ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 23 ಹಾಗೂ 24ರಂದು ಕೆಲವು ಪ್ರಮುಖ ಧಾರ್ಮಿಕ ಸೇವೆಗಳು ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ.ಆಗಸ್ಟ್ 23ರಂದು ಏಕಾದಶಿ ಹಾಗೂ ಆಗಸ್ಟ್ 24ರಂದು ಅತಿರಿಕ್ತ ಏಕಾದಶಿ ಇರುವುದರಿಂದ, ಈ ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ಹಾಗೂ ನಾಗ ಪ್ರತಿಷ್ಠೆ ಸೇವೆಗಳನ್ನು ಜರುಗಿಸುವುದಿಲ್ಲ.ಆದಾಗ್ಯೂ, ಭಕ್ತರಿಗೆ ಎಂದಿನಂತೆ ಶ್ರೀ ದೇವರ ದರ್ಶನ, ಮಂಗಳಾರತಿ, ಅರ್ಚನೆ ಮತ್ತು ಮಹಾಪೂಜೆ ಸೇರಿದಂತೆ ಉಳಿದೆಲ್ಲ ನಿತ್ಯ ಪೂಜೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಗಮನಕ್ಕೆ: ಆಗಸ್ಟ್ 23 ಮತ್ತು 24ರಂದು ದೇವಸ್ಥಾನದಲ್ಲಿ ಈ ಸೇವೆಗಳು ಲಭ್ಯವಿರುವುದಿಲ್ಲ!
Savistara
Bureau Report
[t4b-ticker]















































