ಹತ್ತೂರುಗಿಂತ ಬಿಜೆಪಿ ಗೆ ಪುತ್ತೂರು ಕ್ಷೇತ್ರದ್ದೆ ಚಿಂತೆ | ಚುನಾವಣೆಗೆ ಎರಡು ವರ್ಷ ಬಾಕಿ, ಸಾಲು ಸಾಲು ಅಕಾಂಕ್ಷಿಗಳು

Picture of Savistara

Savistara

Bureau Report

ಪುತ್ತೂರು :ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಉಳಿದಿರುವಂತೆ ಸಂಘ ಪರಿವಾರದ ಪವರ್ ಸೆಂಟರ್ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ತಲಾಷೆ ಪ್ರಾರಂಭವಾಗಿದೆ, ಹಿರಿಯ ಜನಸಂಘ ನಾಯಕರಾದ ದಿವಂಗತ ರಾಮ್ ಭಟ್ ಪ್ರತಿನಿಧಿಸಿದ ಕ್ಷೇತ್ರವಾಗಿದ್ದ ಪುತ್ತೂರು ತದ ನಂತರ ಡಿವಿ ಸದಾನಂದ ಗೌಡರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಒಟ್ಟು ಎರಡು ಬಾರಿ ಈ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಎದುರಿಸಿತ್ತು ಈ ಹಿ‌ಂದೆ ಶಕುಂತಲಾ ಶೆಟ್ಟಿ ಬಂಡಾಯ ನಿಂತಾಗ ಬಿಜೆಪಿ ಈ ಕ್ಷೇತ್ರ ಗೆದ್ದುಕೊಂಡಿತ್ತು ಆದರೆ ಕಳೆದ ಬಾರಿ ಅರುಣ್ ಪುತ್ತಿಲರ ಬಂಡಾಯದಿಂದ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಈ ಕ್ಷೇತ್ರದಲ್ಲಿ ಜಾತಿ ಆಧಾರಿತವಾಗಿ ನೀಡುವುದಾದಲ್ಲಿ ಒಕ್ಕಲಿಗರ ಮತ ಹೆಚ್ಚಿದ್ದು ನಂತರ ಬಿಲ್ಲವ ಬ್ರಾಹ್ಮಣ ಮತ್ತು ಬಂಟ್ಸ್ ಸಮಾಜದ ಮತದಾರರು ಹೆಚ್ಚಿದ್ದಾರೆ ಕಳೆದ ಬಾರಿ ಬಿಜೆಪಿಯಿಂದ ಕೊನೆಕ್ಷಣದಲ್ಲಿ ಆಶಾ ತಿಮ್ಮಪ್ಪ ಅಭ್ಯರ್ಥಿತನದ ಅಯ್ಕೆ ಬಿಜೆಪಿ ಗೆ ದೊಡ್ಡ ಹೊಡೆತ ನೀಡಿತ್ತು. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಮತ ಪುತ್ತಿಲರಿಗೆ ವರ್ಗಾವಣೆಯಾಗಿತ್ತು. ಈ ಬಾರಿ ಬಿಜೆಪಿ ಯಿಂದ ಅರುಣ್ ಪುತ್ತಿಲರಿಗೆ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ಯಲ್ಲಿ ಗೊಂದಲಗಳಿವೆ, ಬಿಜೆಪಿ ಯಲ್ಲಿ ಟಿಕೆಟ್ ನೀಡದೆ ಇದ್ದ ಪಕ್ಷದಲ್ಲಿ ಬಂಡಾಯವಾಗಿ ಮತ್ತೆ ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ಪ್ರತಿಕ್ರಿಯೆ ಪುತ್ತಿಲರು ಈ ಬಗ್ಗೆ ನೀಡಿಲ್ಲ ಆದರೆ ಅವರ ಪರಿವಾರ ಸದಸ್ಯರು ಒತ್ತಡ ಹಾಕುತ್ತಿದ್ದು ಮುಂದೇನು ಎಂದು ಕಾದು ನೋಡಬೇಕು, ಈ ನಡುವೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಪುತ್ತೂರು ಲ್ಲಿ ಸ್ಪರ್ಧಿಸುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ ಅವರ ಆಪ್ತರು ಸ್ಪರ್ಧೆ ಮಾಡುವಂತೆ ಒತ್ತಡ ಹಾಕುತ್ತಿದ್ದರೂ ನಳಿನ್ ಕಟೀಲ್ ಪಕ್ಕದ ಮೂಡಬಿದ್ರೆ ಕ್ಷೇತ್ರದತ್ತ ತನ್ನ ಒಲವು ತೋರಿಸುತ್ತಿದ್ದಾರೆ. ಇದೇ ವೇಳೆ ಮಾಜಿ ಶಾಸಕ ಸಂಜೀವ ಮಠಂದೂರು ಪಕ್ಷದ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡಿದ್ದು ಟಿಕೆಟ್ ಗೆ ಈ ಬಾರಿ ಪ್ರಯತ್ನ ನಡೆಸುತ್ತಿದ್ದಾರೆ ಅದಲ್ಲದೆ ಒಕ್ಕಲಿಗ ಕೋಟಾ ದಲ್ಲಿ ತನಗೆ ಪುತ್ತೂರು ಲ್ಲಿ ಸೀಟು ಸಿಗುವ ವಿಶ್ವಾಸದಲ್ಲಿದ್ದಾರೆ, ಮತ್ತೊಂದೆಡೆ ಬಿಜೆಪಿ ಹೊಸ ಮುಖ ಪರಿಚಯಿಸಲು ನಿರ್ಧಾರಿಸಿದರು ಆಶ್ಚರ್ಯವಿಲ್ಲ ಮೊನ್ನೆ ನಡೆದ ಪಂಚರಾಜ್ಯ ಚುನಾವಣೆ ಯಲ್ಲಿ ಬಿಜೆಪಿ ಹೊಸ ಮುಖಗಳಿಗೆ ಅವಕಾಶ ನೀಡಿರುವುದರಿಂದ ಈ ಬಾರಿ ಪುತ್ತೂರುನಂತ ಹಿ‌ದುತ್ವದ ಪವರ್ ಸೆಂಟರ್ ನಲ್ಲಿ ಯುವಮುಖಗಳಿಗೆ ಅವಕಾಶ ಕಲ್ಪಿಸುವ ಮಾತುಗಳು ಕೇಳಿಬರುತ್ತಿವೆ ಹಾಗೇನಾದರು ಆದಲ್ಲಿ ಬಿಜೆಪಿ ಯಿಂದ ಸಾಮಾಜಿಕ ಕಾರ್ಯ ಮತ್ತು ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಕುಕ್ಕೆಶ್ರೀ ಸುಬ್ರಮಣ್ಯ ಕ್ಷೇತ್ರ ಮಾಜಿ ಟ್ರಸ್ಟಿ, ಜಿಲ್ಹಾ ಬಿಜೆಪಿ ಪ್ರಕೋಷ್ಠ ಸಹ ಸಂಚಾಲಕ ಪ್ರಸನ್ನ ದರ್ಬೆ, ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಅನೇಕ ವರ್ಷ ಪೂರ್ಣಅವಧಿ ಕೆಲಸ ಮಾಡಿರುವ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ್, ಬಿಜೆಪಿ ಯುವ ಮೋರ್ಚಾ ದಲ್ಲಿ ತೊಡಗಿಸಿಕೊಂಡಿದ್ದ ವಿಜಯ್ ಸಾಮ್ರಾಟ್ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿರುವ ಸಹಜ್ ರೈ ಹೆಸರು ಕೂಡ ಕೇಳಿ ಬರುತ್ತಿದ್ದು ಪುತ್ತೂರುಲ್ಲಿ ಪಿಲಿ ನಲಿಕೆ ಕಾರ್ಯಕ್ರಮ ಸಂಘಟಿಸಿ ಗಮನ ಸೆಳೆದಿದ್ದರೂ ಅವಕಾಶ ಸಿಕ್ಕರೆ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ ಅಲ್ಲದೆ ಮೊನ್ನೆ ನಡೆದ ಬಿಜೆಪಿ ಪ್ರಶಿಕ್ಷಣ ವರ್ಗದಲ್ಲಿ ಭಾಗಿಯಾಗಿದ್ದ ಹೈಕೋರ್ಟ್ ವಕೀಲ ಅರುಣ್ ಶ್ಯಾಮ್ ಪುತ್ತೂರು ಕ್ಷೇತ್ರಕ್ಕೆ ಕಣ್ಣಿಟ್ಟಿದ್ದು ಈ ವೇಳೆ ಪಕ್ಷದ ಜವಾಬ್ದಾರಿ ಇಲ್ಲದವರನ್ನು ಯಾವ ಮಾನ ದಂಡದಲ್ಲಿ ಪ್ರಶಿಕ್ಷಣ ವರ್ಗ ಕ್ಕೆ ಆಹ್ವಾನಿಸಿರುವಿರಿ ಎಂದು ಬಿಜೆಪಿ ಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು ಅವರಿಗೆ ಪಕ್ಷದ ನೀತಿ, ನಿಯಮಗಲಿಲ್ಲವೇ ವೆಂದು ಪ್ರಶ್ನಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತಿದೊಡ ಸಮುದಾಯವಾಗಿರುವ ಒಕ್ಕಲಿಗ ಸಮಾಜದ 70% ಮತದಾರರು 80ರ ದಶಕದ ನಂತರ ಸಂಘಟನೆಯ ಮೂಲಕ ಬಿಜೆಪಿ ಜೊತೆಯಿದ್ದು ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಕ್ಷೇತ್ರದಲ್ಲಿ ತನ್ನದೇ ಆದ ಮತ ಬ್ಯಾಂಕ್ ಹೊಂದಿದ್ದಾರೆ. ಕಳೆದ ಬಾರಿಯ ಪುತ್ತೂರು ಅಭ್ಯರ್ಥಿ ಅಯ್ಕೆ ಪ್ರಕ್ರಿಯೆ ಬಗ್ಗೆ ಒಕ್ಕಲಿಗರಿಗೂ ಒಲವಿರಲಿಲ್ಲ, ಸುಶಿಕ್ಷತ ಸಮಾಜದಲ್ಲಿ ಸಂಘಟನೆ ಜೊತೆ ಜೋಡಿಸಿಕೊಂಡಿರುವ ಅನೇಕ ಯುವಪ್ರತಿಭೆಗಳು ಇದ್ದಾಗ್ಯೂ ಹಳೆಮುಖಕ್ಕೆ ಜೋತುಬಿದ್ದು ಅದನ್ನು ಒಕ್ಕಲಿಗರ ಫ಼ೇಸ್ ಅಂತ ತೋರಿಸಿದ್ದು ಸಮಾಜಕ್ಕೆ ರಾಜಕೀಯವಾಗಿ ದೊಡ್ಡ ಹಿನ್ನಡೆಯಾಗಿತ್ತು ಅದಲ್ಲದೆ ಬಿಜೆಪಿಯ ಈ ಪ್ರಕ್ರಿಯೆ ಕಾರ್ಯಕರ್ತರಲ್ಲಿ ಅಸಮಾಧಾನ ಸ್ಫೋಟಗೊಂಡು ಅರುಣ್ ಪುತ್ತಿಲ ಬಂಡಾಯ ನಿಂತು ಕಡಿಮೆ ಅಂತರದಲ್ಲಿ ಸೋತಿದ್ದರು. ಈಗ ಪುತ್ತೂರು ರಾಜಕೀಯ ಚಿತ್ರಣ ಬದಲಾಗಿದ್ದು ಯಾರೇ ಅಭ್ಯರ್ಥಿಯಾದರು ಅಸಮಾಧಾನ ವ್ಯಕ್ತವಾಗುವುದಂತೂ ನಿಜ. ಶಾಸಕ ಅಶೋಕ್ ರೈ ಯಂತ ಪ್ರಬಲ ಶಕ್ತಿ ಎದುರಿಸಲು ಬಿಜೆಪಿ ಮತ್ತು ಪರಿವಾರ ಸಂಘಟನೆ ಜೊತೆಯಾಗಿ ನಿಂತು ಹೋರಾಟ ಮಾಡಿದರೆ ಗೆಲ್ಲಲು ಸಾಧ್ಯ ಸದ್ಯಕ್ಕಂತೂ ಬಿಜೆಪಿ ಯಲ್ಲಿ ಅಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಖೆಯುತ್ತಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!