ಸುಳ್ಯ : ಐವರ್ನಾಡು ಬೆಳಗ್ಗಿನ ಜಾವ ಸುಮಾರು 5 ಗಂಟೆಯ ಸಂದರ್ಭದಲ್ಲಿ ಬಾಂಜಿಕೋಡಿ ಕೃಷಿ ತೋಟಗಳಿಗೆ ನುಗ್ಗಿ ಹಾನಿ ಮಾಡಿದ ಕಾಡಾನೆಗಳನ್ನು ಓಡಿಸಲು ಯುವಕರು ಇಟಿಎಫ್ ತಂಡದೊಂದಿಗೆ ಕೈಜೋಡಿಸಿದ್ದಾರೆ.
ಕೃಷಿ ತೋಟಗಳಿಗೆ ಹಾನಿ ಮಾಡುತ್ತಿದ್ದ ಕಾಡಾನೆಗಳನ್ನು ಓಡಿಸುವ ಕಾರ್ಯದಲ್ಲಿ ನಂದಕುಮಾರ್ ಬಾರೆತಡ್ಕ, ಗಣೇಶ್ ಭಜಂತಡ್ಕ, ರಕ್ಷಿತ್ ಸಾರಕೋಟಿಲು ಅವರು ಇಟಿಎಫ್ ತಂಡಕ್ಕೆ ಸಹಕರಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದೂ ಅವರ ಈ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಡು ಪ್ರಾಣಿಗಳ ದಾಳಿಯಿಂದ ಕೃಷಿ ತೋಟ ನಾಶವಾದ ರೈತರಿಗೆ ಸರಕಾರದಿಂದ ದೊರಕುವ ಪರಿಹಾರಕ್ಕೆ ಅರ್ಜಿ ಹಾಕಲು ಅರ್ಜಿ ಫಾರ್ಮು ಐವರ್ನಾಡಿನ ಪಂಚಲಿಂಗೇಶ್ವರ ಪ್ರಿಂಟರ್ಸ್ ( ಅನಿಲ್ ದೆರಾಜೆ ) ಇವರ ಅಂಗಡಿಯಲ್ಲಿ ಲಭ್ಯವಿದೆ
ಬೇಕಾಗುವ ದಾಖಲೆಗಳು.
- ಕೃಷಿ ತೋಟ ನಾಶವಾದ ಜಾಗದ ಆರ್ ಟಿ ಸಿ .
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ.
- ಜಾಗದ ನಕ್ಷೆ..
- ಆಧಾರ್ ಕಾರ್ಡ್ .
- ಹಾನಿಯಾದ ಕೃಷಿಯ ಒಟ್ಟಿಗೆ ನಿಂತ ರೈತನ ಫೋಟೋ ( ಬಾಳೆ, ಅಡಿಕೆ ಮರ, ತೆಂಗಿನ ಮರ ).
ಕೃಷಿ ತೋಟ ನಾಶವಾದ ರೈತರು ಬೆಳ್ಳಾರೆ ಫಾರೆಸ್ಟ್ ಆಫೀಸಿನಲ್ಲಿ ಅರ್ಜಿ ಸಲ್ಲಿಸುವಂತೆ ಕೃಷ್ಣಪ್ರಸಾದ್ ಮಡ್ತಿಲ ಸಂಚಾಲಕರು ಕೃಷಿಕ ಹಿತ ರಕ್ಷಣಾ ವೇದಿಕೆ ಐವರ್ನಾಡು ತಿಳಿಸಿದ್ದಾರೆ.
















































