ನಿಮ್ಮ ಕ್ಷೇತ್ರಗಳಲ್ಲಿ ಜನರ ಆರೋಗ್ಯ ಪರೀಕ್ಷೆ ಪ್ರಕ್ರಿಯೆಯತ್ತ ಗಮನಹರಿಸಿ: ಸಂಸದರಿಗೆ ನಡ್ಡಾ ಸಲಹೆ

Picture of Savistara

Savistara

Bureau Report

ಆಯುಷ್ಮಾನ್ ಮಂದಿರಗಳಲ್ಲಿ ಉಚಿತ ತಪಾಸಣೆ, 2010ರಿಂದ 35 ಕೋಟಿ ಮಂದಿಗೆ ತಪಾಸಣೆ: ಕೇಂದ್ರ ಆರೋಗ್ಯ ಸಚಿವ

ಹೊಸದಿಲ್ಲಿ: ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಪ್ರತೀ ವರ್ಷಸಾರ್ವಜನಿಕರ ಆರೋಗ್ಯ ತಪಾಸಣಾ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಿ ಎಂದು ಎಲ್ಲ ಸಂಸದರಿಗೂ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸಲಹೆ ನೀಡಿದ್ದಾರೆ.ಶುಕ್ರವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, “ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ 30 ವರ್ಷ ದಾಟಿರುವ ಎಲ್ಲ ನಾಗರಿಕರ ಉಚಿತ ಆರೋಗ್ಯ ತಪಾಸಣೆ ಅಭಿಯಾನ ಈಗಾಗಲೇ ಆರಂಭಿಸಿದೆ. ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಸೇರಿ ಯಾವುದೇ ರೋಗವಿದ್ದರೂ, ಬೇಗ ಪತ್ತೆಯಾಗಲಿ ಎಂಬ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಪ್ರತೀ ಕ್ಷೇತ್ರಗಳಲ್ಲೂ ಜನರು ಇದರ ಅನುಕೂಲ ಪಡೆಯುವಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.2010ರಿಂದ ಆರಂಭವಾಗಿರುವ ಅಭಿಯಾನದ ಲಾಭವನ್ನು 35 ಕೋಟಿ ಜನ ಪಡೆದುಕೊಂಡಿದ್ದಾರೆ. ಈ ಪೈಕಿ 4.2 ಕೋಟಿ ಮಂದಿಗೆ ಹೈಪರ್‌ಟೆನ್ಮನ್, 2.6 ಕೋಟಿ ಮಂದಿಗೆ ಮಧುಮೇಹ, 1.18 ಕೋಟಿ ಜನರಿಗೆ ಕ್ಯಾನ್ಸ‌ರ್ ಪತ್ತೆಯಾಗಿದೆ ಎಂದೂ ಹೇಳಿದ್ದಾರೆ. ಸದ್ಯ ದೇಶದಲ್ಲಿ 372 ಡೇ ಕೇರ್ ಕ್ಯಾನ್ಸರ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!