ಸುಳ್ಯ :ಬಿಜೆಪಿ ಸಹ ಸಂಘಟನಾ ಕಾರ್ಯದರ್ಶಿ ನೇಮಕ: ತೆಲಂಗಾಣಕ್ಕೆಸುಳ್ಯದ ದಶರಥ ವೈಲಾಯ, ಗುಜರಾತ್ ಗೆ ಅರುಣ ಬಿನ್ನಾಡಿ –

Picture of Savistara

Savistara

Bureau Report

ಸುಳ್ಯ: ಭಾರತೀಯ ಜನತಾ ಪಾರ್ಟಿಯ ಪೂರ್ಣಾವಧಿ ಕಾರ್ಯಕರ್ತರಾದ ಸುಳ್ಯ ಮೂಲದ ಇಬ್ಬರು ಪ್ರಮುಖರಿಗೆ ಪಕ್ಷವು ರಾಷ್ಟ್ರೀಯ ಮಟ್ಟದ ಮಹತ್ವದ ಜವಾಬ್ದಾರಿ ನೀಡಿ ಗೌರವಿಸಿದೆ.

ಸುಳ್ಯ ಮೂಲದ ಕಾರ್ಯಕರ್ತ ದಶರಥ ವೈಲಾಯಅವರನ್ನು ತೆಲಂಗಾಣ ರಾಜ್ಯದ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಅರುಣ ಬಿನ್ನಾಡಿ ಅವರನ್ನು ಗುಜರಾತ್ ರಾಜ್ಯದ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿ ಹೈಕಮಾಂಡ್ ನೇಮಕಗೊಳಿಸಿದೆ.

ದೆಹಲಿಯಲ್ಲಿ ಈ ಕುರಿತು ಅಧಿಕೃತ ಆದೇಶ ಹೊರಬಿದ್ದಿದೆ. ಇಬ್ಬರೂ ಬಿಜೆಪಿ ಹಾಗೂ ಸಂಘ ಪರಿವಾರದಲ್ಲಿ ದೀರ್ಘಕಾಲದಿಂದ ಪೂರ್ಣಾವಧಿ ಕಾರ್ಯಕರ್ತರಾಗಿ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅವರ ಸೇವೆ ಹಾಗೂ ಸಂಘಟನಾ ಚತುರತೆಯನ್ನು ಗುರುತಿಸಿ ಈ ಮಹತ್ವದ ಜವಾಬ್ದಾರಿ ನೀಡಲಾಗಿದೆ

[t4b-ticker]
error: Content is protected !!