ಸುಳ್ಯ: ಸುಳ್ಯ ನಗರ ವ್ಯಾಪ್ತಿಯಲ್ಲಿ ರಸ್ತೆ,ಒಳಚರಂಡಿ,ಪುಟ್ ಪಾತ್ ಅವ್ಯವಸ್ಥೆಯಿಂದ ಕೂಡಿದ್ದು ರಸ್ತೆ ಬದಿಯ ಸ್ಲಾಬ್ ಗಳು ಬಾಯಿ ತೆರೆದು ನಿಂತಿದ್ದು ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಸುಳ್ಯ ನಗರದ ಹಳೇ ಬಸ್ ನಿಲ್ದಾಣ ಎದುರುಗಡೆ ಸಂಪೂರ್ಣ ಸ್ಲಾಬ್ ಮುರಿದು ಬಿದ್ದು ವಾರ ಕಳೆದರೂ ಇನ್ನೂ ದುರಸ್ತಿಯಾಗಿಲ್ಲ,

ಶ್ರೀರಾಮ್ ಪೇಟೆ ಬಳಿ ಕೂಡ ಇದೇ ಸಮಸ್ಯೆಯಾಗಿದ್ದು ನೂರಾರು ವಿದ್ಯಾರ್ಥಿ,ಸಾರ್ವಜನಿಕರು ದಿನನಿತ್ಯ ಸಂಚಾರಿಸುತ್ತಾರೆ.

ಅಲ್ಲದೇ ರಥ ಬೀದಿ ಒಂದೆರೆಡು ಕಡೆ ಮ್ಯಾನ್ ಹೋಲ್ ಬಿರುಕು ಸಮಸ್ಯೆ ಉಂಟಾಗಿದೆ ನಗರ ವ್ಯಾಪ್ತಿಯ ಸದರ್ನ್ ಹೋಟೆಲ್ ಮುಂಭಾಗ ರಸ್ತೆ,ಜ್ಯೋತಿ ಸರ್ಕಲ್, ಹಳೇಗೇಟು,ಗಾಂಧಿ ನಗರ ದಲ್ಲಿ ರಸ್ತೆ ಡಾಮಾರು ಕಿತ್ತು ಹೋಗಿದ್ದು ವಾಹನ ಸವಾರರು ಪರದಾಡುವಂತೆ ಆಗಿದೆ,ಮಳೆಯ ನೀರು ರಸ್ತೆಯಲ್ಲಿ ಹರಿಯುತ್ತಿರುವುದು ಒಳ ಚರಂಡಿ ಇದ್ದೂ ಇಲ್ಲದಂತ ಸ್ಥಿತಿ ಸುಳ್ಯ ನಗರದಲ್ಲಿದೆ ಈ ಬಗ್ಗೆ ಗಮನಹರಿಸಬೇಕಾದ ಜನಪ್ರತಿನಿಧಿಗಳು,ಅಧಿಕಾರಿ ವರ್ಗ ನಿರ್ಲಕ್ಷ್ಯ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.















































