ಪುತ್ತೂರಿಗೆ ಬಂತು….ವಂದೇ ಭಾರತ್ ರೈಲು

Picture of Savistara

Savistara

Bureau Report

ಪುತ್ತೂರು:ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ‘ವಂದೇ ಭಾರತ್’ ಪ್ರಾಯೋಗಿಕ ಸಂಚಾರವಪೂರ್ಣಗೊಂಡ ಬಳಿಕ ಆ.20ರಂದು ರಾತ್ರಿ ಮಂಗಳೂರು ನಿಲ್ದಾಣಕ್ಕೆ ತೆರಳುತ್ತಿದ್ದವಂದೇ ಭಾರತ್ ರೈಲು ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ತುಸು ಹೊತ್ತು ನಿಲುಗಡೆಯಾಗಿ ಮತ್ತೆ ಹೊರಟಿತು.

ಪಶ್ಚಿಮ ಘಟ್ಟಗಳ ಕಠಿಣ ಪ್ರದೇಶದ ಮೂಲಕ ಹಾದುಹೋಗುವ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಆ.19ಕ್ಕೆ ಪೂರ್ಣಗೊಂಡಿತ್ತು. ಆ.20ರಂದು ರೈಲನ್ನು ಮಂಗಳೂರು ಪಾಲ್‌ಘಾಟ್ ವಿಭಾಗಕ್ಕೆ ಹಸ್ತಾಂತರ ಮಾಡುವ ಉದ್ದೇಶದಿಂದ ಬೆಂಗಳೂರಿನಿಂದ ಹೊರಟ ರೈಲು ಪುತ್ತೂರು ಮಾರ್ಗವಾಗಿ ಮಂಗಳೂರಿಗೆ ತೆರಳುವ ಸಂದರ್ಭ ಮಂಗಳೂರು ಕಡೆಯಿಂದ ಬರುತ್ತಿದ್ದ ರೈಲಿಗೆ ಕ್ರಾಸಿಂಗ್ `ಕೊಡುವ ಉದ್ದೇಶದಿಂದ ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಸ್ವಲ್ಪ ಹೊತ್ತು ನಿಂತಿತ್ತು.

ಮಂಗಳೂರಿನಿಂದ ಬಂದ ರೈಲು ಪುತ್ತೂರು ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮ್‌ಗೆ ತಲುಪುತ್ತಿದ್ದಂತೆ ವಂದೇ ಭಾರತ್ ರೈಲು ಮತ್ತೆ ಚಾಲನೆ ತೆಗೆದು ವೇಗವಾಗಿ ಮಂಗಳೂರು ಕಡೆ ತೆರಳಿತು. ಈ ಸಂದರ್ಭ ಪುತ್ತೂರು ರೈಲ್ವೇ ನಿಲ್ದಾಣದ ಸ್ಟೇಷನ್ ಮಾಸ್ಟರ್ ಸ್ವಸಂತ್ರಮಿಶ್ರಾ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!