ಗಗನಕ್ಕೇರಿದ ಮೈಲುತುತ್ತು ದರ | ಕೃಷಿಕರಿಗೆ ಸವಲಾದ ಬೋರ್ಡೋ ಸಿಂಪಡಣೆ ಖರ್ಚು ವೆಚ್ಚ

Picture of Savistara

Savistara

Bureau Report

ಪುತ್ತೂರು: ಅಡಿಕೆ ಬೆಳೆಯನ್ನು ಬಾಧಿಸುವ ಕೊಳೆರೋಗ ಮತ್ತು ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ಬೆಳೆಗಾರರು ಮಳೆಗಾಲದಲ್ಲಿ ಸಿಂಪಡಣೆ ಮಾಡುತ್ತಿರುವ ಬೋರ್ಡೋದ್ರಾವಣದಲ್ಲಿ ಬಳಸುವ ಮೈಲುತುತ್ತು ದರ ಕಳೆದ ವರ್ಷಕ್ಕಿಂತ ಒಂದೂವರೆ ಪಟ್ಟು ಹೆಚ್ಚಳವಾಗಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮಳೆಗಾಲದಲ್ಲಿ ಅಡಿಕೆಗೆ ಕೊಳೆ ರೋಗ ಬಾಧಿಸುವುದರಿಂದ ಬೆಳೆಗಾರರು ಪೂರ್ವಭಾವಿಯಾಗಿ ಮೇ ತಿಂಗಳ ಅಂತ್ಯದಲ್ಲಿ ಮೈಲುತುತ್ತು ಮತ್ತು ಸುಣ್ಣ ಮಿಶ್ರಣ ಸಿಂಪಡಣೆಗೆ ಸಿದ್ಧವಾಗುತ್ತಾರೆ.ಇದಕ್ಕಾಗಿ ಮೇ ಮೊದಲ ವಾರದಿಂದಲೇ ಕೃಷಿಕರು ಮೈಲುತುತ್ತು ದಾಸ್ತಾನು ಮಾಡಲು ಆರಂಭಿಸುತ್ತಾರೆ. ಸಾಧಾರಣವಾಗಿ ಜೂನ್ ತಿಂಗಳಿನ ಆರಂಭದಲ್ಲಿ ಮುಂಗಾರು ಮಳೆ ಶುರುವಾಗುತ್ತಿದ್ದು ಇದರೊಂದಿಗೆ ಕೃಷಿಕರು ಬೋರ್ಡೋ ದ್ರಾವಣ ಸಿಂಪಡಿಸುತ್ತಾರೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಕನಿಷ್ಟ ಮೂರು ಬಾರಿ ಬೋರ್ಡೋ ದ್ರಾವಣ ಸಿಂಪಡಣೆ ಮಾಡುತ್ತಿದ್ದು ಅಡಿಕೆ ಕೊಳೆ ರೋಗ ಉಲ್ಬಣಿಸಿದರೆ, ಕೆಲವರು ನಾಲ್ಕು ಬಾರಿಯೂ ಔಷಧ ಸಿಂಪಡಣೆ ಮಾಡುತ್ತಾರೆ.

ಪೂರೈಕೆಯಲ್ಲೂ ವ್ಯತ್ಯಯ:ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಅನುಮತಿ ಪಡೆದ ಅಧಿಕೃತ ಮಾರಾಟಗಾರರ ಅಂಗಡಿಗಳಲ್ಲಿ ಮಾತ್ರ ಮೈಲುತುತ್ತು ಸಿಗುತ್ತದೆ. ಈ ಬಾರಿ ಹೆಚ್ಚಿನ ಅಂಗಡಿಗಳಲ್ಲಿ ಮೈಲುತುತ್ತು ಬೇಡಿಕೆಯಷ್ಟು ಪೂರೈಕೆ ಲಭ್ಯವಾಗುತ್ತಿಲ್ಲ.

4G+84ತಾಮ್ರದ ದರ ಏರಿಕೆಯಾಗಿರುವ ಕಾರಣ ಮೈಲುತುತ್ತು ದರ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಸುಮಾರು 25ಕ್ಕೂ ಹೆಚ್ಚು ಕಂಪನಿಗಳ ಮೈಲುತುತ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳಲ್ಲಿ 10ರಷ್ಟು ಕಂಪನಿಗಳ ಮೈಲುತುತ್ತಿಗೆ ಬೇಡಿಕೆ ಹೆಚ್ಚಿದ್ದು ಮುಂಗಾರು ಪೂರ್ವದಲ್ಲಿ ತಾಲೂಕಿನಲ್ಲಿಯೇ ಅಂದಾಜು 100 ಟನ್‌ನಷ್ಟು ಮಾರಾಟವಾಗುತ್ತದೆ. ದರ ಇನ್ನೂ ಹೆಚ್ಚಾಗಬಹುದೆಂಬ ಆತಂಕ ಹಾಗೂ ಪೂರೈಕೆಯಲ್ಲಿ ವ್ಯತ್ತಯ ಆಗಬಹುದೆಂಬ ಭಯದಿಂದ ಕೃಷಿಕರು ಈಗಾಗಲೇ ಮೈಲುತುತ್ತು ದಾಸ್ತಾನು ಮಾಡಲು ಪ್ರಾರಂಭಿಸಿದ್ದಾರೆ. ಆದರೆ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ ಎನ್ನುವುದು ಆಕ್ರೋ ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.

ಕೊಳೆರೋಗಕ್ಕೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ, ಅಡಿಕೆ ಗೊನೆಗಳ ಜೊತೆಗೆ ಮರದ ಸೋಗೆಗಳಿಗೂ (ಗರಿ) ಮೂರು ಬಾರಿ ಬೋರ್ಡೋ ದ್ರಾವಣ ಸಿಂಪಡಿಸುವುದು ಅನಿವಾರ್ಯವೆಂದು ಸಿಪಿಸಿಆರ್‌ಐ ಶಿಫಾರಸು ಮಾಡಿದೆ. ಆದುದರಿಂದ ಸೋಗೆಗೂ ಸಿಂಪಡಣೆ ಮಾಡಲು ಮೈಲುತುತ್ತು ಬಳಕೆ ಹೆಚ್ಚಾಗಿದ್ದು, ಸಿಂಪಡಣೆಗಾಗಿ ಪ್ರತಿ ಎಕರೆಗೆ ಅಂದಾಜು 10 ಸಾವಿರದಿಂದ 20 ಸಾವಿರದಷ್ಟು ಹೆಚ್ಚುವರಿ ವೆಚ್ಚ-ವಾಗಲಿದೆ ಎಂದು ಕೃಷಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಳೆರೋಗಕ್ಕೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ, ಅಡಿಕೆ ಗೊನೆಗಳ ಜೊತೆಗೆ ಮರದ ಸೋಗೆಗಳಿಗೂ (ಗರಿ) ಮೂರು ಬಾರಿ ಬೋರ್ಡೋ ದ್ರಾವಣ ಸಿಂಪಡಿಸುವುದು ಅನಿವಾರ್ಯವೆಂದು ಸಿಪಿಸಿಆರ್‌ಐ ಶಿಫಾರಸು ಮಾಡಿದೆ. ಆದುದರಿಂದ ಸೋಗೆಗೂ ಸಿಂಪಡಣೆ ಮಾಡಲು ಮೈಲುತುತ್ತು ಬಳಕೆ ಹೆಚ್ಚಾಗಿದ್ದು, ಸಿಂಪಡಣೆಗಾಗಿ ಪ್ರತಿ ಎಕರೆಗೆ ಅಂದಾಜು 10 ಸಾವಿರದಿಂದ 20 ಸಾವಿರದಷ್ಟು ಹೆಚ್ಚುವರಿ ವೆಚ್ಚ-ವಾಗಲಿದೆ ಎಂದು ಕೃಷಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಳುವರಿ ಕುಸಿತ, ರಸಗೊಬ್ಬರ ದರ ಹೆಚ್ಚಳ ಹಾಗೂ ಮೈಲುತುತ್ತು ದರ ದುಪ್ಪಟ್ಟಾಗಿರುವುದರಿಂದ ಬೆಳೆಗಾರರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.

ದರ ರೂ. 200ರಷ್ಟು ಹೆಚ್ಚಳ

ಈ ಬಾರಿ ಮೈಲುತುತ್ತು ದರ ಕೆ.ಜಿ.ಯಲ್ಲಿ ರೂ. 200ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಮೈಲುತುತ್ತು ದರ ಕೆ.ಜಿ.ಯೊಂದಕ್ಕೆ ಕನಿಷ್ಠ ರೂ. 270 ರಿಂದ 350ರವರೆಗೆ ಇತ್ತು. ಪ್ರಸ್ತುತ ಕನಿಷ್ಠ 450 ರಿಂದ 500 ರವರೆಗೆ ಏರಿಕೆಯಾಗಿದೆ. ಅಲ್ಲದೆ ಆಗತ್ಯಕ್ಕೆ ತಕ್ಕಷ್ಟು ಪೂರೈಕೆಯೂ ಇಲ್ಲದಿರುವುದು ಅಡಿಕೆ ಬೆಳೆಗಾರರನ್ನು ಕಂಗೆಡಿಸಿದೆ.

[t4b-ticker]
error: Content is protected !!