ಸುಳ್ಯ : ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಲೆಕ್ಕಪತ್ರ ತನಿಖೆಗೆ ಆಗ್ರಹ

Picture of Savistara

Savistara

Bureau Report

ಸುಳ್ಯ, ಸೆ.5 : ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ 2003-04ರಿಂದ ದೇವಸ್ಥಾನದ 2023-24 ಅವಧಿಯ ಲೆಕ್ಕಪತ್ರಗಳಲ್ಲಿ2.46 ಕೋ.ರೂ. ಮೊತ್ತದ ಆಡಿಟ್ ಆಕ್ಷೇಪಣೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಅವಧಿಯ ಸಂಪೂರ್ಣ ಲೆಕ್ಕಪತ್ರಗಳನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಸಮಗ್ರವಾಗಿ ಪರಿಶೀಲಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ ಆಕ್ರಿಕಟ್ಟೆ ಹಾಗೂ ದೇವಸ್ಥಾನದ ಸಲಹಾ ಸಮಿತಿ ಸದಸ್ಯ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಮಹೇಶ್ ಕುಮಾರ್‌ಕರಿಕಳ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೋಕೇಶ್ ಆಕ್ರಿಕಟ್ಟೆ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ ಹಲವು ಗ್ರಾಮಗಳ ಭಕ್ತರು ಆರಾಧಿಸುವ ಪಂಜ ಸೀಮಾ ದೇವಸ್ಥಾನದ ಆಡಳಿತವನ್ನು ದೇವಿಪ್ರಸಾದ್ ಕಾನತ್ತೂರು ನೇತೃತ್ವದ ವ್ಯವಸ್ಥಾಪನ ಸಮಿತಿ ನಡೆಸುತ್ತಿದೆ. ಸಮಿತಿ ಉತ್ತಮ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ದ ಅವ್ಯವಹಾರದ ಆರೋಪ ಮಾಡಲಾಗಿದೆ ಎಂದರು.ದೇವಸ್ಥಾನದ ಲೆಕ್ಕಪತ್ರಕ್ಕೆ ಸಂಬಂಧಿಸಿ ఎంటు ಪ್ರಶ್ನೆಗಳನ್ನು ಮುಂದಿಟ್ಟು 5.150 ಸಾರ್ವಜನಿಕ ಸಭೆ ಕರೆದು ಉತ್ತರ ನೀಡುವಂತೆ ಕೆಲವರು ಮನವಿ ಸಲ್ಲಿಸಿದ್ದರು. ಅದರಂತೆ ಅಧ್ಯಕ್ಷರು ಸಾರ್ವಜನಿಕ ಸಭೆ ಕರೆದು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ನಡೆಸಿದರು. ಆದರೆ ಸಭೆಯಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸೃಷ್ಟಿಸಿದ್ದರು ಎಂದರು.

ದೇವಸ್ಥಾನದ ಹಣದಲ್ಲಿ ಯಾವುದೇ ಅವ್ಯವಹಾರ ನಡೆಸಿಲ್ಲ ಎಂದು ಅಧ್ಯಕ್ಷರು ಸ್ಪಷ್ಟನೆ ನೀಡಿದ್ದು, ದೇವರ ಜಳಕದಹೊಳೆಯಲ್ಲಿ ಸ್ನಾನ ಮಾಡಿ ದೇವಸ್ಥಾನದ ನಡೆಯಲ್ಲಿ ಪ್ರಮಾಣ ಮಾಡಿದ್ದಾರೆ ಎಂದರು.

ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿಯೂ ಹಲವು ಆಕ್ಷೇಪಗಳು ವ್ಯಕ್ತವಾಗಿದ್ದು, ದೇವಸ್ಥಾನದ ರಥಕ್ಕೆ ಸಾಂಪ್ರದಾಯಿಕವಾಗಿ ಬೆತ್ತದ ಬದಲಿಗೆ ಕಬ್ಬಿಣ ಬಳಸಿರುವುದು ಸೇರಿದಂತೆ ಧಾರ್ಮಿಕ ಲೋಪಗಳ ಬಗ್ಗೆ ಭಕ್ತರಿಂದ ಆಕ್ಷೇಪ ವ್ಯಕ್ತವಾಗಿತ್ತು. ದೇವಸ್ಥಾನ ಪುನರ್‌ನಿರ್ಮಾಣಕ್ಕಾಗಿ ಹಿಂದಿನ ವರ್ಷಗಳಲ್ಲಿ ರಚನೆಯಾದ ವಿವಿಧ ಸಮಿತಿಗಳು ಸಾರ್ವಜನಿಕರಿಂದ ಸಾಕಷ್ಟು ದೇಣಿಗೆ ಸಂಗ್ರಹಿಸಿರುವ ಬಗ್ಗೆಯೂ ಭಕ್ತರಲ್ಲಿ ಸಂಶಯಗಳಿವೆ. ಆದ್ದರಿಂದ ಹಿಂದಿನ ಹಾಗೂ ಹಾಲಿ ಆಡಳಿತ ಮಂಡಳಿಗಳ ಅವಧಿಯ ಲೆಕ್ಕಪತ್ರಗಳನ್ನೂ ಪರಿಶೀಲಿಸಬೇಕು ಎಂದು ಲೋಕೇಶ್ ಆಕ್ರಿಕಟ್ಟೆ ಒತ್ತಾಯಿಸಿದರು.2.46 ಕೋ.ರೂ. ಆಡಿಟ್ ಆಕ್ಷೇಪಣೆ2003- 04ರಿಂದ 2023-24ದವರೆಗೆ ಈ ಅವಧಿಯ ದೇವಸ್ಥಾನದ ಲೆಕ್ಕಪತ್ರಗಳಲ್ಲಿ 2.46 ಕೋ.ರೂ. ಮೊತ್ತದ ಆಡಿಟ್ ಆಕ್ಷೇಪಣೆಗಳು ಕಂಡುಬಂದಿವೆ. ಹಿನ್ನೆಲೆಯಲ್ಲಿ ಸಂಬಂಧಿಸಿದ ದಾಖಲೆಗಳು ಹಾಗೂ ಲೆಕ್ಕಪತ್ರಗಳನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಕೂಲಂಕಷವಾಗಿ ಪರಿಶೀಲಿಸಿ, ಆಡಿಟ್ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಮಹೇಶ್ ಕುಮಾರ್ ಕರಿಕಳ ಆಗ್ರಹಿಸಿದರು. ಈ ಕುರಿತು ದೇವಸ್ಥಾನದ ಅಧ್ಯಕ್ಷರ ಮೂಲಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಪ್ರಧಾನ ಕಾರ್ಯದರ್ಶಿ

[t4b-ticker]
error: Content is protected !!