ಪುತ್ತೂರು : ಕಾಂಗ್ರೆಸ್ ಸರ್ಕಾರದ ವೈಫಲ್ಯ ಮತ್ತು ಸಚಿವ ನಾಗೇಂದ್ರ ರಾಜೀನಾಮೆ ಒತ್ತಾಯಿಸಿ ಪುತ್ತೂರು ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು.ಈ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವರ್ ಪುತ್ತೂರು ಶಾಸಕರು ತನ್ನ ಮೂರುವರೆ ವರ್ಷ ಅವಧಿಯಲ್ಲಿ ಕ್ಷೇತ್ರಕ್ಕೆ ಏನು ಮಾಡಿದ್ದೂ ತನ್ನ ಸಾಧನೆ ಬಗ್ಗೆ ದಾಖಲೆ ಸಮೇತ ಬಿಡುಗಡೆ ಮಾಡಲಿ ಈ ಕ್ಷೇತ್ರದ 48 ಗ್ರಾಮ ಪುತ್ತೂರು ಪುರಸಭೆ,ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿ ಯಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಕ್ಷೇತ್ರದ ಜನರಿಗೆ ಮೊದಲು ತಿಳಿಸಲಿ ನಮ್ಮ ಮಾಜಿ ಶಾಸಕರಾದ ಮಠಂದೂರು ಅವಧಿಯಲ್ಲಿ ಏನು ಅಭಿವೃದ್ಧಿಯಾಗಿದೆ ಚರ್ಚೆ ಮಾಡೋಣ ಸವಾಲೆಸೆದರು ಪದೇ ಪದೇ ತಾಕತ್ ಬಗ್ಗೆ ಮಾತನಾಡುವ ತಾವು ಈ ಬಗ್ಗೆ ತಾಕತ್ ತೋರಿಸಿ,ಮಳೆ ಬಂದಾಗ ಕೊಟ್ಟು ಹಿಡಿದು ರೋಡ್ ಲ್ಲಿ ರಿಲ್ಸ್ ಮಾಡಿದ್ದೂ ಬಿಟ್ಟರೆ ಯಾವ ರೋಡ್ ಲಿ ಎಷ್ಟು ಗುಂಡಿ ಇದೆಯೆಂದು ನೋಡಿರುವಿರಾ? ಒಬ್ಬ ಭ್ರಷ್ಟ ಮಂತ್ರಿಯನ್ನು ಮತ್ತೆ ಸಂಪುಟಕ್ಕೆ ಸೇರಿಸಿರುವುದೇ ನಿಮ್ಮ ಸಾಧನೆಯಾಗಿದೆ ಮುಂದಿನ ದಿನಗಳಲ್ಲಿ ಮತದಾರ ತಕ್ಕ ಉತ್ತರ ನೀಡಲಿದ್ದಾರೆಂದು ಅರ್ವರ್ ಮಾತನಾಡುತ್ತ ತಿಳಿಸಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ ಮಾತನಾಡಿ ವಾಲ್ಮೀಕಿ ಹೆಸರಿನ ನಿಗಮದ 187 ಕೋಟಿ ರೂ. ಹಗರಣ ಮಾಡಿದ್ದಾರೆ. ಜಾಮೀನುನಲ್ಲಿರುವ ನಾಗೇಂದ್ರರಿಗೆ ಸಚಿವ ಸ್ಥಾನ ನೀಡಿದ್ದು ಅವರ ತಲೆದಂಡ ಆಗದೆ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದರು.
ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ನಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಹರೀಶ್ ಬಿಜತ್ತೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್. ಗೌರಿ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತಾ ಹಿರಿಯ ಮುಖಂಡ ಅಪ್ಪಯ್ಯ ಮಣಿಯಾಣಿ, ಹಿಂದುಳಿದ ವರ್ಗ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಸಿ ನಾರಾಯಣ ರೆಂಜ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ವಿದ್ಯಾಧರ್ ಜೈನ್, ಬಿಜೆಪಿ ಪ್ರಮುಖರಾದ ಸಹಜ ರೈ ಬಳೆಜ್ಜ, ಲೋಕೇಶ್ ಹೆಗ್ಡೆ, ಡಾ. ಕೃಷ್ಣಪ್ರಸಾದ್, ಕೃಷ್ಣಕುಮಾರ್ ರೈ ಕೆದಂಬಾಡಿ, ಪುರುಷೋತ್ತಮ ಗೌಡ ಮುಂಗ್ಲಿಮನೆ, ನಿತೀಶ್‌ಕುಮಾರ್ ಶಾಂತಿವನ, ಅಶೋಕ್ ಶೆಟ್ಟಿ ವಿಟ್ಲ, ರಾಮಣ್ಣ ಗೌಡ ಗುಂಡೋಳೆ, ರಾಮಚಂದ್ರ ಪೂಜಾರಿ, ಸತೀಶ್ ನಾಕ್, ವಿನಯ ಭಂಡಾರಿ, ವಿಜಯ ಬಿ.ಎಸ್., ಸಂತೋಷ ರೈ ಕೈಕಾರ, ರಾಜೇಶ್ ರೈ ಪರ್ಪುಂಜ, ವಿಶ್ವನಾಥ ಗೌಡ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಸೇರಿದಂತೆ ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸುನಿಲ್ ದಡ್ಡು ಸ್ವಾಗತಿಸಿ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ವಂದಿಸಿದರು. ಲೋಕೇಶ್ ಚಾಕೋಟೆ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನೆಯ ಕೊನೆಯಲ್ಲಿ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ವಿವಿಧ ಬೇಡಿಕೆಗಳ ಕುರಿತು ಪುತ್ತೂರು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದರು
















































