ಮಂಗಳೂರಿನಿಂದ ಬೆಂಗಳೂರಿಗೆ 2 ಹೆಚ್ಚುವರಿ ವಿಮಾನಗಳ ಸಂಚಾರ

Picture of Savistara

Savistara

Bureau Report

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಮಾ.30ರಿಂದ ಆರಂಭವಾಗಲಿರುವ ವಿಮಾನಯಾನ ಸಂಸ್ಥೆಗಳ ಬೇಸಿಗೆ ವೇಳಾಪಟ್ಟಿಯಲ್ಲಿ ರಾಜಧಾನಿ ಬೆಂಗಳೂರಿಗೆ ಹೆಚ್ಚುವರಿ ವಿಮಾನ ಯಾನ ಸಂಪರ್ಕ ಕಲ್ಪಿಸಲಿದೆ.

ಪ್ರಸ್ತುತ ಇಂಡಿಗೋ 6 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ 2 ಸಹಿತ 8 ದೈನಂದಿನ ವಿಮಾನಗಳು ಸಂಚರಿಸುತ್ತಿದ್ದು, ಇಂಡಿಗೋದಿಂದ ಒಂದು ಹೆಚ್ಚುವರಿಯಾಗಿ ಒಟ್ಟು 9 ವಿಮಾನಗಳು ಸಂಚರಿಸಲಿವೆ. ಮಂಗಳೂರು-ಮುಂಬೈ ನಡುವೆ ಪ್ರತಿದಿನ ಮೂರು ಇಂಡಿಗೋ ಮತ್ತು ಎರಡು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳು ಸಂಚರಿಸಲಿವೆ.ಇಂಡಿಗೋ ಮತ್ತು ಏರ್’ ಇಂಡಿಯಾ ಎಕ್ಸ್‌ಪ್ರೆಸ್ ರಾಜಧಾನಿ ನವದೆಹಲಿಗೆ ತಲಾ ಒಂದು ದೈನಂದಿನ ವಿಮಾನ ಸಂಚರಿಸುತ್ತಿದೆ. ಹೈದರಾಬಾದ್‌ಗೆ ವಾರದಲ್ಲಿ ಮೂರು ದಿನ ಎರಡು ದೈನಂದಿನ ಮತ್ತು ಒಂದು ಹೆಚ್ಚುವರಿ ವಿಮಾನ ಸಂಚರಿಸುತ್ತಿದೆ. ಅಂತಾರಾಷ್ಟ್ರೀಯ ವಲಯದಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ತನ್ನ ಸಾಪ್ತಾಹಿಕ ಎರಡು ವಿಮಾನಗಳನ್ನು ಕಣ್ಣೂರು ಮೂಲಕ ಬದಲು ಮಂಗಳೂರಿನಿಂದ ನೇರವಾಗಿ ಬಹ್ಮನ್‌ಗೆ ಹಾರಾಟ ನಡೆಸಲಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ದುಬೈಗೆ ಪ್ರತಿದಿನ ಎರಡು, ಅಬುಧಾಬಿಗೆ ದೈನಂದಿನ ವಿಮಾನ, ವಾರಕ್ಕೆ ನಾಲ್ಕು ವಿಮಾನಗಳು, ದಮ್ಮಾಮ್ ಮತ್ತು ಮಸ್ಕತ್ ಗೆ ತಲಾ ನಾಲ್ಕು ವಿಮಾನಗಳು, ದೋಹಾಗೆ ಪ್ರತಿ ವಾರ ಎರಡು ವಿಮಾನಗಳು ಮತ್ತು ಜಿಡ್ಡಾ ಮತ್ತು ಕುವೈತ್ ಗೆ ಕ್ರಮವಾಗಿ ವಾರಕ್ಕೆ ಒಂದು ವಿಮಾನವನ್ನು ನಿರ್ವಹಿಸಲಿದೆ. ಇಂಡಿಗೋ 232 ಆಸನಗಳ ಎರ್‌ಬಸ್ ಎ -321 ನಿಯೋ ವಿಮಾನವನ್ನು ಈ ಪ್ರಮುಖ ವಲಯದಲ್ಲಿ ನಿಯೋಜಿಸುವುದರಿಂದ ಅಬುಧಾಬಿಗೆ ತನ್ನ ದೈನಂದಿನ ಹಾರಾಟದೊಂದಿಗೆ ಆಸನಗಳ ಸಾಮರ್ಥ್ಯವನ್ನು ಹೆಚ್ಚಿಸಲಿದೆ.ಅಂತೆಯೇ, ಇಂಡಿಗೋ ದುಬೈಗೆ ವಾರಕ್ಕೆ ನಾಲ್ಕು ಹಾರಾಟವನ್ನು ಮುಂದುವರಿಸಲಿದೆ. ಬೇಸಿಗೆ ವೇಳಾಪಟ್ಟಿ 2025 ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ಮತ್ತು ಮಂಗಳೂರು ಮತ್ತು ಪ್ರಮುಖ ಸ್ಥಳಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!