ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಕಾ ನಿಷೇಧ ಸುದ್ದಿಯ ನಡುವೆ ಕೋಲಾರ ಜಿಲ್ಲೆಯ ಮುಳಬಾಗಿಲುತಾಲೂಕಿನಲ್ಲಿ ಕೋಲ್ಕತಾದಿಂದ ಬೆಂಗಳೂರಿಗೆಸಾಗಿಸುತ್ತಿದ್ದು ಕಂಟೇನರ್‌ನಲ್ಲಿದ್ದ 96 ಮೂಟೆಯಲ್ಲಿ ಸುಮಾರು 10 ಟನ್ ಶಂಕಾಸ್ಪದ ಸಿಂಥೆಟಿಕ್ ಅಡಕೆಯನ್ನು (ಚೀನಾ ಅಡಕೆ) ಆರೋಗ್ಯ ಅಧಿಕಾರಿಗಳು ವಶಕ್ಕೆ ಪ’ಡೆದಿದ್ದಾರೆ. ಸಾಗಣೆ ಮಾಡುತ್ತಿದ್ದ ಚಾಲಕ, ಕ್ಲೀನರ್ ನನ್ನು ಪೊಲೀಸರು ಬಂಧಿಸಿ ದ್ದಾರೆ.ಈ ಕುರಿತು ಮಂಗ ಳೂರಿನಲ್ಲಿ ಪ್ರತಿಕ್ರಿ ಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ‘ಕೋಲಾ ರದಲ್ಲಿ ಸಿಂಥಟಿಕ್ ಅಡಕೆ ಸಾಗಿಸುತ್ತಿದ್ದ ಟ್ರಕ್‌ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿದ ಅಡಕೆ ಸಿಂಥೆಟಿಕ್ ಹೌದೇ ಎನ್ನು ವುದನ್ನು ಪರಿಶೀಲಿಸಲಾಗುತ್ತಿದೆ. ಅಡಕೆಯ ಸ್ಯಾಂಪಲ್ ಗಳನ್ನು ಪ್ರಯೋಗಾಲಯಕ್ಕೆ ಕಳುಹಿ ಸಲಾಗಿದ್ದು,2ವಾರದೊಳಗೆ ಫಲಿತಾಂಶಬಂದ ಬಳಿಕ ಕಳಪೆ ಗುಣಮಟ್ಟದ ಅಡಕೆಯಕುರಿತಂತೆ ನಿಖರವಾಗಿ ಹೇಳಬಹುದಾಗಿದೆ’ ಎಂದರು.
‘ರಾಜ್ಯ ದಲ್ಲೇಹೇರಳವಾಗಿಅಡಕೆ ಬೆಳೆಯು ವಾಗಹೊರಗಿನ ಅಡಕೆ ಏಕೆ ಇಲ್ಲಿಗೆ ಬರಬೇಕು. ಈ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಆಹಾರ ಇಲಾಖೆಯ ಅಧಿಕಾರಿಗಳ ತಂಡಕ್ಕೆ ಸೂಚನೆ ನೀಡಲಾಗಿದೆ. ಕಳಪೆ ಆಮದು ಅಡಕೆ ಪೂರೈಕೆವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾ ಗುವುದು. ಇಂತಹ ಕಳಪೆ ವಸ್ತುಗಳ ಪರಿಶೀಲ ನೆಗೆಶೀಘ್ರವೇಅತ್ಯಾಧುನಿಕಪ್ರಯೋಗಾಲಯ ವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು, ಇಲ್ಲವೇ ಲ್ಯಾಬ್‌ಗಳ *ಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದರು. 9

















































