ಪಿಎಲ್‌ಡಿ ಬ್ಯಾಂಕ್‌ಗಳಿಗೂ ಶೂನ್ಯ ಬಡ್ಡಿ ಸಾಲ

Picture of Savistara

Savistara

Bureau Report

ಬೆಂಗಳೂರು: ಸಹಕಾರ ಸಂಘಗಳ ಮೂಲಕರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ.ವರೆಗೆ ನೀಡುತ್ತಿರುವ ಅಲ್ಪಾವಧಿ ಬೆಳೆ ಸಾಲದ ಸೌಲಭ್ಯವನ್ನು ಇನ್ನುಮುಂದೆ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳಿಗೂ ವಿಸ್ತರಣೆ ಮಾಡುವ ಮಹತ್ವದ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಶುಕ್ರವಾರ ಪ್ರಕಟಿಸಿದರು. 2025 -26ನೇ ಸಾಲಿನ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ, ”ಈ ತೀರ್ಮಾನದಂತೆ 38 ಕೋಟಿ ರೂ. ಹೆಚ್ಚುವರಿ ಹೊರೆಯನ್ನು ಭರಿಸಲಾಗುವುದು,” ಎಂದು ತಿಳಿಸಿದರು.

ಜತೆಗೆ, ರಾಜ್ಯ ಸಾರಿಗೆ ನಿಗಮಗಳಿಗೆ 2 ಸಾವಿರ ಹೊಸ ಬಸ್‌ಗಳನ್ನು ಖರೀದಿಸುವ ಮತ್ತೊಂದು ಹೊಸ ಘೋಷಣೆಯನ್ನೂ ಸಿಎಂ ಮಾಡಿದರು. “ಜಿಸಿಸಿ ವ್ಯವಸ್ಥೆಯಡಿ 1 ಸಾವಿರ ಬಸ್‌ಗಳನ್ನು ಒದಗಿಸುವ ಬಜೆಟ್ ಘೋಷಣೆಯನ್ನು ಪರಿಷ್ಕರಿಸಿ,

2 ಸಾವಿರ ಬಸ್‌ಗಳನ್ನು ಖರೀದಿಸಲು ತೀರ್ಮಾನಿಸ ಲಾಗಿದ್ದು, ಈ ಉದ್ದೇಶಕ್ಕೆ ಅಗತ್ಯ ಅನುದಾನವನ್ನು ಒದಗಿಸಲಾಗುವುದು,” ಎಂದು ಹೇಳಿದರು.

[t4b-ticker]
error: Content is protected !!