ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿ: ಒಂದೇ ದಿನದಲ್ಲಿ ಬಂಗಾರ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ!

Picture of Savistara

Savistara

Bureau Report

ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಖರೀದಿ ಮಾಡಲು ಕಾಯುತ್ತಿದ್ದ ಗ್ರಾಹಕರಿಗೆ ಗುರುವಾರ (ಸೆಪ್ಟೆಂಬರ್ 24) ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಇಂದು ದಿಢೀರ್ ಇಳಿಕೆ ಕಂಡುಬಂದಿದೆ. ​ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಗಮನಾರ್ಹವಾಗಿ ತಗ್ಗಿದ್ದು, ಬಂಗಾರದ ದರದ ಹಾದಿಯಲ್ಲೇ ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ. ​

ಇಂದಿನ ಚಿನ್ನದ ದರ ವಿವರ: ​18 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹11,451 ಹಾಗೂ 10 ಗ್ರಾಂಗೆ ₹1,14,510 ದರವಿದೆ. ನಿನ್ನೆಗೆ ಹೋಲಿಸಿದರೆ ಗ್ರಾಂಗೆ ₹114 ಹಾಗೂ 10 ಗ್ರಾಂಗೆ ₹1,140 ಇಳಿಕೆಯಾಗಿದೆ. ​

22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): ಪ್ರತಿ ಗ್ರಾಂಗೆ ₹13,995 ಹಾಗೂ 10 ಗ್ರಾಂಗೆ ₹1,39,950 ಆಗಿದೆ. ಬುಧವಾರಕ್ಕೆ ಹೋಲಿಸಿದರೆ ಗ್ರಾಂಗೆ ₹140 ಹಾಗೂ 10 ಗ್ರಾಂಗೆ ₹1,400 ಕಡಿಮೆಯಾಗಿದೆ.

​24 ಕ್ಯಾರೆಟ್ ಚಿನ್ನ (ಅಪರಂಜಿ): ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,268 ಹಾಗೂ 10 ಗ್ರಾಂಗೆ ₹1,52,680 ತಲುಪಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಗ್ರಾಂಗೆ ₹152 ಹಾಗೂ 10 ಗ್ರಾಂಗೆ ₹1,520 ಇಳಿಕೆಯಾಗಿದೆ. ​

ಬೆಳ್ಳಿ ಬೆಲೆಯಲ್ಲೂ ಕಡಿತ:ಚಿನ್ನದ ದರದಂತೆಯೇ ಬೆಳ್ಳಿ ದರದಲ್ಲೂ ಭರ್ಜರಿ ಇಳಿಕೆ ಕಂಡುಬಂದಿದೆ. ಪ್ರತಿ ಗ್ರಾಂ ಬೆಳ್ಳಿಯ ಬೆಲೆ ₹245 ಹಾಗೂ ಒಂದು ಕೆಜಿ ಬೆಳ್ಳಿಯ ಬೆಲೆ ₹2.45 ಲಕ್ಷ ತಲುಪಿದೆ. ನಿನ್ನೆಗೆ ಹೋಲಿಸಿದರೆ ಗ್ರಾಂಗೆ ₹5 ಹಾಗೂ ಕೆಜಿಗೆ ₹5,000 ಕಡಿಮೆಯಾಗಿದೆ. ​ಮಾರುಕಟ್ಟೆಯಲ್ಲಿ ಸದ್ಯ ದರ ತಾತ್ಕಾಲಿಕವಾಗಿ ತಗ್ಗಿದ್ದರೂ, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳಿಂದಾಗಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

[t4b-ticker]
error: Content is protected !!