ಸುಳ್ಯ:ಸುಳ್ಯ ಸೀಮೆಯ ಭಕ್ತರ ಒತ್ತಿಗಾಗಿ ಹಾಗೂ ದೇವಸ್ಥಾನದ ಸಾನ್ನಿಧ್ಯ ವೃದ್ಧಿಗಾಗಿ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸತತ 12 ದಿನಗಳ ಕಾಲ “ಶಿವ ಸ್ಮರಣೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಾವಿರ ಸೀಮೆಯ ಮೂಲದ ಶಿವಭಕ್ತರು ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ 7 ರಿಂದ ಆರಂಭಗೊಳ್ಳಲಿರುವ ಈ ಕಾರ್ಯಕ್ರಮವು ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಗಂಟೆಗೆ ನಡೆಯಲಿದ್ದು, ಸುಮಾರು 7:30 ರವರೆಗೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ “ಶಿವ ಸ್ಮರಣೆ” ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಪವಿತ್ರ ಕಾರ್ಯಕ್ರಮಕ್ಕೆ ಸಾವಿರ ಸೀಮೆಯ ಎಲ್ಲಾ ಶಿವಭಕ್ತರು ಭಕ್ತಿ ಶ್ರದ್ಧೆಯಿಂದ ಭಾಗವಹಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದು
ಕಾರ್ಯಕ್ರಮದ ಮುಖ್ಯಾಂಶಗಳು:- ಪ್ರತಿ ಮನೆಯಿಂದ ಒಬ್ಬರು 10 ನಿಮಿಷ ಮುಂಚಿತವಾಗಿ ಆಗಮಿಸಬೇಕು- ಪ್ರತಿ ಗ್ರಾಮದಿಂದ ಕನಿಷ್ಠ 50 ಜನರು ಭಾಗವಹಿಸುವಿಕೆ- ಜಾತಿ, ರಾಜಕೀಯ ಭೇದವಿಲ್ಲದೆ ಎಲ್ಲರೂ ಭಾಗವಹಿಸಬೇಕು- ಭಕ್ತರು ಬಿಲ್ವಪತ್ರೆ ತರಲು ಮನವಿ- “ಓಂ ನಮಃ ಶಿವಾಯ” ಮಂತ್ರವನ್ನು 108 ಬಾರಿ ಜಪಎಲ್ಲಾ ಭಕ್ತರು ಈ ಶಿವಸ್ಮರಣೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.
















































