ಶೂಟೌಟ್ ಬೆನ್ನಲ್ಲೇ ಉದ್ವಿಗ್ನ: ಅರಣ್ಯ ಸಿಬ್ಬಂದಿ ಗುರಿಯಾಗಿಸಿ ಸೋಲಾರ್ ತಂತಿ ಬೇಲಿ ಧ್ವಂಸ!

Picture of Savistara

Savistara

Bureau Report

​ಚಾಮರಾಜನಗರ: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್‌ನಲ್ಲಿ ಇತ್ತೀಚೆಗೆ ನಡೆದ ಮೂವರ ಶೂಟೌಟ್ ಪ್ರಕರಣದ ಬೆನ್ನಲ್ಲೇ, ತೋಮಿಯಾರ್ ಪಾಳ್ಯದ ಬಳಿ ದುಷ್ಕರ್ಮಿಗಳು ಸೋಲಾರ್ ತಂತಿ ಬೇಲಿ ಹಾಗೂ ಗೇಟ್‌ಗಳನ್ನು ಧ್ವಂಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.​

ಕಾಡಿನಿಂದ ವನ್ಯಜೀವಿಗಳು ನಾಡಿಗೆ ಬರದಂತೆ ತಡೆಯಲು ಅರಣ್ಯ ಇಲಾಖೆಯು ತೋಮಿಯಾರ್ ಪಾಳ್ಯದ ‘ಡಿ ಲೈನ್’ನಲ್ಲಿ ಸೋಲಾರ್ ಫೆನ್ಸಿಂಗ್, ಗೇಟ್ ಹಾಗೂ ಸ್ವಿಚ್‌ಗಳನ್ನು ಅಳವಡಿಸಿತ್ತು. ಇದೀಗ ಇವುಗಳನ್ನು ನಾಶಪಡಿಸಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷಕ್ಕೆ ಮತ್ತೆ ಎಡೆಮಾಡಿಕೊಟ್ಟಂತಾಗಿದೆ.

​ಕಾಡಾನೆಗಳು ಕೃಷಿ ಜಮೀನುಗಳಿಗೆ ನುಗ್ಗದಂತೆ ತಡೆಯಲು ನಿರ್ಮಿಸಿದ್ದ ಈ ಫೆನ್ಸಿಂಗ್ ಧ್ವಂಸದ ಹಿಂದೆ, ಅರಣ್ಯ ಇಲಾಖೆಯ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುವ ಹುನ್ನಾರ ಅಡಗಿದೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.​ಈ ಗೇಟ್ ತೆರವಾದರೆ ಕಾಡುಪ್ರಾಣಿಗಳು ಗ್ರಾಮಗಳಿಗೆ ನುಗ್ಗುತ್ತವೆ; ಆಗ ಪ್ರಾಣಿಗಳನ್ನು ಓಡಿಸಲು ಅನಿವಾರ್ಯವಾಗಿ ಗ್ರಾಮದೊಳಗೆ ಬರುವ ಅರಣ್ಯ ಸಿಬ್ಬಂದಿಯ ಮೇಲೆ ದಾಳಿ ಮಾಡುವುದು ದುಷ್ಕರ್ಮಿಗಳ ಸಂಚಾಗಿರಬಹುದು ಎಂದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!