಳ ನಿರ್ಮಾಣ, ಪ್ರಪ್ರಥಮ ಬಾರಿಗೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಮಠ, ಮಂದಿರಗಳಿಗೆ ಧಾರ್ಮಿಕ ದತ್ತಿ ಇಲಾಖೆ ಮೂಲಕ ಆರ್ಥಿಕ ಅನುದಾನ, ಪ್ರಾಕೃತಿಕ ವಿಕೋಪದಲ್ಲಿ ನಿವೇಶನ ಕಳಕೊಂಡವರಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ, ಕೋರೋನಾ ಸಂಧರ್ಭದಲ್ಲಿ, ರಿಕ್ಷಾ ಚಾಲಕರಿಗೆ, ಕಾರ್ಮಿಕರಿಗೆ 5,000 ಸಾವಿರ ರೂಪಾಯಿ ಖಾತೆಗೆ ಹಾಕುವುದರ ಮೂಲಕ ಬಡವರ ಪಾಲಿನ ಕಾಮಧೇನು ವಾಗಿ ಅಧಿಕಾರ ನಡೆಸಿದವರು.
ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ವಿಶೇಷ ವ್ಯಾಮೋಹವನ್ನು ಇಟ್ಟವರು ಬಿ.ಎಸ್.ವೈ. ಪ್ರಪ್ರಥಮ ಬಾರಿಗೆ ಮುಖ್ಯಮಂತ್ರಿ ಯಾದ ಸಂಧರ್ಭದಲ್ಲಿ 200 ಕೋಟಿ ಹಣವನ್ನು ಮಂಗಳೂರು ಮಹಾನಗರ ಪಾಲಿಕೆಗೆ ನೀಡುವುದರ ಮೂಲಕ ನಗರದ ಅಭಿವೃದ್ಧಿಗೆ ಮುನ್ನುಡಿ ಇರಿಸಿದವರು. ಶ್ರಮಜೀವಿ ಮೀನುಗಾರರ ಸಂಕಷ್ಟ ಗಳಿಗೆ ಆಸರೆಯಾದವರು. ಮೀನುಗಾರರ ಸಾಲಮನ್ನಾ, ಮತ್ಸ ಯೋಜನೆ, ರಿಯಾಯಿತಿ ದರದಲ್ಲಿ ಡಿಸೇಲ್, ಬೋಟ್ ಖರೀದಿಗೆ ಸಬ್ಸಿಡಿ, ಮೂರ್ತೆದಾರರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಇನ್ನೂ ಹಲವಾರು ಯೋಜನೆಗಳನ್ನು ನೀಡಿರುವ ಅದ್ಬುತ ನಾಯಕ, ಕಾಯಕಯೋಗಿ ಯಂತೆ ಕಾಲಿಗೆ ಚಕ್ರ ಕಟ್ಟಿದಂತೆ ಪಕ್ಷದ ಸಂಘಟನೆ ಮತ್ತು ಅಧಿಕಾರದ ಪಟ್ಟವನ್ನು ಸಮರ್ಥವಾಗಿ ಮತ್ತು ಜನಾನುರಾಗಿ ಯಾಗಿ ನಿರ್ವಹಿಸಿದವರು ನಮ್ಮ ಯಡಿಯೂರಪ್ಪಾಜಿ.
ಭಾರತೀಯ ಜನತಾ ಪಾರ್ಟಿಗೆ ದಕ್ಷಿಣದಲ್ಲಿ ಸಂಘಟನೆಯ ಬಲ ಮತ್ತು ಅಧಿಕಾರದ ಪೀಠವನ್ನು ನೀಡಿರುವ ಭಗೀರಥ ಬಿ.ಎಸ್.ವೈ. ಯವರ ಸಾಮಾಜಿಕ ಜೀವನದ ಸುವರ್ಣ ಮಹೋತ್ಸವವನ್ನು ಅಭಿಮಾನೋತ್ಸವ ವಾಗಿ ಮೇ 9 ರಂದು ಚಿತ್ರದುರ್ಗ ದಲ್ಲಿ ಅಭೂತಪೂರ್ವ ವಾಗಿ ಆಚರಿಸಲು ನಿರ್ಧರಿಸಿರುವುದು ಮಹಾ ಸಂತೋಷದ ವಿಚಾರ. ನಾಡು ಕಂಡ ಅಪರೂಪದ ನಾಯಕ ರಾಜಾಹುಲಿ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ರವರು ಕೇವಲ ವ್ಯಕ್ತಿಯಲ್ಲಿ ಅವರು ಕರ್ನಾಟಕದ ಶಕ್ತಿ. ಎಂದು ಸತೀಶ್ ಕುಂಪಲರವರು ಯಡಿಯೂರಪ್ಪ ಅವರ ಬಗೆಗಿನ ಮನದಾಳದ ಮಾತನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು.











































