CRIME NEWS | ಅಟ್ಟಿಕಾ ಗೋಲ್ಡ್ ಸಂಸ್ಥೆಗೆ ಇಡಿ ಶಾಕ್: 19 ಸ್ಥಳಗಳಲ್ಲಿ ಭರ್ಜರಿ ದಾಳಿ, ಅಟ್ಟಿಕಾ ಬಾಬು ಪರಾರಿ!

Picture of Savistara

Savistara

Bureau Report

ಬೆಂಗಳೂರು: ದೇಶದ ಪ್ರಮುಖ ಹಳೆಯ ಚಿನ್ನ ಖರೀದಿ ಸಂಸ್ಥೆಯಾದ ‘ಅಟ್ಟಿಕಾ ಗೋಲ್ಡ್’ (Attica Gold) ಕಂಪನಿಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. ಸಾರ್ವಜನಿಕರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ (Money Laundering) ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಸಂಸ್ಥೆಯ ಮೇಲೆ ಬೃಹತ್ ದಾಳಿ ನಡೆಸಿದ್ದಾರೆ.​ಬೆಂಗಳೂರು ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನ ಒಟ್ಟು 19ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆದಿದೆ.

ಕಂಪನಿಯ ಪ್ರಮುಖ ಕಚೇರಿಗಳು, ಶೋರೂಮ್‌ಗಳು ಹಾಗೂ ಮಾಲೀಕರ ನಿವಾಸಗಳ ಮೇಲೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CRPF) ಬಿಗಿ ಭದ್ರತೆಯೊಂದಿಗೆ ಈ ದಾಳಿ ಕೈಗೊಳ್ಳಲಾಗಿದೆ.​ಹಳೆಯ ಚಿನ್ನ ಖರೀದಿ, ಅಡವಿಟ್ಟ ಚಿನ್ನ ಬಿಡಿಸಿಕೊಡುವ ನೆಪದಲ್ಲಿ ಸಾರ್ವಜನಿಕರಿಗೆ ವಂಚನೆ, ಅಕ್ರಮ ನಗದು ವಹಿವಾಟು ಹಾಗೂ ಕದ್ದ ಚಿನ್ನ ಖರೀದಿ ಮಾಡಿರುವ ಗಂಭೀರ ಆರೋಪಗಳು ಸಂಸ್ಥೆಯ ವಿರುದ್ಧ ಕೇಳಿಬಂದಿವೆ. ಈ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಬ್ಯಾಂಕ್ ಖಾತೆಗಳು ಹಾಗೂ ಹಣಕಾಸಿನ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.​

ಇನ್ನೊಂದೆಡೆ, ಇಡಿ ದಾಳಿ ನಡೆಸುತ್ತಿದ್ದಂತೆ ಅಟ್ಟಿಕಾ ಗೋಲ್ಡ್ ಸಂಸ್ಥೆಯ ಮಾಲೀಕ ಬೊಮ್ಮನಹಳ್ಳಿ ಬಾಬು (ಅಟ್ಟಿಕಾ ಬಾಬು) ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಅಧಿಕಾರಿಗಳ ತಂಡ ಹುಡುಕಾಟ ತೀವ್ರಗೊಳಿಸಿದೆ.

[t4b-ticker]
error: Content is protected !!